ಬೆಂಗಳೂರು –
ಗೃಹ ಸಚಿವರನ್ನು ಭೇಟಿಯಾದ ಉತ್ತರ ಕರ್ನಾಟಕದ ಯುವ ಮುಖಂಡರ ಟೀಮ್ – ಯುವ ಮುಖಂಡ ನಜೀರ್ ಕಂಗನೊಳ್ಳಿ ಗೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಒತ್ತಾಯಿಸಿದ ಬಸು ಭಜಂತ್ರಿ ಆಂಡ್ ಟೀಮ್
ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಉತ್ತರ ಕರ್ನಾಟಕದ ಯುವ ಮುಖಂಡರು ಬೆಂಗಳೂರಿನಲ್ಲಿ ಭೇಟಿಯಾದರು.ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಇದೇ ವೇಳೆ ಯುವ ಮುಖಂಡ ಜವಳಿ ನಿಗಮದ ಮಾಜಿ ಅಧ್ಯಕ್ಷ ನಜೀರ್ ಕಂಗನೊಳ್ಳಿ ಯವರ ನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಒತ್ತಾಯವನ್ನು ಗೃಹ ಸಚಿವರಿಗೆ ಮಾಡಲಾಯಿತು.
ಈ ಕೂಡಲೇ ನಜೀರ್ ಕಂಗನೊಳ್ಳಿಯರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಿ ನೇಮಕ ಮಾಡುವಂತೆ ಉತ್ತರ ಕರ್ನಾಟಕದ ಯುವ ಮುಖಂಡರ ನೇತ್ರತ್ವದಲ್ಲಿನ ಟೀಮ್ ಆಗ್ರಹವನ್ನು ಮಾಡಿತು.ಈ ಒಂದು ಸಂದರ್ಭದಲ್ಲಿ ನಜೀರ್ ಕಂಗನೊಳ್ಳಿ,ಬಸವರಾಜ ಭಜಂತ್ರಿ,ಸಾಧಿಕ್ ಜಮಖಂಡಿ,ಫಜಾಜ್ ತಂಬಾದ,ಪ್ರಭು ತಳಗೇರಿ,
ರಮೇಶ ಮಾದರ,ಸೇರಿದಂತೆ ಹಲವರು ಉಪಸ್ಥಿತರಿದ್ದು ನಜೀರ್ ಅವರಿಗೆ ವಿಧಾನ ಪರಿಷತ್ ಸ್ಥಾನವನ್ನು ನೀಡುವಂತೆ ಆಗ್ರಹವನ್ನು ಮಾಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……