ಹುಬ್ಬಳ್ಳಿ –
ಎತ್ತು ಚಕ್ಕಡಿಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಿ ರಾಜ್ಯಕ್ಕೆ ಮಾದರಿಯಾದ ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆ – ಇನ್ಸ್ಪೆಕರ್ ರಾಘವೇಂದ್ರ ಹಳ್ಳೂರ ನೇತ್ರತ್ವದಲ್ಲಿ ನಡೆಯಿತು ವಿಶೇಷವಾದ ವಿಸರ್ಜನೆ….. ಠಾಣೆಯ ಸಿಬ್ಬಂದಿಗಳಿಗೆ ಸಾಕ್ಷಿಯಾದ್ರು ಹಿಂದೂ ಮುಸ್ಲಿಂ ಬಾಂಧವರು……
ಸದಾ ಒಂದಿಲ್ಲೊಂದು ವಿಶೇಷ ಕಾರ್ಯಗಳ ಮೂಲಕ ಸುದ್ದಿಯಾಗುತ್ತಿರುವ ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆ ಈಗ ಮತ್ತೊಂದು ವಿಶೇಷವಾದ ಕಾರ್ಯದ ಮೂಲಕ ಸುದ್ದಿಯಾಗಿದೆ.ಹೌದು ಸಾಮಾನ್ಯವಾಗಿ ಪ್ರತಿಷ್ಠಾಪನೆಗೊಂಡಿರುವ ಗಣೇಶನನ್ನು ವಿಸರ್ಜನೆ ಮಾಡುವಾಗ ಒಂದು ಕಡೆ ಡಿಜೆ ಸದ್ದು ಮತ್ತೊಂದೆಡೆ ಪಟಾಕಿಯ ಸದ್ದು ಇದರ ನಡುವೆ ಕುಣಿಯುತ್ತಾ ವಿಸರ್ಜನೆ ಮಾಡೊದನ್ನು ಕೇಳಿದ್ದೇವೆ ನೋಡಿದ್ದೇವೆ
ಆದರೆ ಹುಬ್ಬಳ್ಳಿಯ ಈ ಕಸಬಾ ಪೊಲೀಸ್ ಠಾಣೆ ಯವರು ಗಣೇಶನನ್ನು ವಿಶೇಷವಾಗಿ ವಿಸರ್ಜನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.ಹೌದು ಯಾವುದೇ ಸೌಂಡ್,ಪಟಾಕಿ ವಾಹನ ಇಲ್ಲದೇ ಕಚೇರಿಯ ಸಿಬ್ಬಂದ್ದಿಗಳೆಲ್ಲರೂ ಸೇರಿಕೊಂಡು ಎತ್ತು ಚಕ್ಕಡಿಯಲ್ಲಿ ಠಾಣೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನನ್ನು ವಿಸರ್ಜನೆ ಮಾಡಿದ್ದಾರೆ.ಬಿಡುವಿಲ್ಲದ ಕರ್ತವ್ಯದ ನಡುವೆಯೂ ಕೂಡಾ ಠಾಣೆಯ ಇನ್ಸ್ಪೆಕರ್ ರಾಘವೇಂದ್ರ ಹಳ್ಳೂರು,ಪಿಎಸ್ಐ ವಿಶ್ವನಾಥ ಆಲಮಟ್ಟಿ,ಚಂದ್ರಶೇಖರ ರೆಡ್ಡಿ ನೇತ್ರತ್ವದಲ್ಲಿ ಗಣೇಶನನ್ನು ಠಾಣೆಯಲ್ಲಿ ಐದು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿ ಅನ್ನ ಪಸಾದವನ್ನು ಕೂಡಾ ಮಾಡಲಾಯಿತು.
ಠಾಣೆಯ ಸಿಬ್ಬಂದಿಗಳೆಲ್ಲರೂ ಹಬ್ಬದಂತೆ ಠಾಣೆಯಲ್ಲಿ ಸಾಮೂಹಿಕವಾಗಿ ಸೇರಿಕೊಂಡು ಗಣಪತಿ ಹಬ್ಬವನ್ನು ಮಾಡಿ ಕುಟುಂಬ ಸಮೇತರಾಗಿ ಅನ್ನ ಪ್ರಸಾದವನ್ನು ಮಾಡಿ ಕೊನೆಗೆ ಐದನೇಯ ದಿನ ಗಣೇಶನನ್ನು ವಿಸರ್ಜನೆ ಮಾಡಲಾಯಿತು ಎತ್ತು ಚಕ್ಕಡಿಗೆ ವಿಶೇಷ ವಾದ ಅಲಂಕಾರವನ್ನು ಮಾಡಿ ಇದರಲ್ಲಿಯೇ ಗಣೇಶ ನನ್ನು ಕೂಡಿಸಿ ಮೆರವಣಿಗೆ ಮೂಲಕ ಜಂಗ್ಲಿಪೇಟದಲ್ಲಿ ರುವ ಬಾವಿಯಲ್ಲಿ ವಿಸರ್ಜನೆಯನ್ನು ಮಾಡಲಾಯಿತು.
ಯಾವುದೇ ಸದ್ದು ಗದ್ದಲವಿಲ್ಲದೇ ಠಾಣೆಯ ಇನಸ್ಪೇಕ್ಟರ್ ರಾಘವೇಂದ್ರ ಹಳ್ಳೂರ ನೇತ್ರತ್ವದಲ್ಲಿ ಈ ಒಂದು ವಿಸರ್ಜನೆ ನಡೆಯಿತು.ಈ ಒಂದು ಸಂದರ್ಭ ದಲ್ಲಿ ಠಾಣೆಯ ಪಿಎಸ್ಐ ಅಧಿಕಾರಿಗಳಾದ ವಿಶ್ವನಾಥ ಆಲಮಟ್ಟಿ,ಚಂದ್ರಶೇಖರ ರೆಡ್ಡಿ ಸೇರಿದಂತೆ ಠಾಣೆಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದು ಮೆರವಣಿಗೆಗೆ ರಂಗು ತುಂಬಿದರು ಠಾಣೆಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳಿಗೆ ಜಂಗ್ಲೀಪೇಟ,ಮತ್ತು ಬಾಂತಿಕಟ್ಟೆಯ ಹಿಂದೂ ಮತ್ತು ಮುಸ್ಲಿಂ ಬಾಂಧವರು ಕೂಡಾ ಪಾಲ್ಗೊಂಡು ನಾವೆಲ್ಲರೂ ಒಂದು ಎಂಬ ಸಂದೇಶವನ್ನು ಸಾರಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……