ಧಾರವಾಡ –
ತಾಯಿಗೆ ಆಪರೇಶನ್ ಇದೆ ರಜೆ ಕೊಡಿ ಎಂದರು ಕಣ್ತೇರೆಯದ BRTS ಅಧಿಕಾರಿಗಳು – ಚಾಲಕರ ನೋವಿಗೆ ಸ್ಪಂದಿಸದ ಅಧಿಕಾರಿಗಳು…..ಕರುಣೆಯಿಲ್ಲದೇ ಆ ತ್ರಿಮೂರ್ತಿ ಅಧಿಕಾರಿಗಳು
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿರುವ ಚಿಗರಿ ಬಸ್ ನಲ್ಲಿ ಅಧಿಕಾರಿಗಳು ಮಾಡುತ್ತಿರುವ ಎಡವಟ್ಟುಗಳ ಪಟ್ಟಿ ಬೆಳೆಯುತ್ತಲೆ ಇದೆ.ಇಲಾಖೆಗೆ ಈಗಷ್ಟೇ ಡಿಸಿಯಾಗಿ ಸಿದ್ದಲಿಂಗಯ್ಯ ಅವರು ಬಂದ ಮೇಲಂತೂ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗಳು ಕಂಡು ಬರುತ್ತಿದ್ದು ಇವುಗಳು ಇನ್ನೂ ಕಡಿಮೆಯಾಗುತ್ತಿಲ್ಲ.ಸಧ್ಯ ಏನು ಇಲ್ಲ ಸೌಲಭ್ಯಗಳ ನಡುವೆಯೂ ಕೂಡಾ ಚಾಲಕರು ಕರ್ತವ್ಯವನ್ನು ಮಾಡುತ್ತಿದ್ದು
ಇದರ ನಡುವೆ ಡ್ರೈವರ್ ಗಳಿಗೆ ಅನಾರೋಗ್ಯವಾದರೆ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಂಡು ಬಂದರೆ ಮಾನವೀಯತೆಯಿಂದ ಆಸ್ಪತ್ರೆಗೆ ಕಳುಹಿಸದ ಅಧಿಕಾರಿಗಳು ಯಾವುದನ್ನು ನೋಡದೆ ಡೂಟಿ ಡೂಟಿ ಎನ್ನುತ್ತಾ ಚಾಲಕರಿಗೆ ಕಿರಿಕಿರಿಯ ನಡುವೆ ಡೂಟಿ ಮಾಡಿಸುತ್ತಿದ್ದಾರೆ ಇದಕ್ಕೆ ಮತ್ತೊಂದು ಸಾಕ್ಷಿ ಧಾರವಾಡ ಡಿಪೋ ದಲ್ಲಿ 100 ಡೂಟಿ ಮಾಡುವ ಜನರಲ್ ವಿಭಾಗದ ಚಾಲಕರೊಬ್ಬರು ಸರ್ ನಮ್ಮ ತಾಯಿಯ ವರಿಗೆ ನಾಳೆ ಆಪರೇಶನ್ ಇದೆ ಒಂದಿಷ್ಟು ಅನುಕೂಲ ಮಾಡಿಕೊಡಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ ಅಲ್ಲದೇ ಹೇಳಿದ್ದಾರೆ ಏನು ಕೇಳದ ಇಲಾಖೆಯ ಅಧಿಕಾರಿಗಳು ಮಾನವೀಯತೆ ಇಲ್ಲದಂತೆ ಚಾಲಕನಿಗೆ ರಜೆಯನ್ನು ನೀಡದೆ ಡೂಟಿ ಹಚ್ಚಿದ್ದಾರೆ
ಹೆತ್ತು ಹೊತ್ತು ಬೆಳೆಸಿದ ತಾಯಿಗೆ ಕಣ್ಣೀನ ಆಪರೇಶನ್ ಇದೆ ಆಸ್ಪತ್ರೆಗೆ ಹೊಗಬೇಕು ಎಂದುಕೊಂಡಿದ್ದ ಆ ಚಾಲಕ ಒಲ್ಲದ ಮನಸ್ಸಿನಿಂದ ಡೂಟಿ ಮಾಡುತ್ತಿದ್ದು ಪರಿ ಪರಿಪರಿಯಾಗಿ ಕೇಳಿಕೊಂಡರು ಡೂಟಿ ಹಾಕುವ ಅಧಿಕಾರಿಗಳ ಮನಸ್ಸು ಮಾತ್ರ ಕರಗಲಿಲ್ಲ.ಇನ್ನೂ ಇತ್ತ ಹುಬ್ಬಳ್ಳಿ ಡಿಪೋ ದಲ್ಲಿ ಇಂತಹ ಉದಾಹರಣೆ ನಡೆದಿದ್ದು ಸಿಕ್ಕಾಪಟ್ಟಿ ಜ್ವರ ಬಂದಿದ್ದರು ಕೂಡಾ ಚಾಲಕರೊಬ್ಬರಿಗೆ ರಜೆಯನ್ನು ನೀಡಲಿಲ್ಲ
ಹೀಗಾಗಿ ಅನಾರೋಗ್ಯದಲ್ಲಿಯೇ ಇಬ್ಬರು ಚಾಲಕರು ಡೂಟಿ ಮಾಡಿದ್ದು ಕಂಡು ಬಂದಿದೆ.ಇನ್ನೂ ಒಂದು ದಿನವೂ ಡೂಟಿ ತಪ್ಪಿಸದೇ ಬೆಳಗಿನ ಜಾವ ಎದ್ದು ಕೊಂಡು ಬಂದು ಡೂಟಿ ಮಾಡುವ ಚಾಲಕರಿಗೆ ಸಮಸ್ಯೆ ಇದ್ದಾಗ ಅನುಕೂಲ ಮಾಡದಿರುವ ಅಧಿಕಾರಿಗಳ ಅಧಿಕಾರ ಹೇಗಿದೆ ನೋಡಿ ಡಿಸಿಯವರೇ ಜೀವಕ್ಕಾ ದರೂ ಬೆಲೆ ಕೊಡಿ ಸಮಸ್ಯೆ ಏನು ಎಂಬೊದನ್ನು ತಿಳಿದುಕೊಳ್ಳಿ ಡ್ರೈವರ್ ಗಳ ಸಂಕಷ್ಟ ಸಮಸ್ಯೆಗೆ ಸ್ಪಂದಿಸಿ ಅದೇ ನಿಜವಾದ ಆಡಳಿತ ವ್ಯವಸ್ಥೆ ಈ ಒಂದು ನಿರೀಕ್ಷೆಯಲ್ಲಿ ಚಾಲಕರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……