ಮೇಟಿಪಾಳ್ಯ –
ರೋಹನ್ ಫೌಂಡೇಶನ್ ಕಾರ್ಯ ಶ್ಲಾಘನೀಯ ಸಿ ಆರ್ ಪಿ ಕವಿತಾ ಹೌದು ಸರಕಾರಿ ಶಾಲೆಗಳ ಬಗೆಗಿನ ರೋಹನ್ ಕೇರ್ ಫೌಂಡೇಶನ್ ಬೆಂಗಳೂರು ಮತ್ತು ಯಶಸ್ವಿ ಫೌಂಡೇಶನ್ ಬೆಂಗಳೂರು ಇವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ತಾವರೆಕೆರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಿ ಆರ್ ಪಿ ಕವಿತಾ ಹೇಳಿದರು,
ಮಾಗಡಿ ರಸ್ತೆಯ ತಾವರೆಕೆರೆ ಕ್ಲಸ್ಟರ್ ವ್ಯಾಪ್ತಿಯ ಮೇಟಿ ಪಾಳ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ರೋಹನ್ ಕೇರ್ ಫೌಂಡೇಶನ್ ಬೆಂಗಳೂರು ಇವರು ನೀಡಿದ ಉಚಿತ ಸಮವಸ್ತ್ರಗಳನ್ನು ಮತ್ತು ಯಶಸ್ವಿ ಫೌಂಡೇಶನ್ ಬೆಂಗಳೂರು ಇವರು ನೀಡಿದ ಕಲಿಕಾ ಸಾಮಾಗ್ರಿಗಳು ಹಾಗೂ ತಟ್ಟೆ ಲೋಟಗಳನ್ನು ಶಾಲಾ ಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಮತ್ತು ಪಾಲಕ ಪೋಷಕರ ಸಮ್ಮುಖದಲ್ಲಿ ಮಕ್ಕಳಿಗೆ ವಿತರಿಸಿ, ಟಿ ವೀಣಾ ಲಕ್ಷ್ಮೀಪುರ ಶಾಲೆಯನ್ನು ತುಂಬಾ ಅಭಿವೃದ್ಧಿ ಮಾಡಿ ಇತ್ತೀಚೆಗೆ ಮೇಟಿಪಾಳ್ಯ ಶಾಲೆಗೆ ವರ್ಗವಾಗಿ ಬಂದು ದಾನಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮೂಲಕ ಶೌಚಾಲಯ ಸೇರಿದಂತೆ ಮಕ್ಕಳ ಕಲಿಕೆಗೆ ಪೂರಕ ಸಾಮಗ್ರಿಗಳನ್ನು ಪಡೆದು ನೀಡುವ ಇವರ ಪವಿತ್ರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಪ್ನಾದೇಶ ಫೌಂಡೇಶನ್ ಮಹಾಪೋಷಕ ಎಲ್ ಐ ಲಕ್ಕಮ್ಮನವರ ರೋಹನ್ ಕೇರ ಫೌಂಡೇಶನ್ ನ ಮುಖ್ಯಸ್ಥರಾದ ಮಂಜುನಾಥ್ ರವರು ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರಿಂದ ಪ್ರೇರಿತವಾಗಿ ಧಾರವಾಡದ 11 ಸರಕಾರಿ ಶಾಲೆಗಳಿಗೆ ದತ್ತಿ ನೀಡಿದೆ ಎಂದರು.
ಆರ್ ಕೆ ಫೌಂಡೇಶನ್ ಸಂಯೋಜಕ ಶಿಕ್ಷಕ ನಾರಾಯಣ ಮಾತನಾಡಿ ಟಿ ವೀಣಾರವರು ಈಗಾಗಲೇ ಆರ್ ಕೆ ಫೌಂಡೇಶನ್ ಮೂಲಕ ಲಕ್ಷ್ಮೀಪುರ ಶಾಲೆಯನ್ನು ತುಂಬಾ ಪ್ರಗತಿ ಮಾಡಿ ಈ ಮೇಟಿಪಾಳ್ಯ ಶಾಲೆಯ ಏಳಿಗೆಗಾಗಿ ಕಂಕಣ ತೊಟ್ಟ ವೀಣಾ ಟೀಚರ್ ಗೆ ನಾವೆಲ್ಲರೂ ಸಹಕಾರ ನೀಡುತ್ತೇವೆ,ಶಾಲಾಭಿವೃದ್ದಿ ಸಮಿತಿ ಮತ್ತು ಪಾಲಕ ಪೋಷಕರು ಸಹಕಾರ ನೀಡ ಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟಿ ವೀಣಾ ನಾನು ಲಕ್ಷ್ಮೀಪುರ ಶಾಲೆಯನ್ನು ಆರ್ ಕೆ ಫೌಂಡೇಶನ್ ಮತ್ತು ಸಮುದಾಯದ ಸಹಕಾರದಿಂದ ಅಭಿವೃದ್ಧಿ ಮಾಡಿ, ಮೇಟಿಪಾಳ್ಯ ಈ ಗ್ರಾಮದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ, ಹಾಗೂ ಶಾಲೆಯ ಅಭಿವೃದ್ಧಿ ಕಾರ್ಯಗಳ ಆಗಬೇಕು ಆದ್ದರಿಂದ ನಾನು ಈ ಶಾಲೆಯನ್ನು ಆಯ್ಕೆ ಮಾಡಿಕೊಂಡೆ, ಈ ಗ್ರಾಮದ ಜನ ತುಂಬಾ ಮುಗ್ಧ ಜನ ಒಳ್ಳೆಯ ಹೃದಯವಂತರು ಎಂದರು. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಉಮಾರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ವಿಶಾಲ್ ನಾಗರಾಜು
ರುಕ್ಮಿಣೀ ರದೀಶ್ ರವರು ತಾವರೆಕೆರೆ ಮುಖ್ಯ ಶಿಕ್ಷಕಿ ನಾಗರತ್ನಮ್ಮ ಶಿಕ್ಷಕಿ ಶಾರದಾ ನಟೇಶ ಮುರಳಿ ಪಲ್ಲವಿ ಸತ್ಯಭಾಮ ಸೇರಿದಂತೆ ಅನೇಕರು ಇದ್ದರು. ನಂತರ ಎಲ್ಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಲೋಟ ತಟ್ಟೆಗಳನ್ನು ವಿವರಿಸಲಾಯಿತು.
ಸುದ್ದಿ ಸಂತೆ ನ್ಯೂಸ್ ಮೇಟಿಪಾಳ್ಯ…..