This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಕುಮಾರೇಶ್ವರ ನಗರ ರಸ್ತೆ ತಡೆಹಾಕಲು ತಿಂಗಳ ಗಡುವು ನೀಡಿದ ನಿವಾಸಿಗಳು – ಸ್ಥಳಕ್ಕೇ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದ ಸಂಚಾರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್  ಶ್ರೀನಿವಾಸ ಮೇಟಿ ಆಂಡ್ ಟೀಮ್….. ನಿವಾಸಿಗಳಿಗೆ ತುರ್ತಾಗಿ ಸ್ಪಂದಿಸಿ ಬ್ಯಾರಿಕೇಡ್ ಅಳವಡಿಸಿದ ಸಂಚಾರಿ ಪೊಲೀಸರು……

WhatsApp Group Join Now
Telegram Group Join Now

ಧಾರವಾಡ ಬೆಳಗಾವಿ ರಸ್ತೆಯಲ್ಲಿರುವ ಕುಮಾರೇಶ್ವರ ನಗರ ಸರ್ಕಲ್ ನ ಮುಖ್ಯರಸ್ತೆಗೆ ರಸ್ತೆ ತಡೆ ಗಳನ್ನು ಹಾಕುವಂತೆ ಈ ಹಿಂದೆ ಬೇಡಿಕೆಯನ್ನು ಇಡಲಾಗಿತ್ತು ನಿವಾಸಿಗಳ ಮತ್ತು ಸಾರ್ವಜನಿಕರ ಬೇಡಿಕೆಗೆ ಒಪ್ಪಿಕೊಂಡಿದ್ದ ಅಧಿಕಾರಿಗಳು ಸುಮ್ಮನಾಗಿದ್ದರು ಹೀಗಾಗಿ ಪದೇ ಪದೇ ಈ ಒಂದು ರಸ್ತೆಯನ್ನು ದಾಟುವುದು ತುಂಬಾ ಕಷ್ಟಕರವಾಗಿತ್ತು ಹೀಗಾಗಿ ಮೇಲಿಂದ ಮೇಲೆ ವೇಗವಾಗಿ ಬರುತ್ತಿರುವ ವಾಹನಗಳಿಂದ ನಿವಾಸಿಗಳಿಗೆ ಮತ್ತು ಅದರಲ್ಲೂ ವಾಹನಗಳನ್ನು ದಾಟಿಸೊದು ತುಂಬಾ ಕಷ್ಟಕರವಾಗಿತ್ತು

ಇದರಿಂದಾಗಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚುತ್ತಲೆ ಇರುವುದರಿಂದ ಆಕ್ರೋಶಗೊಂಡ ನಿವಾಸಿಗಳು ಮುಖ್ಯರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆಯನ್ನು ಮಾಡಿದರು.ನಿವಾಸಿಗಳೆಲ್ಲರೂ ಮತ್ತು ಸಾರ್ವಜನಿಕರು ಈ ಒಂದು ಹೋರಾಟದಲ್ಲಿ ಪಾಲ್ಗೊಂಡು ಕೆಲ ಸಮಯಗಳ ಕಾಲ ಮುಖ್ಯರಸ್ತೆಯ ಸಂಚಾರವನ್ನು ಬಂದ್ ಮಾಡಿ ಪ್ರತಿಭಟನೆಯನ್ನು ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಮುಖ್ಯ ರಸ್ತೆಯನ್ನು ಬಂದ್ ಮಾಡಿದ ವಿಚಾರವನ್ನು ತಿಳಿದ ಸಂಚಾರಿ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಶ್ರೀನಿವಾಸ ಮೇಟಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ನಿವಾಸಿಗಳ ಸಮಸ್ಯೆಯನ್ನು ಆಲಿಸಿದರು.

ಅಲ್ಲದೇ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ಒಂದು ತಿಂಗಳ ಒಳಗಾಗಿ ರಸ್ತೆ ತಡೆಗಳನ್ನು ಅಳವಡಿಸುವ ಭರವಸೆಯನ್ನು ನೀಡಿ ಗಡುವನ್ನು ನೀಡಿದರು.ಈ ಒಂದು ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಅನಿತಾ ಚಳಗೇರಿ,ಮಂಜುನಾಥ ಹಿರೇಮಠ,ಸಂತೋಷ ದೇವರೆಡ್ಡಿ, ಪ್ರಭು ಹಿರೇಮಠ ರಾಮಕೃಷ್ಣ ಅಗಡಿ ಜಗದೀಶ ತೋಟದ ಚನ್ನಾಳ ಜಯಶ್ರೀ ಪಾಟೀಲ ನಂದಾ ಗುಳೆದಗುಡ್ಡ

ಸುಮಂಗಲಾ ಕಿತ್ತೂರಮಠ ಸವಿತಾ ಮೇಲಿನಮನಿ ಚೈತ್ರಾ ಸಂತಿ ಸಿದ್ದು ಹೊಳೆಯಣ್ಣವರ ಅರವಿಂದ ಪಾಟಿಲ ರವಿ ಸವದತ್ತಿ ರಫಿಕ ರಾಜು ಶಹಾಪುರ ಸೇಮಶಖರ ಮಳಗಿ,ಹರೀಶ ಬಿಜಾಪೂರ ರಾಜು ಚಂದನಕರ,ಅಮಿತ ಬಸಾಪೂರ,ವಿಕ್ರಮ್ ಹೊಳೆಯನ್ನವರ,.ಬಸವರಾಜ ಕಿತ್ತೂರು,ಮಂಜು ಜವರೇಗೌಡ,

ಮಂಜುನಾಥ ಶೆಟ್ಟಿ,ಮಹೇಶ ಪವಾಡಿ, ಸಂತೋಷ ದೇವರಡ್ಡಿ,ಸುರೇಶ ಪಾಟೀಲ ಸೇರಿದಂತೆ ಕುಮಾರೇಶ್ವರ ನಗರದ ನಿವಾಸಿಗಳು ಸಾರ್ವಜನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದು ರಸ್ತೆ ತಡೆ ಹಾಕಲು ಒಂದು ತಿಂಗಳ ಗಡುವನ್ನು ನೀಡಿದರು.

ಇನ್ನೂ ಇದೇ ವೇಳೆ ನಿವಾಸಿಗಳ ಹೋರಾಟಕ್ಕೆ ತುರ್ತಾಗಿ ಸ್ಪಂದಿಸಿದ ಇಸ್ಪೇಕ್ಟರ್ ಶ್ರೀನಿವಾಸ ಮೇಟಿ ಮತ್ತು ಟೀಮ್ ಸಧ್ಯ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದಾರೆ. ಇದ ರೊಂದಿಗೆ ಸಧ್ಯ ವಾಹನಗಳು ನಿಧಾನವಾಗಿ ಹೋಗುವಂತೆ ವ್ಯವಸ್ಥೆಯನ್ನು ಮಾಡಿ ನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ……

Google News

WhatsApp Group Join Now
Telegram Group Join Now
Suddi Sante Desk