ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಹೊಸದೊಂದು ದಾಖಲೆ ಬರೆದ ನಿರ್ಗಮಿತ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ – ವಿಷಯ ಗೊತ್ತುವಳಿಯೊಂದಿಗೆ ಮೊದಲ ಬಾರಿಗೆ ಪಾಲಿಕೆಯ ಸಭೆಯಲ್ಲಿ ಚರ್ಚೆಯಾಯಿತು ಆಯುಕ್ತರ ಕೆಲಸ ಕಾರ್ಯಗಳು…..
ಸಾಮಾನ್ಯವಾಗಿ ಯಾವುದೇ ಇಲಾಖೆಗೆ ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ.ಇದೇಲ್ಲಾ ಸರ್ವೆ ಸಾಮಾನ್ಯ ವಾಗಿದ್ದುಇದರ ನಡುವೆ ವರ್ಗಾವಣೆಗೊಂಡ ಅಧಿಕಾರಿ ಗಳನ್ನು ಕಾರ್ಯಕ್ರಮ ಮಾಡಿ ಸನ್ಮಾನಿಸಿ ಬಿಳ್ಕೋಡು ತ್ತಾರೆ ಹೊಸದಾಗಿ ಬಂದವರನ್ನು ಸ್ವಾಗತ ಮಾಡುತ್ತಾರೆ ಇದರ ನಡುವೆ ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಬಂದು ಒಂದೂವರೆ ವರ್ಷಗಳ ಕಾಲ ಅಧಿಕಾರವನ್ನು ಮಾಡಿ ವರ್ಗಾವಣೆಯಾಗಿರುವ ಡಾ ಈಶ್ವರ ಉಳ್ಳಾಗಡ್ಡಿ ಯವರ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಯಾಯಿತು
ಹೌದು ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿ ಈ ಒಂದು ಕುರಿತಂತೆ ವಿಷಯವನ್ನು ಗೊತ್ತುವಳಿ ಮಾಡಿ ಸಭೆಯಲ್ಲಿ ಚರ್ಚೆಯನ್ನು ಮಾಡ ಲಾಯಿತು.ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಗಮಿತ ಪಾಲಿಕೆಯ ಆಯುಕ್ತರಾಗಿರುವ ಡಾ ಈಶ್ವರ ಉಳ್ಳಾಗಡ್ಡಿಯವರು ಒಂದೂವರೆ ವರ್ಷಗಳ ಕಾಲ ಪಾಲಿಕೆಯಲ್ಲಿ ಮಾಡಿರುವ ಒಳ್ಳೇಯ ಕೆಲಸ ಕಾರ್ಯಗಳನ್ನು ಹಾಗೆ ಇನ್ನೂಳಿದ ಅಭಿವೃದ್ದಿ ಕೆಲಸ ಕಾರ್ಯ ಸೇರಿದಂತೆ ಪ್ರತಿಯೊಂದರ ಮಾಹಿತಿಯನ್ನು ಸಭೆ ಮುಂದಿಟ್ಟು ಒಳ್ಳೇಯ ಅಧಿಕಾರಿಯಾಗಿದ್ದರು ಇಂತಹ ಒಳ್ಳೇಯ ಅಧಿಕಾರಿಯವರು ಸಿಕ್ಕಿದ್ದು ನಮ್ಮೇಲ್ಲರ ಭಾಗ್ಯ ಆದರೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿದ್ದು ನಮಗೂ ಕೂಡಾ ಬೇಸರನ್ನುಂಟು ಮಾಡಿದೆ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದವು
ಇದೇ ವೇಳೆ ಪಾಲಿಕೆಗೆ ಹೊಸದಾಗಿ ಆಯುಕ್ತರಾಗಿ ಬಂದಿರುವ ಡಾ ರುದ್ರೇಶ ಘಾಳಿಯವರನ್ನು ಸರ್ವ ಸದಸ್ಯರು ಸಭೆಯಲ್ಲಿ ಸ್ವಾಗತಿಸಿ ಬರಮಾಡಿಕೊಂಡರು ಇನ್ನೂ ಇದೇ ಮೊದಲ ಬಾರಿಗೆ ವಿಷಯ ಗೊತ್ತುವಳಿ ಯೊಂದಿಗೆ ಸಭೆಯಲ್ಲಿ ಚರ್ಚೆಗೆ ವಿಷಯವಾಗಿರುವ ನಿರ್ಗಮಿತ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಹೊಸದೊಂದು ದಾಖಲೆಯನ್ನು ಬರೆದಿದ್ದು ಸಭೆಯಲ್ಲಿ ಪಾಲಿಕೆಯ ಸರ್ವ ಸದಸ್ಯರಿಂದ ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……