ಬೆಂಗಳೂರು –
ರಾಜ್ಯ ಸರ್ಕಾರದಿಂದ ಸಿಹಿಸುದ್ದಿ: 7ನೇ ವೇತನ ಆಯೋಗದಂತೆ ಸಂಚಿತ ವೇತನ ಪರಿಷ್ಕರಿಸಿ ಆದೇಶ ಹೌದು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ’ಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 7ನೇ ವೇತನ ಆಯೋಗ ದಂತೆ ‘ಸಂಚಿತ ವೇತನ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರ, ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿಗಳ, ಮುಖ್ಯ ಮಂತ್ರಿಯವರ ಸಲಹಗಾರರ/ ಸಂಪುಟ ದರ್ಜೆ ಸ್ನಾನಮಾನ ಹಾಗೂ ಸಚಿವರ ಸ್ನಾನಮಾನ ಪ್ರಾಧಿಕಾರಿಗಳ ಮತ್ತು ಯೋಜನಗಳ ಅನುಷ್ಠಾನ ಪ್ರಾಧಿಕಾರದ ದಿರದ ಅಧ್ಯಕ್ಷರು / ಉಪಾಧ್ಯಕ್ಷರ ಆಪ್ತ ಶಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನನ್ನಯ ಸಂಚಿತ ವೇತನವನ್ನು ಪರಿಷ್ಕರಿಸಿ ಆದೇಶಿಸಿದೆ.
ಈ ಮೂಲಕ ಗುತ್ತಿಗೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿಯನ್ನು ನೀಡಿದೆ.ಈ ಸಂಬಂಧ ನಡಾವಳಿಯನ್ನು ಹೊರಡಿಸಿರುವಂತ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಮುಖ್ಯಮಂತ್ರಿ / ಉಪ ಮುಖ್ಯಮಂತ್ರಿ / ಸಚಿವರು / ವಿಧಾನ ಸಭೆ / ವಿಧಾನ ಪರಿಷತ್ / ಲೋಕಸಭೆ / ರಾಜ್ಯಸಭೆ ಸದಸ್ಯರ ಆಪ್ತ ಸಿಬ್ಬಂದಿ ಕಾರ್ಯಾಲಯ, ಸಚಿವರು ಸ್ನಾನಮಾನ ಪಡೆದ ಪ್ರಾಧಿಕಾರಿಗಳ ಆಪ್ತ ಇಲಾಖೆಗಳಲ್ಲಿ ಮತ್ತು ಕೆಲವು ಆಯೋಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗ ಳಿಗೆ ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರಿ ಆದೇಶದನ್ವಯ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನು ನಿಯಮಗಳು, 2018ರವ್ಯಯ ಸಂಚಿತ ವೇತನವನ್ನು ನಿಗದಿಪ ಡಿಸಲಾಗಿರುತ್ತದೆ ಎಂದಿದ್ದಾರೆ.
ಪ್ರಸ್ತುತ ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕ ನಾಗರಿಕ ಸವಗಳು (ಪರಿಷ್ಕೃತ ವೇತ್ರವು ನಿಯಮಗಳು, 2024ನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಟಿಪ್ಪಣಿಗಳಲ್ಲಿ ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯ/ಸಹಮತಿಯನ್ವಯ ಮುಖ್ಯಮಂತ್ರಿ / ಉಪ ಮುಖ್ಯಮಂತ್ರಿ ಮಾನ್ಯ ಸಚಿವರ / ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳ /
ಮುಖ್ಯಮಂತ್ರಿಯವರ ಸಲಹೆಗಾರರ / ಸಂಪುಟ ದರ್ಜೆ ಸಾನಮಾನ ಹಾಗೂ ಸಚಿವರ ಸ್ನಾನಮಾನ ಪಡೆದ ಪ್ರಾಧಿಕಾರಿಗಳ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು | ಉಪಾಧ್ಯಕ್ಷರುಗಳ ಆಪ್ತ ಶಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿ ರುವ ಸಿಬ್ಬಂದಿಗಳಿಗೆ ಕರ್ನಾಟಕ ನಾಗರಿಕ ಸೇವೆಗಳು
(ಪರಿಷ್ಕೃತ ವೇತನ) ನಿಯಮಗಳು, 2024ರ ಅನುಸಾರ ಸಂವಾದಿ ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಠ ವೇತನ ಹಂತವನ್ನು ದಿನಾಂಕ 01.11.2024ರಿಂದ ಜಾರಿಗೆ ಬರುವಂತ ಸಂಚಿತ ವೇತನವನ್ನಾಗಿ ಪರಿಷ್ಕರಿಸಿ ನಿಗದಿಪಡಿಸಲು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತ ಆದೇಶಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸಚಿವರ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳ / ಮುಖ್ಯಮಂತ್ರಿ ಯವರ ಸಲಹೆಗಾರರ / ಸಂವುಟ ದರ್ಜೆ ಸ್ನಾನಮಾನ ಹಾಗೂ ಸಚಿವರ ಸ್ಥಾನಮಾನ ಪಡೆದ ಪ್ರಾಧಿಕಾರಿಗಳ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು
ಉಪಾಧ್ಯಕ್ಷರುಗಳ ಆಪ್ತ ಶಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಂಚಿತ ವೇಶನವನ್ನು ದಿನಾಂಕ 01.11.2024ರಿಂದ ಭವಿಷ್ಯಾನ್ಯಯವಾಗಿ ಜಾರಿಗೆ ಬರುವಂತೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು, 2024ರ ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಠ ವೇತನ ಹಂತವನ್ನು ಈ ಕಳಕಂಡ ದರಗಳಲ್ಲಿ ಪರಿಷ್ಕರಿಸಿ ಆದೇಶಿಸಿದ.
ಹಾಗೂ ಈ ಪರಿಷ್ಕರಣೆಯು ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾದ ಸಿಬ್ಬಂದಿಗೆ ಅನ್ವಯಿಸುವುದಿಲ್ಲವೆಂಬ ಪರತ್ತಿಗೊಳಪಟ್ಟು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..