ಹುಬ್ಬಳ್ಳಿ ಧಾರವಾಡ –
ಒಂದೇ ದಿನ ಲೆಕ್ಕವಿಲ್ಲದಷ್ಟು ಕೈಕೊಟ್ಟ ಚಿಗರಿ ಬಸ್ ಗಳು ಪರದಾಡುತ್ತಿರುವ ಚಾಲಕರು – ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಚಿಗರಿ ಬಸ್ ಗಳ ಸಮಸ್ಯೆ……DC ಯವರೇ ಎಲ್ಲಿದ್ದೀರಾ……
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಸಂಚಾರವನ್ನು ಮಾಡುತ್ತಿರುವ ಚಿಗರಿ ಬಸ್ ಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ.ದಿನದಿಂದ ದಿನಕ್ಕೆ ಬಸ್ ಗಳಲ್ಲಿ ತೊಂದರೆಗಳು ಸಮಸ್ಯೆಗಳು ಹೆಚ್ಚಾಗುತ್ತಿದ್ದು ಇವತ್ತು ಒಂದೇ ದಿನ ಲೆಕ್ಕವಿಲ್ಲದಷ್ಟು ಬಸ್ ಗಳು ಬಿಡಿಯಾಗಿವೆ. ಡಿಪೋ ದಿಂದ ಹೊರಗಡೆ ಬಸ್ ಗಳು ಬರುತ್ತಿದ್ದಂತೆ ಒಂದು ಟ್ರೀಪ್ ಇಲ್ಲವೇ ಎರಡು ಟ್ರೀಪ್ ಆಗುತ್ತಿದ್ದಂತೆ ಬಸ್ ಗಳಲ್ಲಿ ತಾಂತ್ರಿಕ ಸಮಸ್ಯೆಗಳು ತೊಂದರೆಗಳು ಕಂಡು ಬರುತ್ತಿವೆ.
ನೆಮ್ಮದಿಯಿಂದ ಡೂಟಿ ಮಾಡಲಾರದಂತಹ ಪರಸ್ಥಿತಿ ಸಧ್ಯ ಹುಬ್ಬಳ್ಳಿ ಧಾರವಾಡ ಡಿಪೋ ಗಳಲ್ಲಿ ನಿರ್ಮಾಣ ವಾಗಿದೆ.ಬಸ್ ಗಳು ಆರಂಭಗೊಂಡು ಆರೇಳು ವರ್ಷಗಳಾಗಿದ್ದು ಹೀಗಾಗಿ ಸರಿಯಾದ ನಿರ್ವಹಣೆ ಸರಿಯಾದ ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಬಸ್ ಗಳಲ್ಲಿ ತೊಂದರೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಇದರಿಂದಾಗಿ ಚಾಲಕರು ಪರದಾಡುತ್ತಿದ್ದಾರೆ.
ಇನ್ನೂ ಇತ್ತ ಇದನ್ನು ಗಂಭೀರವಾಗಿ ತಗೆದುಕೊಂಡು ಬಸ್ ಗಳ ದುರಸ್ತಿಯತ್ತ ಗಮನ ಹರಿಸಬೇಕಾದ ಡಿಸಿಯವರು ಏನು ಮಾಡ್ತಾ ಇದ್ದಾರೆ ಎಲ್ಲಿ ಇದ್ದಾರೆ ಎಂಬೊದು ಕಾಣುತ್ತಿಲ್ಲ ಮಾಡಬೇಕಾದ ಕೆಲಸವನ್ನು ಮಾಡುವ ಬದಲಾಗಿ ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ ಹೀಗಾಗಿ ಬಸ್ ಗಳು ಲೆಕ್ಕವಿಲ್ಲದಷ್ಟು ಬಿಡಿಯಾಗುತ್ತಿದ್ದು ಅತ್ತ ನೆಮ್ಮದಿ ಇಲ್ಲದೇ ಚಾಲಕರು ಡೂಟಿಯನ್ನು ಮಾಡುವಂತಹ ಪರಸ್ಥಿತಿ ಸಧ್ಯ ಕಂಡು ಬರುತ್ತಿದ್ದು ನಮ್ಮ ಸಮಸ್ಯೆ ಯಾರಿಗೆ ಹೇಳೊಣಾ ಎಂಬ ಪರಸ್ಥಿತಿಯಲ್ಲಿ ಚಾಲಕರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ……