ಕೋಲಾರ –
ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಕೋಲಾರ ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಎರಡು ದಿನಗಳಿಂದ ತುಂತುರು ಮಳೆ ಆಗುತ್ತಿದ್ದು, ಚಳಿ ವಾತಾವರಣ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೋಮವಾರ (ಡಿ.2) ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ. ವಾತಾವರಣ ದಲ್ಲಿ ಏರುಪೇರಾಗಿರುವ ಕಾರಣ ಸೋಮವಾರ ಒಂದು ದಿನದ ಮಟ್ಟಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸ ಲಾಗಿದೆ.ಈ ರಜೆಯನ್ನು ಮುಂದಿನ ದಿನಗಳ ಯಾವು ದಾದರೂ ರಜೆಯ ದಿನ ತರಗತಿ ನಡೆಸುವ ಮೂಲಕ ಸರಿದೂಗಿಸುವಂತೆ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೋಲಾರ…..