ಧಾರವಾಡ –
ಧಾರವಾಡದಲ್ಲಿ ಗಣೇಶ ವಿಸರ್ಜನೆಗಾಗಿ ಕೃತಕ ಬಾವಿಗಳ ಸಂಚಾರ – ಪರಿಸರ,ಬಾವಿಗಳ ರಕ್ಷಣೆಯೊಂದಿಗೆ ರೋಟರಿ ಕ್ಲಬ್ ಗಳಿಂದ ಮತ್ತೊಂದು ಕೊಡುಗೆ…..
ಸದಾ ಒಂದಿಲ್ಲೊಂದು ವಿಶೇಷ ಕೆಲಸ ಕಾರ್ಯಗಳ ಮೂಲಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಧಾರವಾಡದ ರೋಟರಿ ಸಂಸ್ಥೆ ಈಗ ಮತ್ತೊಂದು ಮಹತ್ವದ ಕಾರ್ಯವನ್ನು ಆರಂಭ ಮಾಡಿದೆ.ಹೌದು ಗಣಪತಿಗಳನ್ನು ಕೆರೆ, ಬಾವಿಗಳಲ್ಲಿ ವಿಸರ್ಜನೆ ಮಾಡಿದರೆ ಅವುಗಳು ಹಾಳಾಗುತ್ತವೆ ನಶಿಸಿ ಹೋಗುತ್ತವೆ ಎಂಬ ಕಾರಣ ಕ್ಕಾಗಿ ಸಧ್ಯ ರೋಟರಿ ಸಂಸ್ಥೆ ಧಾರವಾಡದಲ್ಲಿ ಕೃತಕ ಬಾವಿಗಳನ್ನು ಆರಂಭ ಮಾಡಿದೆ.
ರೋಟರಿ ಕ್ಲಬ್ ಈ ಒಂದು ವಿನೂತನ ಕಾರ್ಯ ವನ್ನು ಧಾರವಾಡದಲ್ಲಿ ಆರಂಭ ಮಾಡಿದ್ದು ಪರಿಸರ ಸ್ನೇಹಿ ಗಣಪತಿ ವಿಸರ್ಜನೆಗೆ ಅನುಕೂಲ ವಾಗಲಿ ಎಂಬ ಕಾರಣಕ್ಕಾಗಿ ಕೃತಕ ಬಾವಿಗಳನ್ನು ಧಾರವಾಡದ ಕರ್ನಾಟಕ ಕಾಲೇಜ ಆವರಣದಲ್ಲಿ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ ಕಳೆದ ಹದಿನೈದು ವರ್ಷಗಳಿಂದ ರೋಟರಿ ಕ್ಲಬ್ ಕೃತಕ ಬಾವಿ ನಿರ್ಮಾಣ ಮಾಡುವ ಮೂಲಕ ಪರಿಸರ ಸ್ನೇಹಿ ಗಣೇಶನ ವಿಸರ್ಜನೆಗೆ ಅನುವು ಮಾಡಿದೆ ಸಾರ್ವ ಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ನಮ್ಮ ನೀರಿನ ಉತ್ಖನದ ಮೂಲಗಳಾದ ಬಾವಿ ಗಳನ್ನ ರಕ್ಷಿಸುವ ಮೂಲಕ ರೋಟರಿ ಕ್ಲಬ್ ಕೊಡುಗೆ ನೀಡುತ್ತಿದ್ದು
ಶ್ಲಾಘನೀಯ ಕಾರ್ಯವೆಂದರು.ಇನ್ನೂ ಇದೇ ವೇಳೆ ಡಾ ರಾಜನ್ ದೇಶಪಾಂಡೆಯವರು ಮಾತ ನಾಡಿ ಮುಂಬರುವ ದಿನಮಾನಗಳಲ್ಲಿ ಇಂತಹ ಕೃತಕ ಬಾವಿಗಳನ್ನು ವಿವಿಧ ಬಡಾವಣೆಗಳಲ್ಲಿ ನಿರ್ಮಿಸುವ ಮೂಲಕ ಇನ್ನು ಹೆಚ್ಚಿನ ಸೇವೆ ಯನ್ನು ಮಾಡಲಾಗುತ್ತದೆ ಎಂದರು.
ಇನ್ನೂ ಈ ಮಹತ್ತರ ಕೃತಕ ಬಾವಿ ನಿರ್ಮಿಸಿ ಗಣಪತಿ ವಿಸರ್ಜನೆಗೆ ಅನುವು ಮಾಡಿದ ರೋಟರಿ ಕ್ಲಬ್ ಗೆ ಧನ್ಯವಾದಗಳು ಅರ್ಪಿಸಲಾ ಯಿತು.ಈ ಸಂದರ್ಭದಲ್ಲಿ ಮಾಜಿ ಮಹಾಪೌರರು ಈರೇಶ ಅಂಚಟಗೇರಿ,ಡಾ ರಾಜನ ದೇಶಪಾಂಡೆ, ರವಿ ದೇಶಪಾಂಡೆ ರೋಟರಿ ಕ್ಲಬ್ ಅಧ್ಯಕ್ಷ ಲಕ್ಷ್ಮಿಕಾಂತ ನಾಯಕ,ಪಲ್ಲವಿ ದೇಶಪಾಂಡೆ,
ಅಶೋಕ ರೋಟರಿ ಕ್ಲಬ್ ಪದಾದಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.ಇದೇ ವೇಳೆ ಕ್ಲಬ್ ನ ಈ ಒಂದು ಮಹಾನ್ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……