ಬೈಂದೂರು –
ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಉಡುಪಿಯ ಬೈಂದೂರಿನಲ್ಲಿ NPS ನೌಕರರ ಸಂಘದಿಂದ ಪ್ರತಿಭಟನೆ ಯನ್ನು ಮಾಡಲಾಯಿತು ಹೌದು ಎನ್.ಪಿ.ಎಸ್ ಮತ್ತು ಯು.ಪಿ.ಎಸ್ ಯೋಜನೆ ವಿರೋಧಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗಾಗಿ ಎನ್.ಪಿ.ಎಸ್ ನೌಕರರ ಸಂಘದ ತಾಲ್ಲೂಕು ಘಟಕದಿಂದ ಈ ಒಂದು ಪ್ರತಿಭಟನೆ ಯನ್ನು ಮಾಡಲಾಯಿತು
ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬೈಂದೂರು ತಹಶೀಲ್ದಾರ್ ಪ್ರದೀಪ್ ಅವರ ಮೂಲಕ ಮನವಿ ನೀಡಲಾಯಿತು.ಎನ್.ಪಿ.ಎಸ್ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಜಿ, ಕಾರ್ಯದರ್ಶಿ ಉದಯ್ ಕುಮಾರ್ ಎಂ.ಪಿ, ಖಜಾಂಚಿ ರಾಜೇಶ್, ಶಿಕ್ಷಣ ಇಲಾಖೆಯ ಲೋಕೇಶ್, ಶಶಿಕಲಾ, ಗೋವಿಂದ ಎಂ, ಪ್ರೌಢಶಿಕ್ಷಣ ಇಲಾಖೆಯ ಶ್ರೀದೇವಿ, ಮಂಗಲ್ ಜ್ಯೋತಿ, ಆರ್‌ಡಿಪಿಆರ್ ಇಲಾಖೆಯ ರುಕ್ಕನ ಗೌಡ, ಆನಂದ ಪೂಜಾರಿ, ಸತೀಶ್ ತೋಳಾರ್
ಕಂದಾಯ ಇಲಾಖೆಯ ವೀರೇಶ್, ಗಣೇಶ್ ಮೇಸ್ತ, ಆರೋಗ್ಯ ಇಲಾಖೆಯ ಡಾ.ರಾಜೇಶ್, ಸಂತೋಷ್, ಗೋಪಾಲಕೃಷ್ಣ ಆಚಾರಿ, ಮೆಸ್ಕಾಂನ ವಸಂತ್, ಪೌರಾಡಳಿತ ಇಲಾಖೆಯ ಭಾಸ್ಕರ್, ವಿವಿಧ ಇಲಾಖೆಯ 250ಕ್ಕೂ ಅಧಿಕ ನೌಕರರು ಇದ್ದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ವಿಶ್ವನಾಥ್ ಪೂಜಾರಿ,ಕಾರ್ಯದರ್ಶಿ ಮನೋಹರ್, ಶಿಕ್ಷಕರ ಸಂಘದ ಕಾರ್ಯದರ್ಶಿ ಗಣಪತಿ ಹೋಬಳಿ ದಾರ್, ಶಿಕ್ಷಕರಾದ ನಾಗರತ್ನ, ವಿವಿಧ ಇಲಾಖೆಯ ಒ.ಪಿ.ಎಸ್ ನೌಕರರು ಈ ಒಂದು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿ ಸಂತೆ ನ್ಯೂಸ್ ಬೈಂದೂರು…..