This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

ಧಾರವಾಡ

ಕೃಷಿ ಮೇಳದಲ್ಲಿ ಸಾತ್ವಿಕ ಪ್ರತಿಭಟನೆ ಮಾಡಿದ ಧಾರವಾಡ ಪತ್ರಕರ್ತರು – ಕೃಷಿ ಮೇಳದಲ್ಲಿ ಮಾಧ್ಯದವರಿಗೆ ನಡೆಸಿಕೊಂಡು ರೀತಿಗೆ ಬೇಸತ್ತ ಪತ್ರಕರ್ತರು…..ಜಿಲ್ಲೆಯ ಜನಪ್ರತಿನಿಧಿಗಳೇ ಒಮ್ಮೆ ನೋಡಿ ಹೇಗಿದೆ ವ್ಯವಸ್ಥೆ……

ಕೃಷಿ ಮೇಳದಲ್ಲಿ ಸಾತ್ವಿಕ ಪ್ರತಿಭಟನೆ ಮಾಡಿದ ಧಾರವಾಡ ಪತ್ರಕರ್ತರು – ಕೃಷಿ ಮೇಳದಲ್ಲಿ ಮಾಧ್ಯದವರಿಗೆ ನಡೆಸಿಕೊಂಡು ರೀತಿಗೆ ಬೇಸತ್ತ ಪತ್ರಕರ್ತರು…..ಜಿಲ್ಲೆಯ ಜನಪ್ರತಿನಿಧಿಗಳೇ ಒಮ್ಮೆ ನೋಡಿ ಹೇಗಿದೆ ವ್ಯವಸ್ಥೆ……
WhatsApp Group Join Now
Telegram Group Join Now

ಧಾರವಾಡ

ಮನೆಯಿಂದ ಬುತ್ತಿಕಟ್ಟಿಕೊಂಡು ಬಂದು ಕೃಷಿ ವಿಶ್ವವಿದ್ಯಾಲದಲ್ಲಿ ಊಟ ಮಾಡಿ ಸ್ವಾತ್ವಿಕ ಪ್ರತಿಭಟನೆ ಮಾಡಿದ ಧಾರವಾಡ ಪತ್ರಕರ್ತರು – ಕೃಷಿ ಮೇಳದಲ್ಲಿ ಮಾಧ್ಯದವರಿಗೆ ನಡೆಸಿಕೊಂಡು ರೀತಿಗೆ ಬೇಸತ್ತ ಪತ್ರಕರ್ತರು…..ಜಿಲ್ಲೆಯ ಜನಪ್ರತಿ ನಿಧಿಗಳೇ ಒಮ್ಮೆ ನೋಡಿ ಹೇಗಿದೆ ವ್ಯವಸ್ಥೆ

ಧಾರವಾಡದ ಕೃಷಿ ಮೇಳದಲ್ಲಿ ಕೃಷಿ ವಿಶ್ವವಿದ್ಯಾಲ ಯದವರು ಪತ್ರಕರ್ತರನ್ನು ನಡೆಸಿಕೊಂಡ ರೀತಿಗೆ ಮತ್ತೊಮ್ಮೆ ಧಾರವಾಡ ಪತ್ರಕರ್ತ ಮಿತ್ರರು ಬೇಸತ್ತಿದ್ದಾರೆ.ಹೌದು ಸಾಮಾನ್ಯವಾಗಿ ಯಾವುದೇ ಸಭೆ ಸಮಾರಂಭ ಇದ್ದರೆ ಅದರಲ್ಲಿ ಮಾಧ್ಯಮದವರ ಪಾತ್ರ ಮಹತ್ವದ್ದು ಅವರು ಸಮಗ್ರವಾದ ಮಾಹಿತಿಯನ್ನು ಬಿತ್ತರಿಸಿದರೆ ಮಾತ್ರ ನಾಲ್ಕು ಜನರಿಗೆ ಗೊತ್ತಾಗುತ್ತದೆ ತಿಳಿಯುತ್ತದೆ

ಹೀಗೆ ಸಮಾಜದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರನ್ನು ಈ ಬಾರಿ ಕೃಷಿ ಮೇಳದಲ್ಲಿ ವಿಶ್ವವಿದ್ಯಾಲಯದವರು ತುಂಬಾ ಕೀಳಾಗಿ ನೋಡಿಕೊಂಡಿದ್ದಾರೆ ನಡೆಸಿಕೊಂಡಿದ್ದಾರೆ ಎಂಬೊದಕ್ಕೆ ಪತ್ರಕರ್ತರ ಆಕ್ರೋಶ ಅಸಮ ಧಾನವೇ ಕಾರಣವಾಗಿದ್ದು ಎರಡನೇ ದಿನವಾದ ಇಂದು ವೇದಿಕೆ ಕಾರ್ಯಕ್ರಮ ಸೇರಿದಂತೆ ಕೃಷಿ ಮೇಳದ ವರದಿಯನ್ನು ಮಾಡಲು ಆಗಮಿಸಿದ್ದ ಪತ್ರಕರ್ತರನ್ನು ಆಯೋಜಕರು ನಡೆಸಿಕೊಂಡ ರೀತಿಗೆ ಆಸಮಾಧಾನ ಆಕ್ರೋಶ ವ್ಯಕ್ತವಾಗಿದೆ.

ಹೌದು ಪ್ರತಿ ವರ್ಷವೂ ಒಂದಿಲ್ಲ ಒಂದು ಎಡವಟ್ಟುಗಳಿಂದ ಕಂಡು ಬರುತ್ತಿರುವ ಕೃಷಿ ಮೇಳ ಈ ಸಲ ಅನೇಕ ಅದ್ವಾನಗಳಿಗೆ ಕಾರಣ ವಾಗಿದ್ದು ಇದಕ್ಕೆ ಹಲವು ಚಿತ್ರಣಗಳು ಸಾಕ್ಷಿ ಯಾಗಿವೆ.ಇದಕ್ಕೆ ಕೃಷಿ ಮೇಳದಲ್ಲಿ ಇಂದು ಮಾಧ್ಯಮದವರನ್ನು ಕೃಷಿ ವಿವಿಯವರು ನಡೆಸಿ ಕೊಂಡ ರೀತಿಗೆ ಬೇಸರ ವ್ಯಕ್ತಪಡಿಸಿರುವ ಪತ್ರಕರ್ತರು ವಿಭಿನ್ನವಾಗಿ ಸಾತ್ನಿಕ ಪ್ರತಿಭಟನೆ ಯೊಂದಿಗೆ ತಮ್ಮ ಆಕ್ರೋಶವನ್ನು ಆಯೋಜಕರ ವಿರುದ್ದ ವ್ಯಕ್ತಪಡಿಸಿದ್ದು ಕಂಡು ಬಂದಿತು.

ಮಾಧ್ಯಮದವರು ಕೃಷಿ ಮೇಳ ಕವರೇಜ್‌ಗೆ ಬರೋದೇ ಊಟಕ್ಕಾಗಿ ಎನ್ನುವಂತಹ ವರ್ತನೆ ತೋರಿದ ಕೃಷಿ ವಿವಿ ಯವರಿಗೆ ಧಾರವಾಡ ಪತ್ರಕರ್ತರು ಖಡಕ್ ಉತ್ತರ ನೀಡಿದ್ದಾರೆ.ಕೃಷಿ ಮೇಳಕ್ಕೆ ಧಾರವಾಡದ ಮಾಧ್ಯಮದವರು ಮನೆಯಿಂದಲೇ ಬುತ್ತಿಕಟ್ಟಿಕೊಂಡು ಬಂದು ಅವರ ಊಟವನ್ನು ಬಹಿಷ್ಕಾರವನ್ನು ಮಾಡಿ ಕರ್ತವ್ಯವನ್ನು ಮುಗಿಸಿಕೊಂಡು ಸಾಮೂಹಿಕ ವಾಗಿ ಒಂದೇಡೆ ಕುಳಿತುಕೊಂಡು ಸಹಭೋಜನ ವನ್ನು ಸವಿದಿದ್ದು ಕಂಡು ಬಂದಿತು.

ಸುದ್ದಿ ಕವರೇಜ್ ನ ಕರ್ತವ್ಯ ಮುಗಿಸಿ ಕೃಷಿ ವಿವಿ ಮುಖ್ಯ ಕಚೇರಿ ಆವರಣದ ಉದ್ಯಾನದಲ್ಲಿಯೇ ಬುತ್ತಿ ಹಂಚಿಕೊಂಡು ಊಟ ಮಾಡಿ ಸಾತ್ವಿಕ ಪ್ರತಿಭಟನೆ ಮಾಡಿದ್ದು ಕಂಡು ಬಂದಿತು. ಕೃಷಿ ವಿವಿಯ ಮುಖ್ಯಸ್ಥರೇ ನಿಮ್ಮ ಗಮನಕ್ಕೆ ಇರಲಿ ಬಹುತೇಕ ಪತ್ರಕರ್ತರು ರೈತರ ಮಕ್ಕಳಾಗಿದ್ದು ರೈತಾಪಿ ಕುಟಂಬದಿಂದ ಬಂದವರಾಗಿದ್ದಾರೆ. ಅಲ್ಲದೇ ಅನೇಕರು ಇಂದಿಗೂ ಬೆಳಂ ಬೆಳಗ್ಗೆ ಮನೆಯಲ್ಲಿ ಬೇರೆ ಬೇರೆ ಕೃಷಿ ಕೆಲಸ ಮಾಡಿಯೇ ಧಾರವಾಡಕ್ಕೆ ಬರ್ತಾರೆ

ಹೀಗಿರುವಾಗ ಅನ್ನದಾತನ ಹೆಸರಿನ ಕೃಷಿ ಮೇಳದಲ್ಲಿ ಅನ್ನದಾತನ ಮಕ್ಕಳಾಗಿ ಪತ್ರಕರ್ತ ಮಿತ್ರರೇಲ್ಲರೂ ಇವತ್ತು ಮನೆ ಮನೆಗಳಿಂದ ತಂದಿರೋ ಊಟವನ್ನು ಹಂಚಿಕೊಂಡು ಊಟ ಮಾಡಿದ್ದು ವಿಶೇಷವಾಗಿ ಕಂಡು ಬಂದಿತು ಇದು ಕೃಷಿ ವಿವಿ ಯ ಆಡಳಿತ ವ್ಯವಸ್ಥೆಯನ್ನು ತೋರಿಸಿ ಕೊಟ್ಟಿತು.ಇಂತಹ ಒಂದು ಕ್ಷಣಗಳು ಒದಗಲು ಕಾರಣರಾದ ಕೃಷಿ ಮೇಳದ ಸಂಘಟಕರಿಗೆ ಧನ್ಯವಾದಗಳನ್ನು ಕೂಡಾ ಹೇಳಿದ್ದಾರೆ

ಈ ಒಂದು ವರ್ತನೆಯಿಂದ ನಮಗೆ ಸಾತ್ವಿಕ ಸಿಟ್ಟು ಬರದೇ ಇದ್ದಿದ್ದಲ್ಲಿ ಇವತ್ತು ಹೀಗೆ ಬುತ್ತಿ ಹಂಚಿ ಕೊಂಡು ಊಟ ಮಾಡುವ ಸನ್ನಿವೇಶ ಬರುತ್ತಿ ರಲಿಲ್ಲ ಹೀಗಾಗಿ ಅವರಿಗೆ ನಾವು ಧನ್ಯವಾದಗ ಳನ್ನು ಹೇಳುತ್ತೇವೆ ಎಂದು ಪತ್ರಕರ್ತರು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದು ಆಯೋಜಕರ ವಿರುದ್ದ ಅದರಲ್ಲೂ ಕುಲಪತಿಯ ವಿರುದ್ದ ಬೇಸರವನ್ನು ವ್ಯಕ್ತಪಡಿಸದ್ದಾರೆ

ಜಿಲ್ಲೆಯ ಜನಪ್ರತಿನಿಧಿಗಳೇ ಕೃಷಿ ವಿಶ್ವವಿದ್ಯಾಲ ಯದಲ್ಲಿ ಅಧಿಕಾರಿಗಳ ಕಾರ್ಯ ವೈಖರಿ ಹೇಗಿದೆ ನೋಡಿ ಇನ್ನಾದರೂ ತಾವೇ ಶ್ರೇಷ್ಠ ತಾವು ಆಡಿದ್ದೇ ಆಟ ತಾವು ಮಾಡಿದ್ದೇ ಪೈನಲ್ ಎಂದುಕೊಂಡಿ ರುವ ಕೃಷಿ ವಿಶ್ವವಿದ್ಯಾಲಯದಅಧಿಕಾರಿಗಳಿಗೆ ತಿಳಿ ಹೇಳಿ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk