ಚಿತ್ರದುರ್ಗ –
ಪೊಲೀಸ್ ಠಾಣೆಗೆ ನುಗ್ಗಿದ ನೀರು – ರಾತ್ರಿಯಿಡಿ ಪರದಾಡಿದ ಠಾಣೆಯ ಸಿಬ್ಬಂದಿ ನೀರು ಪಾಲಾದ ದಾಖಲೆಗಳು…..
ರಾಜ್ಯದಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ.ಬಿಟ್ಟು ಬಿಡಲಾರದೇ ಮಳೆ ಅಬ್ಬರಿಸುತ್ತಿದ್ದು ಧಾರಾಕಾರ ಮಳೆಗೆ ರಾಜ್ಯದ ಹಲವೆಡೆ ಹಲವು ಅವಾಂತರಗಳಾಗಿದ್ದು ಇನ್ನೂ ಇತ್ತ ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರಕ್ಕೆ ನಾಯಕನಹಟ್ಟಿ ಪೊಲೀಸ್ ಠಾಣೆಗೆ ನೀರು ನುಗ್ಗಿದೆ.
ವರುಣನ ಅಬ್ಬರ ಜೋರಾಗಿದ್ದು ಠಾಣೆಯೊಳಗೆ ಅಪಾರ ಪ್ರಮಾಣದ ನೀರು ನುಗ್ಗಿ ನಾಯಕನಕಟ್ಟೆ ಪೊಲೀಸ್ ಠಾಣೆ ಕೆರೆಯಂತಾಗಿದೆ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಾದ್ಯಂತ ಮಳೆ ಸುರಿದ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಪೊಲೀಸ್ ಠಾಣೆ ಯೊಳಗೆ ನೀರು ನುಗ್ಗಿದ ಪರಿಣಾಮ
ಕೆಲವು ದಾಖಲೆ ಗಳು ನೀರುಪಾಲಾಗಿದೆ ಅಲ್ಲದೆ ಠಾಣೆ ಒಳಗಿನ ಲಾಕಪ್, ಪಿಎಸ್ಐ ಕಚೇರಿ ಕಂಪ್ಯೂಟರ್ ರೂಮ್ ಗಳಿಗೆ ನೀರು ನುಗ್ಗಿದೆ.ಠಾಣೆಗೆ ನುಗ್ಗಿದ ಮಳೆ ನೀರು ಹೊರ ಹಾಕಲು ಪೊಲೀಸರು ಹೈರಾಣಾಗಿದ್ದು ಕಂಡು ಬಂದಿತು
ಸುದ್ದಿ ಸಂತೆ ನ್ಯೂಸ್ ಚಿತ್ರದುರ್ಗ…..