ಅಫಜಲಪುರ –
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ಅಫಜಲಪುರ ದಲ್ಲಿ ನಡೆದಿದೆ ಘಟನೆ ಯಲ್ಲಿ ಪ್ರಮುಖ ದಾಖಲೆಗಳಿಗೆ ಹಾನಿಯಾಗಿದೆ.ಸ್ಥಳಕ್ಕೆ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದು ವಿದ್ಯುತ್ ಶಾರ್ಕ್ ಸರ್ಕ್ಯೂಟ್ ದಿಂದಾಗಿ ಬೆಂಕಿ ಹತ್ತಿಲ್ಲ ಮತ್ತೆ ಬೇರೆ ಯಾವುದೇ ಕಾರಣ ಇರಬಹುದೆಂಬ ಅನುಮಾನ ಕಂಡು ಬಂದಿದೆ
ಯಾವ ರೀತಿಯಲ್ಲಿ ದಾಖಲೆಗಳಿಗೆ ಬೆಂಕಿ ಹತ್ತಿದೆ ಎಂಬುದರ ಬಗ್ಗೆ ಅಲ್ಲಿ ನೆರೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಸಿಬ್ಬಂದಿಗಳು ಹಾಗೂ ಶಿಕ್ಷಕರು ಬೇರೆ ರೀತಿಯ ಕಾರಣಗಳನ್ನು ಕೊಡುತ್ತಿದ್ದಾರೆ ಆದರೂ ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಹೇಳಲಾಗುತ್ತಿದೆ
ಮಕರ ಸಂಕ್ರಮಣ ನಿಮಿತ್ಯ ಕಚೇರಿಗೆ ರಜೆ ಇದ್ದರೂ ಸಹ ಯಾವ ರೀತಿಯಾಗಿ ದಾಖಲೆಗಳ ಕೋಣೆಗೆ ಬೆಂಕಿ ಹತ್ತಿದೆ ಎಂಬುದರ ಬಗ್ಗೆ ಪತ್ತೆ ಆಗಬೇಕಾಗಿದೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದೆ. ದಾಖಲೆಗಳ ಕೋಣೆಗೆ ಯಾವ ರೀತಿಯಾಗಿ ಬೆಂಕಿ ಹತ್ತಿದೆ ಎಂಬುದರ ಬಗ್ಗೆ ತನಿಖೆ ನಂತರ ಗೊತ್ತಾಗಬೇ ಕಾಗಿದೆ
ಆದರೆ ಅಲ್ಲಿ ಯಾವುದು ಪ್ರಮುಖ ದಾಖಲೆಗಳಿಗೆ ಹಾನಿಯಾಗಿಲ್ಲ ಎಲ್ಲವೂ ಅವಧಿ ಮುಗಿದ ದಾಖಲೆಗ ಳಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಪಾಟೀಲ್ ತಿಳಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಅಫಜಲಪುರ…..