ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ – ವೇತನ,ರಜೆ ಬಾಕಿ ಸೇರಿ ವಿವಿಧ ಸೌಲಭ್ಯಗಳ ಕುರಿತಂತೆ ಮಹತ್ವದ ಮಾಹಿತಿ ರಾಜ್ಯ ಸರ್ಕಾರಿ ನೌಕರರಿಗೆ
ರಾಜ್ಯ ಸರ್ಕಾರಿ ನೌಕರರಿಗೆ ವೇತನ ಚೀಟಿ,ರಜೆ ಬಾಕಿ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತಂತೆ ರಾಜ್ಯ ಸರ್ಕಾರವು ನೌಕರರಿಗೆ ಮಹತ್ವದ ಮಾಹಿತಿ ಯೊಂದಿಗೆ ಮಹತ್ವದ ಆದೇಶವನ್ನು ಮಾಡಿದೆ. ಹೌದು ಎಲ್ಲಾ ಅಧಿಕಾರಿ ನೌಕರರು ಕಡ್ಡಾಯವಾಗಿ ಹೆಚ್‌ಆರ್‌ಎಂಎಸ್‌ನ ನೌಕರರ ಸ್ವಯಂ ಸೇವೆ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಸುತ್ತೋಲೆ ಯನ್ನು ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲು ಹೆಚ್‌ಆರ್ ಎಂಎಸ್ ನಿರ್ದೇಶನಾಲಯವು ನೌಕರರ ಸ್ವಯಂ ಸೇವೆ ಪೋರ್ಟಲ್ ನ್ನು ಸಿದ್ಧಪ ಡಿಸಿದೆ.ಸದರಿ ಪೋರ್ಟಲ್ ಬಳಕೆದಾರರ ಸ್ನೇಹಿ ಯಾಗಿದ್ದು ಈ ಕೆಳಕಂಡಂತೆ ಹಲವು ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ವೇತನ ಚೀಟಿ (Pay Slip) ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮೂಲಕ ನೋಂದಣಿ ಯಾಗಿ ನೇರವಾಗಿ ತಮ್ಮ ವೇತನ ಚೀಟಿಯನ್ನು ಅನ್ನು ಪಡೆಯಬಹುದು.ರಜೆ ಬಾಕಿ ನೌಕರರು ತಮ್ಮ ರಜೆ ಬಾಕಿಯನ್ನು ವೀಕ್ಷಿಸಬಹುದು.ಸಾಲ ಮುಂಗಡ ನೌಕರರು ಸಾಲ ಮುಂಗಡದ ವಿವರ ಗಳನ್ನು ವೀಕ್ಷಿಸಬಹುದು.ಕಡಿತದ ವಿವರಗಳು ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ ಕೆಜಿಐಡಿ,ಸಾಮಾನ್ಯ ಭವಿಷ್ಯ ನಿಧಿ,ಎನ್‌ಪಿಎಸ್, ಮುಂತಾದವುಗಳನ್ನು ವೀಕ್ಷಿಸಬಹುದು.
ವಿಮೆ ನೌಕರರು ತಮ್ಮ ವಿಮೆಗಳಾದ ಕೆಜಿಐಡಿ, ಜಿಪಿಎಪ್ ಮುಂತಾದ ವಿವರಗಳನ್ನು ಸಹ ವೀಕ್ಷಿಸ ಬಹುದು.ಇ-ಸೇವಾ ಪುಸ್ತಕ ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ ಯಲ್ಲಿ ಅಪ್‌ಲೋಡ್ ಮಾಡಿ ಪಬ್ಲಿಷ್ ಮಾಡಿದ ಇ-ಸೇವಾ ಪುಸ್ತಕವನ್ನು ಈ ಪರದೆಯಲ್ಲಿ ವೀಕ್ಷಿಸಬ ಹುದು.ಹೆಚ್‌ಆರ್‌ಎಂಎಸ್ ಟಿಕೆಟ್ ನೌಕರರು ಹೆಚ್‌ಆರ್‌ಎಂಎಸ್‌ನಲ್ಲಿ ಸೃಜಿಸಿದ ಟಿಕೇಟ್‌ನ ವಿವರಗಳನ್ನು ವೀಕ್ಷಿಸಬಹುದು.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ)ಪಿ ಎಂ ಜೆ ಜೆ ಬಿ ವೈ ಮತ್ತು ಪಿ ಎಂ ಎಸ್ ಬಿ ವೈ ಯೋಜನೆಗಳಲ್ಲಿ ಸಿಬ್ಬಂದಿಗಳು ನೋಂದಣಿಯಾದ ವಿವರಗಳನ್ನು ವೀಕ್ಷಿಸಬಹುದು ಹಾಗೂ ಮುದ್ರಿಸಬಹುದು. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ)
ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದು ಕೊಳ್ಳುವುದು ಹಾಗು ಇಎಸ್‌ಎಸ್ ಪೋರ್ಟಲ್ ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ.ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್‌ಡೇಟ್ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪಯೋಗವನ್ನು ಸಿಬ್ಬಂದಿಗಳು ಹಾಗೂ ಅವರ ಕುಟುಂಬವು ಪಡೆಯಬಹುದು.
ಕೆಜಿಐಡಿ ವಿಮಾ ಪತ್ರಗಳ ಪರಿಶೀಲನೆ ಮಾಡು ವುದು.ಈ ಪರದೆಯಲ್ಲಿ ಸಿಬ್ಬಂದಿಗಳು ತಮ್ಮ ಕೆಜಿಐಡಿ ವಿಮಾ ಪತ್ರಗಳ ಹೆಚ್‌ಆರ್‌ಎಂಎಸ್ ನಲ್ಲಿನ ಮಾಹಿತಿ ಹಾಗೂ ಕೆಜಿಐಡಿಯಲ್ಲಿನ ಮಾಹಿತಿಯನ್ನು ವೀಕ್ಷಿಸಬಹುದು.
ಸಿಬ್ಬಂದಿಗಳು ಎರಡು ಅಂಕಣಗಳನ್ನು ಪರಿಶೀಲಿಸಿ ತಾಳ ಮಾಡಿ ಸರಿಯಾಗಿದ್ದಲ್ಲಿ ಸರಿಯಾಗಿ ಕಂಡು ಬಂದಿದೆ ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಉಳಿಸಬೇಕು.ಒಂದು ವೇಳೆ ಯಾವುದಾದರೂ ವಿಮಾ ಮಾಹಿತಿಯು ತಪ್ಪಾಗಿ ದ್ದಲ್ಲಿ ಅದನ್ನು ಸೂಚಿಸಬಹುದಾಗಿದೆ.ಅದಲ್ಲದೇ ಯಾವುದಾದರೂ ವಿಮಾ ವಿವರಗಳು ಬಿಟ್ಟು ಹೋದಲ್ಲಿ ಅದನ್ನು ಸೇರಿಸಬಹುದು.
ಕೊನೆಯದಾಗಿ ಎಲ್ಲಾ ಮಾಹಿತಿಯನ್ನು ಪರಿಶೀ ಲಿಸಿದ ನಂತರ ಇ-ಸಹಿ ಯನ್ನು ಮಾಡಬೇಕು. ರಾಜ್ಯ ಸರ್ಕಾರದ ಪ್ರಮುಖ ಜಾಲತಾಣವಾದ ಕೆಜಿಐಡಿ,ಮಹಾಲೇಖಪಾಲರು-ಸಾಭನಿ, ಖಜಾನೆ-2,ಎನ್‌ಎಸ್‌ಡಿಎಲ್, ಮಹಾಲೇಖ ಪಾಲರು-ಜಿಇ,ಹೆಚ್‌ಆರ್‌ಎಂಎಸ್ ಅಪ್ಲಿಕೇಷನ್ ಗಳ ಪ್ರಮುಖ ಲಿಂಕ್‌ಗಳನ್ನು ಒದಗಿಸಲಾಗಿದೆ.
ಮುಂದುವರೆದು ಉಲ್ಲೇಖಿತ ಸರ್ಕಾರಿ ಆದೇಶ ದಲ್ಲಿ ರಾಜ್ಯ ಸರ್ಕಾರದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ,ಸಿಬ್ಬಂದಿ ವರ್ಗದವರು ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ಬರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ)ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಯೋಜನೆಗಳಡಿ ಮಾಡಿಸಿದ
ವಿಮಾ ಪಾಲಿಸಿಗಳ ಮಾಹಿತಿಯನ್ನು HRMS-ESS Login ನಲ್ಲಿ ಭರ್ತಿ ಮಾಡಲು ಸಹ ಈಗಾಗಲೇ ತಿಳಿಸಿರುತ್ತಾರೆ.ಆದುದರಿಂದ ರಾಜ್ಯ ಸರ್ಕಾರದ ಪ್ರತಿ ಸಿಬ್ಬಂದಿಗಳ ತಮ್ಮದೇ ಆದ ವೇತನ ಚೀಟಿ,ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸದುಪಯೋಗವನ್ನು ಪಡೆದುಕೊಳ್ಳಲು HRMSESS Login (https://hrmsess.karnataka.gov.in) ಪ್ರತಿ ಸಿಬ್ಬಂದಿಗಳು ESS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಸದರಿ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತ ಪಡಿಸಿಕೊಳ್ಳಲು ಈ ಮೂಲಕ ತಿಳಿಸಿದೆ.
ತಮ್ಮ ಎಲ್ಲಾ ಉದ್ಯೋಗಿಗಳು ಮೇ-2024 ರ ಮೊದಲು ಈ ಪೋರ್ಟಲ್‌ನಲ್ಲಿ ನೋಂದಾಯಿ ಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..