ಬೆಂಗಳೂರು –
ದಸರಾ ರಜಾ ಯಾವಾಗ ಅಂತ ಕಾಯುತ್ತಿರುವ ಮಕ್ಕಳಿಗೆ ಸೆಪ್ಟೆಂಬರ್ ತಿಂಗಳ ಕ್ಯಾಲೆಂಡರ್ ಖುಷಿ ಸುದ್ದಿ ಕೊಟ್ಟಿದೆ.ಹೌದು ಭಾನುವಾರ ರಜಾದಿನ ಗಳು ಸೆಕೆಂಡ್ ಸ್ಯಾಟರ್ಡೆ, ಹಬ್ಬ ಹರಿದಿನ ಇದೆಲ್ಲಾ ಸೇರಿ ಶಾಲಾ ಮಕ್ಕಳಿಗೆ ಒಟ್ಟು 8 ದಿನ ರಜೆಯ ಜಾಕ್ ಪಾಟ್ ಸಿಕ್ಕಿದೆ.
ಮುಂದಿನ ತಿಂಗಳ ಯಾವೆಲ್ಲ ದಿನಗಳು ರಜೆ ಅಂತ ನೋಡಿದ್ರೆ ಸೆಪ್ಟೆಂಬರ್ ಮೊದಲ ದಿನವೇ ಭಾನುವಾರ. ಹೀಗಾಗಿ ಸೆಪ್ಟೆಂಬರ್ 1 ರಾಜ ದಿನ. ಸೆಪ್ಟೆಂಬರ್ 7 ಗಣೇಶ ಚತುರ್ಥಿತ ಪ್ರಯುಕ್ತ ಸರ್ಕಾರಿ ರಜೆಯಿದೆ ಜೊತೆಗೆ ಶನಿವಾರದಂದೇ ಹಬ್ಬ ಬಂದಿದೆ.ಹೀಗಾಗಿ ಹಬ್ಬದ ದಿನ ಭಾನುವಾರ, ಶಾಲೆಗಳಿಗೆ ಸಹಜವಾಗಿಯೇ ರಜೆಯಿರುತ್ತೆ. ಅಲ್ಲಿಗೆ ತಿಂಗಳ ಮೊದಲ ಶನಿವಾರ ಮತ್ತು ಭಾನುವಾರ ರಜೆಯ ಮಜ.
ಇನ್ನೂ ಸೆಪ್ಟೆಂಬರ್ 14ನೇ ತಾರೀಖು ತಿಂಗಳ ಎರಡನೇ ಶನಿವಾರ. ಕೆಲವು ಶಾಲೆಗಳಲ್ಲಿ ಈ ದಿನವೂ ರಜೆಯ ದಿನವೇ. ಇನ್ನು 15ರಂದು ಮತ್ತೆ ಭಾನುವಾರದ ರಜೆ. ಅಲ್ಲಿಗೆ ಎರಡನೇ ವಾರವೂ ಜೋಡಿ ರಜೆ ಸಿಕ್ಕಂತಾಯ್ತು.ಅಷ್ಟಕ್ಕೇ ಮುಗಿಯೋ ದಿಲ್ಲ.16ನೇ ತಾರೀಖು ಈದ್ ಮಿಲಾದ್ ಪ್ರಯುಕ್ತ ಸರ್ಕಾರಿ ರಜೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ 3 ದಿನ ರಜೆ ಸಿಕ್ಕಂತಾಯ್ತು.
ಇನ್ನುಳಿದಂತೆ 22ನೇ ತಾರೀಕು ಮೂರನೇ ಭಾನುವಾರ, 29ನೇ ತಾರೀಕು ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರ. ಹೀಗಾಗಿ ಎಲ್ಲಾ ರಜೆ ಗಳನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿದ್ರೆ ಸೆಪ್ಟೆಂಬರ್ ತಿಂಗಳಲ್ಲಿ ಮಕ್ಕಳಿಗೆ 8 ದಿನ ರಜೆಯ ಬಂಪರ್ ಸಿಕ್ಕಂತಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..