ಬೆಂಗಳೂರು –
2024-25ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದಲ್ಲಿ ಶಿಕ್ಷಣ ಅದಾಲತ್ ಕಾರ್ಯಕ್ರಮವನ್ನು ಏರ್ಪಡಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ ಹೌದು 2024-25ನೇ ಸಾಲಿನ ಅಕ್ಟೋಬರ್ ನಲ್ಲಿ ಈ ಒಂದು ಕುರಿತು ಶಿಕ್ಷಣ ಅದಾಲತ್ ಕಾರ್ಯಕ್ರಮ ವನ್ನು ಕಲಬುರಗಿ ವಿಭಾಗದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ಹಮ್ಮಿಕೊ ಳ್ಳಲು ಸೂಚನೆ ನೀಡಲಾಗಿದೆ.
ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ಶಿಕ್ಷಕರ ಮುಖ್ಯ. ಶಿಕ್ಷಕರ ಇಲಾಖಾ ಶಿಸ್ತು ಪ್ರಕರಣಗಳಲಿನ ವಿಳಂಬ,ಕುಂದುಕೊರತೆಗಳನ್ನು ನಿವಾರಿಸಲು ಶಿಕ್ಷಣ ಅದಾಲತ್ ನಡೆಸಿ ಶಿಕ್ಷಕರ ಶಿಸ್ತು ಪ್ರಕರಣ ಗಳು ಹಾಗೂ ಇತರೆ ಕುಂದುಕೊರತೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ
ಆಯಾ ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯ ವ್ಯಾಪ್ತಿಗೆ ಬರುವ ಉಪನಿರ್ದೇಶಕರ ಕಛೇರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಗಳಲ್ಲಿ ಬಾಕಿ ಇರುವ ಶಿಸ್ತು ಪ್ರಕರಣದ ಕಡತಗ ಳನ್ನು ನಿಯಮಾನುಸಾರ ಪರಿಶೀಲಿಸಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ
ಈ ಶಿಕ್ಷಣ ಅದಾಲತ್‌ನಲ್ಲಿ ಅಪರ ಆಯುಕ್ತರು ಖುದ್ದಾಗಿ ಹಾಜರಿದ್ದು, ಕಡತಗಳನ್ನು ವಿಲೇವಾರಿ ಮಾಡುವುದಲ್ಲದೆ ಶಿಕ್ಷಕರ,ಮುಖ್ಯ ಶಿಕ್ಷಕರ ಶಿಸ್ತು ಪ್ರಕರಣಗಳ ಬಗ್ಗೆ ಸ್ಥಳದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ತಮ್ಮ ಕಛೇರಿಯಲ್ಲಿ ಸದರಿ “ಶಿಕ್ಷಣ ಅದಾಲತ್” ಕಾರ್ಯಕ್ರಮವನ್ನು ಈ ಅವಧಿಯಲ್ಲಿ ಜಿಲ್ಲೆ ಮತ್ತು ತಾಲೂಕು ಹಂತದಲ್ಲಿ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……