ಬೆಂಗಳೂರು –
ಬೆಂಗಳೂರು ಚಲೋ ಹೊರಟ ರಾಜ್ಯದ ನಿವೃತ್ತ ನೌಕರರು – ನಿವೃತ್ತ ನೌಕರರಿಗೂ 7ನೇ ವೇತನ ಆಯೋಗದ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಪಟ್ಟು ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ ಸಮಾವೇಶ……
ನಿವೃತ್ತ ನೌಕರರಿಗೆ 7ನೇ ವೇತನ ಆಯೋಗದ ಆರ್ಥಿಕ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿವೃತ್ತ ನೌಕರರು ಈಗ ಹೋರಾಟದ ಹಾದಿ ಹಿಡಿದಿದ್ದಾರೆ.ಹೌದು ಪ್ರಮುಖವಾಗಿ ಇತ್ತೀಚಿಗಷ್ಟೇ ರಾಜ್ಯ ಸರ್ಕಾರಿ ನೌಕರರಿಗೆ ಜಾರಿಯಾಗಿರುವ 7ನೇ ವೇತನ ಆಯೋಗದ ಈ ಒಂದು ಎಲ್ಲಾ ಸೌಲಭ್ಯಗಳನ್ನು ರಾಜ್ಯದ ನಿವೃತ್ತ ನೌಕರರಿಗೂ ವಿಸ್ತರಣೆ ಮಾಡ ಬೇಕು ಹಾಗೇ ಇತರೆ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಈ ಒಂದು ಬೆಂಗಳೂರು ಚಲೋ ವನ್ನು ಹಮ್ಮಿಕೊಂಡಿದ್ದಾರೆ.
ಈಗಾಗಲೇ ಹುಬ್ಬಳ್ಳಿಯಲ್ಲಿ ನಿವೃತ್ತ ನೌಕರರು ಹುಬ್ಬಳ್ಳಿಯಲ್ಲಿ ತುರ್ತು ಸಭೆಯನ್ನು ಮಾಡಿ ಹೋರಾಟವನ್ನು ಮಾಡುವ ತೀರ್ಮಾನವನ್ನು ಕೈಗೊಂಡಿದ್ದಾರೆ ಹೀಗಾಗಿ ಸೆಪ್ಬಂಬರ್ 18 ರಿಂದ ಬೆಂಗಳೂರು ಚಲೋ ಆರಂಭವಾಗಲಿದ್ದು ನಗರದ ಪ್ರೀಡಂ ಪಾರ್ಕ್ ನಲ್ಲಿ ಈ ಒಂದು ಪ್ರತಿಭಟನೆ ನಡೆಯಲಿದ್ದು ನಿವೃತ್ತ ಸರ್ಕಾರಿ ನೌಕರರು ದೊಡ್ಡ ಸಮಾವೇಶದ ಮೂಲಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯವನ್ನು ಮಾಡಲಿದ್ದಾರೆ
ಸಾಮಾಜಿಕ ನ್ಯಾಯ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಲೇಬೇಕು
೧ ಜುಲೈ ೨೦೨೨ ರಿಂದ ೩೧ ಜುಲೈ ೨೦೨೪ ರವರೆಗೂ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ
*ರಾಜ್ಯದ ಸಮಸ್ತ ಸರ್ಕಾರಿ ಮತ್ತು ಅರೆ ಸರ್ಕಾರಿ ನಿವೃತ್ತ ನೌಕರರಿಗೆ ೭ನೇ ವೇತನ ಆಯೋಗದಲ್ಲಿ ಆಗಿರುವ ಆರ್ಥಿಕ ನಷ್ಟ ನಿವೃತ್ತಿಯ ಉಪದಾನ, ಪರಿವರ್ತಿತ ಪಿಂಚಣಿ,ಮತ್ತು ಗಳಿಕೆ ರಜೆ ನಗದೀಕರಣ
ಇವುಗಳನ್ನು ೭ನೇ ವೇತನ ಆಯೋಗದಲ್ಲಿ ಲೆಕ್ಕ ಹಾಕದೆ ಹಿರಿಯ ಜೀವಿಗಳ ಹೊಟ್ಟೆ ಮೇಲೆ ಬರೆ ಎಳೆದು ಕಳುಹಿಸಿರುವುದು ಎಷ್ಟು ಸರಿ ಇದನ್ನು ರಾಜ್ಯ ಮಟ್ಟದಲ್ಲಿ ಸಮಾಲೋಚಿ ಸಲು ಪ್ರತಿಭಟಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ರಾಜ್ಯ ಸಂಚಾಲಕರು, ಜಿಲ್ಲಾ ಸಂಚಾಲಕರು, ತಾಲ್ಲೂಕು ಸಂಚಾಲಕರು ಈ ಅವಧಿಯಲ್ಲಿ ನಿವೃತ್ತಿಯಾದವರನ್ನು ಗುರುತಿಸಿ ಸಂಘಟನೆ ಮಾಡಬೇಕು
ತಾಲೂಕ, ಜಿಲ್ಲಾ, ವಿಭಾಗ ಮಟ್ಟದಲ್ಲಿ ಸಮಾ ಲೋಚನಾ ಸಭೆಗಳನ್ನು ಮಾಡಿ, ರಾಜ್ಯ ಮಟ್ಟದ ಸಮಾಲೋಚನಾ ಸಭೆಗೆ ಹಾಜರಾ ಗಲು ಸಿದ್ದವಾಗುತ್ತಿರುವುದು ಸಂಘಟನೆಯ ಪ್ರಾಮಾಣಿಕ ಸಮರ್ಥ ಕ್ರಿಯಾಶೀಲ ಶಕ್ತಿ ಯಾಗಿದೆ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಯು ಯಾವ ಸಂಘಟನೆಯ ಸರ್ಕಾರದ ವಿರುದ್ಧವಾಗಿ ಅಲ್ಲ ರಾಜ್ಯ ನಾಯಕರು ಈ ವೇದಿಕೆಯ ಬೇಡಿಕೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ನಮ್ಮ ವೇದಿಕೆಯ ಜೊತೆಗೂಡಿ ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಮುಖ್ಯ ಮಂತ್ರಿ ಗಳು ಸಂಪುಟ ಸಭೆಗೆ ತಂದು ಆರ್ಥಿಕ ತಜ್ಞ ರಿಂದ ಲೆಕ್ಕ ಹಾಕಿಸಲು ಪ್ರಯತ್ನಿಸಿ ಬಜೆಟ್ ನ್ನು ಅಂಗಿಕರಿಸಬೇಕು
30-40 ವರ್ಷಗಳ ಕಾಲ ಸರ್ಕಾರಕ್ಕೆ ಆಹೋ ರಾತ್ರಿ ಕರ್ತವ್ಯವೇ ದೇವರು ಎಂದು ತಿಳಿದು ಕೆಲಸ ನಿರ್ವಹಿಸಿದ್ದೇವೆ ಸರ್ಕಾರ ರೂಪಿಸಿದ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಅಭಿವೃದ್ಧಿಗೊಳಿಸಿ, ರಾಜ್ಯದ ಕಡೆ ಇಡೀ ದೇಶ ನೋಡುವ ಹಾಗೆ ಮಾಡಿದ ಹಿರಿಯ ಜೀವಿಗಳಿಗೆ ಹೀಗೆ ಮಾಡು ವುದು ಸರಿಯಲ್ಲ ಎಂಬ ಮಾತುಗಳು ಎಲ್ಲಾ ರಾಜ್ಯ ನಿವೃತ್ತ ನೌಕರರಿಂದ ಕೇಳಿ ಬಂದಿವೆ
ಎಚ್ಚೆತ್ತುಕೊಂಡು ಈ ಒಂದು ಹೋರಾಟಕ್ಕೆ ಇಳಿದಿರು ವುದು ಸಮಯೋಚಿತವಾಗಿದೆ, ಸೂಕ್ತ ವಾಗಿದೆ ಒಗ್ಗಟ್ಟಿನಿಂದ ಹಕ್ಕೊತ್ತಾಯ ಪ್ರದರ್ಶಿಸಬೇಕಿದೆ ಆದ್ದರಿಂದ ರಾಜ್ಯ ನಿವೃತ್ತ ನೌಕರರ ವೇದಿಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ ದಿನಾಂಕ ೧೮.೦೯.೨೦೨೪ ರಂದು ಮುಂಜಾನೆ ೯.೩೦ ಗಂಟೆಯಿಂದ ಪ್ರಾರಂಭವಾಗುವ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಹಾಜರಾಗಿ
ನಿಮ್ಮ ಸಹಕಾರ ನೀಡಿ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಸಮಸ್ತ ನಿವೃತ್ತ ನೌಕರರು ಆಗಮಿಸಿ ಸಮಾವೇಶದ ಸಭೆ ಮುಗಿಯುವ ವರೆಗೂ ಹಾಜರಿದ್ದು ಮುಂದಿನ ಹೆಜ್ಜೆಗಳ ಬಗ್ಗೆ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗ ಳನ್ನು ನೀಡಬೇಕೆಂದು ಈ ಮೂಲಕ ವೇದಿಕೆ ಕೋರಲಾಗಿದೆ
ಏಳಿ ಎದ್ದೇಳಿ ನಮ್ಮ ಆರ್ಥಿಕ ಸೌಲಭ್ಯ ಪಡೆ ಯುವ ನ್ಯಾಯಯುತ ಗುರಿಮುಟ್ಟೋಣ ಆರ್ಥಿಕ ಸೌಲಭ್ಯ ಪಡೆಯುವುದು ನಮ್ಮ ಹಕ್ಕು
ಷಣ್ಮುಖಯ್ಯಾ ಎಂ.ಪಿ.ಎಂ ರಾಜ್ಯ ಮಹಾ ಪ್ರಧಾನ ಸಂಚಾಲಕರು.ಗುರು ತಿಗಡಿ ರಾಜ್ಯ ಸಂಚಾಲಕರು.ಅಶೋಕ ಸಜ್ಜನ ರಾಜ್ಯ ಸಂಚಾಲಕರು,ಶೇಖರಪ್ಪ ಬಿಸೇರೊಟ್ಟಿ ರಾಜ್ಯ ಸಂಚಾಲಕರು,ಶಂಕ್ರಯ್ಯ ಸುಬ್ಬಾಪೂರಮಠ ರಾಜ್ಯ ಸಂಚಾಲಕರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……