ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿ ಆದೇಶವನ್ನು ಮಾಡಿದೆ ಹೌದು 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನ ಕಡಿತ ಗೊಳಿಸ ಲಾಗಿದೆ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸಮುದಾಯ ಭವನವನ್ನು ನಿರ್ಮಿಸುವ ಉದ್ದೇಶಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಸ್ತ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು 2024ರ ನವೆಂಬರ್ ತಿಂಗಳ ವೇತನದಲ್ಲಿ ಕಟಾಯಿಸಲು ಹಾಗೂ ಕಟಾಯಿಸಲಾದ ಒಟ್ಟಾರೆ ಕ್ರೋಢೀಕೃತ ಮೊತ್ತ ವನ್ನು ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲೆ ಇವರಿಗೆ ಸಂದಾಯ ಮಾಡಲು ಈ ಕೆಳಗೆ ಸೂಚಿಸಿರುವ ಷರತ್ತು ಮತ್ತು ನಿಬಂಧನೆಗೊಳಪಟ್ಟು ಸರ್ಕಾರವು ಮಂಜೂರಾತಿ ನೀಡಿದೆ.
ನೌಕರರ ಒಂದು ದಿನದ ವೇತನ ವಂತಿಗೆಯನ್ನು 2024ರ ನವೆಂಬರ್ ತಿಂಗಳ ವೇತನದ ಬಿಲ್ಲಿನಿಂದ ಕಟಾವು ಗೊಳಿಸುವ ಮೂಲಕ ವಸೂಲಿ ಮಾಡಲು ಆಯಾ ಕಛೇರಿ ಮುಖ್ಯಾಧಿಕಾರಿಗಳು (DDO) ಮತ್ತು ಖಜಾನಾ ಧಿಕಾರಿಗಳು ಅಧಿಕಾರ ಪಡೆದಿರುತ್ತಾರೆ.ನವೆಂಬರ್ 2024ರ ತಿಂಗಳ ವೇತನದಲ್ಲಿ ಒಂದು ದಿನದ ವೇತನ ವನ್ನು ವಂತಿಗೆಯಾಗಿ ಕೊಡಲಿಚ್ಚಿಸದ ನೌಕರರು ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಬಟವಾಡೆ ಅಧಿಕಾರಿ ಗಳಿಗೆ 2ನೇ ಡಿಸೆಂಬರ್ 2024ರೊಳಗೆ ಲಿಖಿತ ಮೂಲಕ ಸಲ್ಲಿಸತಕ್ಕದ್ದು ಮತ್ತು ಅಂತಹ ನೌಕರರ ಒಂದು ದಿನದ ವೇತನವನ್ನು 2024ರ ನವೆಂಬರ್ ತಿಂಗಳಿನ ವೇತನ ಬಿಲ್ಲಿನಲ್ಲಿ ಕಟಾವು ಮಾಡತಕ್ಕದ್ದಲ್ಲ.
ವಂತಿಗೆ ರೂಪದಲ್ಲಿ ಕಟಾಯಿಸಲಾದ ಒಂದು ದಿನದ ವೇತನದ ಮೊತ್ತದ ಬಗ್ಗೆ ಸಂಬಂಧಿಸಿದ ನೌಕರರ ವೇತನ ಬಿಲ್ಲಿನಲ್ಲಿ “87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಂತಿಗೆ” ಎಂದು ಪ್ರತ್ಯೇಕ ಅಂಕಣದಲ್ಲಿ ನಮೂದಿಸತಕ್ಕದ್ದು ಮತ್ತು ಸಮಗ್ರ ವೇತನ ಬಿಲ್ಲಿನಲ್ಲಿ ಕಡಿತಗೊಳಿಸಿದ ಒಟ್ಟು ಮೊತ್ತವನ್ನು ವೇತನ ಬಿಲ್ಲಿನ ಮುಖ ಪುಟದಲ್ಲಿ “87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಂತಿಗೆ’ ಎಂಬುದಾಗಿ ಸ್ಪಷ್ಟವಾಗಿ ನಮೂದಿಸಬೇಕು.
ಜಿಲ್ಲಾ ಖಜಾನೆ ಅಧಿಕಾರಿಗಳು “ಖಜಾನೆ-2 ತಂತ್ರಾಂಶ’ ಅನುಷ್ಠಾನದ ಹಿನ್ನೆಲೆಯಲ್ಲಿ ವಂತಿಗೆ ರೂಪದಲ್ಲಿ ಕಟಾವು ಮಾಡಿದ ಹಣವನ್ನು ಸಂಬಂಧಿಸಿದ ಪ್ರಾಧಿ ಕಾರದ ಬ್ಯಾಂಕ್ ಖಾತೆಗೆ ಇ-ಪಾವತಿ ಮೂಲಕ ನೇರವಾಗಿ ಜಮೆ ಮಾಡಲು ಈ ಕೆಳಕಂಡಂತೆ ಕ್ರಮ ವಹಿಸುವುದು.ವೇತನ ಬಿಲ್ಲಿನಲ್ಲಿ ಕಟಾಯಿಸಲಾದ ಮೊತ್ತವನ್ನು ಜಿಲ್ಲಾ ಖಜಾನಾಧಿಕಾರಿಗಳು ಈ ಉದ್ದೇಶ ಕ್ಕಾಗಿ ಖಜಾನೆಯಲ್ಲಿ ಈಗಾಗಲೇ ತೆರೆದಿರುವ Deposit Account ಗೆ ಜಮೆ ಮಾಡುವುದು. ಜಮೆಯಾದ ಒಟ್ಟು ಮೊತ್ತವನ್ನು Deposit ಖಾತೆಯಿಂದ ಜಿಲ್ಲಾಧಿಕಾರಿಗಳ PD ಖಾತೆಗೆ TTR ಮೂಲಕ ಖಜಾನಾಧಿಕಾರಿಗಳು ವರ್ಗಾವಣೆ ಮಾಡುವುದು.
ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗೆ ಜಮೆ ಮಾಡಲಾದ ಮೊತ್ತವನ್ನು ಪಿ.ಡಿ. ಖಾತೆಯಿಂದ ಸಾಹಿತ್ಯ ಸಮ್ಮೇಳನದ ಪ್ರಾಧಿಕಾರದ ಅಧಿಕೃತ ಖಾತೆಗೆ ಜಮೆ ಮಾಡುವುದು. 2024ರ ನವೆಂಬರ್ ತಿಂಗಳಿನಲ್ಲಿ ಸ್ವೀಕರಿಸಲಾದ ವೇತನ ಬಿಲ್ಲುಗಳ ನಿರ್ವಹಣೆಯನ್ನು 2024ರ ಡಿಸೆಂಬರ್ 28ನೇ ದಿನಾಂಕದೊಳಗೆ ಪೂರೈಸಬೇಕು.
ಮಹಾಲೇಖಪಾಲರು ನೀಡಿದ ಅಧಿಕಾರ ಪತ್ರದ ಮೇಲೆ ತಮ್ಮ ವೇತನವನ್ನು ಖಜಾನೆಯಿಂದ ಪಡೆಯುವ ಅಧಿಕಾರಿಗಳ ಪ್ರಕರಣದಲ್ಲಿಯೂ ಸಹ ಮೇಲೆ ಕಾಣಿಸಿದ ಕ್ರಮವನ್ನು ಪಾಲಿಸುವುದು ಎಂದು ಸೂಚನೆ ನೀಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……