ಹುಬ್ಬಳ್ಳಿ –
ಭಾರತ ವಿಶ್ವಗುರುವಾಗಲು ಸ್ವಾಮಿ ವಿವೇಕಾನಂದರೇ ಮಾರ್ಗದರ್ಶಕರು ಡಾ. ಸಿಎಚ್.ವಿ.ಎಸ್.ವಿ.ಪ್ರಸಾದ ಹೌದು ನಮ್ಮ ಯುವಜನತೆ ಸ್ವಾಮಿ ವಿವೇಕಾನಂದರು ಭಾರತವನ್ನು ವಿಶ್ವಗುರುವನ್ನಾಗಿ ನೋಡಬೇಕೆಂಬ ಕನಸಾಗಿತ್ತು ನಾವೆಲ್ಲ ಅವರ ಕನಸನ್ನು ನನಸು ಮಾಡಲು ಪ್ರಯತ್ನಿಸೋಣ ಅವರ ಭರವಸೆ ಯುವ ಜನತೆ ನಾವೆಲ್ಲ ಸ್ವಾಮಿ ವಿವೇಕಾನಂದ ಜೀವನ ಸಂದೇಶ ಗಳನ್ನು ಅಧ್ಯಯನ ಮಾಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದಷ್ಟು ಬೇಗನೆ ನಮ್ಮ ಭಾರತವನ್ನುವಿಶ್ವ ಗುರುವನ್ನಾಗಿಸಲು ಸಾಧ್ಯ ಎಂದು ಖ್ಯಾತ ಉದ್ಯಮಿ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕರಾದ ಡಾ. ವಿ ಎಸ್ ವಿ ಪ್ರಸಾದ್ ಹೇಳಿದರು
ರಾಮಕೃಷ್ಣ ವಿವೇಕಾನಂದ ಆಶ್ರಮ ಕಲ್ಯಾಣನಗರ ಹುಬ್ಬಳ್ಳಿಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಉತ್ಸವ ಉದ್ಘಾಟಿಸಿ ಮಾತನಾಡುತ್ತಾ ವಿವೇಕಾನಂದರ ಚಿಂತನೆಗಳಿಗೆ ಎಷ್ಟೊಂದು ಶಕ್ತಿ ಇರುತ್ತದೆ ಎಂದರೆ ಅದಕ್ಕೆ ಉತ್ತಮ ಉದಾಹರಣೆ ನಾನು ಕೇವಲ ನಾಲ್ಕಾರು ರೂಪಾಯಿಗಳ ಜೊತೆಗೆ ಒಂದು ಸ್ಕೂಟರನ್ನು ತೆಗೆದುಕೊಂಡು ಹುಬ್ಬಳ್ಳಿಗೆ ಬಂದಂತಹ ನಾನು ಇದೀಗ ಒಬ್ಬ ದೊಡ್ಡ ಉದ್ಯಮಿ ಯಾಗಿ ನಿರ್ಮಾಣವಾಗಿರುವುದು ವಿವೇಕಾನಂದರ ಶಕ್ತಿಯೇ ಕಾರಣ.
ಪ್ರಬಲ ಇಚ್ಛಾ ಶಕ್ತಿ ಸಾಧಿಸಿಯೇ ತಿರುವೆನೆಂಬ ಆತ್ಮ ವಿಶ್ವಾಸವನ್ನು ಹೊಂದಿದಾಗ ಯಶಸ್ಸು ಖಂಡಿತ ಎಂದು ಹೇಳಿದರು.ಎಲ್ಲ ಯುವ ಮಿತ್ರರು ಸ್ವಾಮಿ ವಿವೇಕಾನಂ ದರ ಜೀವನ ಅಧ್ಯಯನ ಮಾಡಿ ಅವರ ಚಿಂತನೆಗಳನ್ನ ಪ್ರತಿದಿನ ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿ ಕೊಂಡಾಗ ನಿಜಕ್ಕೂ ನೀವು ಅದ್ಭುತ ವ್ಯಕ್ತಿಗಳಾಗುವುದು ಶತಸಿದ್ಧ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ರಮೇಶ ಉಮರಾಣಿ ಮಾತನಾಡುತ್ತ ಪವಿತ್ರತೆ ಪರಿಶುದ್ಧತೆ ಪ್ರಾಮಾಣಿಕತೆ ಈ ಮೂರು ಗುಣಗಳು ತಮ್ಮಲ್ಲಿ ಇದ್ದರೆ ಖಂಡಿತ ಇಡೀ ಜಗತ್ತು ನಿಮ್ಮ ಕೈಯಲ್ಲಿ ಹಾಗೂ ನಿಮ್ಮಿಂದ ಮಹತ್ತರ ಕಾರ್ಯ ನೆರವೇರುವುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ವಿದ್ಯಾರ್ಥಿಗಳಿಗೆ ಉದಾಹರಣೆ ಮೂಲಕ ತಿಳಿಸಿದರು.
ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ತೇಜಸಾನಂದಜೀ ಮಹಾರಾಜ್, ಪೂಜ್ಯ ಶ್ರೀ ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್, ಪೂಜ್ಯಶ್ರೀ ಸ್ವಾಮಿ ಗುರುದೇವಚರಣಾನಂದಜೀ ಮಹಾರಾಜ್ ಭಜನೆಯನ್ನು ನೆರೆವೇರಿಸಿದರು, ಇವರೊಂದಿಗೆ ಡಾ. ನಾಗಲಿಂಗ ಮುರಗಿ ತಬಲಾ ಸಾಥ್ ನೀಡಿದರು.
ಸಮಾರಂಭದಲ್ಲಿ ಸಂಭಾಜಿ. ಎಸ್ ಕಲಾಲ್, ಸಂಗಣ್ಣ ಬೆಳಗಾವಿ ಸೇರಿದಂತೆ ಸುಮಾರು ಎಂಟು ಕಾಲೇಜುಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾ. ವಿನಾಯಕ ಕುಲಕರ್ಣಿ ನಿರೂಪಿಸಿದರು ದಯಾನಂದ ರಾವ್ ವಂದಿಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..