ಗೌರಿಬಿದನೂರು –
ಎನ್‌ಪಿಎಸ್ ರದ್ದು ಪಡಿಸಿ, ಒಪಿಎಸ್ ಮರುಜಾರಿ ಗೊಳಿಸಬೇಕು ಎಂದು ಒತ್ತಾಯಿಸಿ ಗೌರಿ ಬಿದನೂರಿನ ಕೋಟೆ ಶಾಲೆಯಲ್ಲಿ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದಿಂದ ಪತ್ರ ಚಳವಳಿ ಹಮ್ಮಿಕೊಳ್ಳ ಲಾಗಿತ್ತು.ನಗರದ ಕೋಟೆ ಶಾಲೆಯಿಂದ, ಪೋಸ್ಟ್ ಆಫೀಸ್‌ವರೆಗೆ ಜಾಥಾ ನಡೆಸಿ ಮನವಿ ಪತ್ರಗಳನ್ನು ಪೋಸ್ಟ್ ಆಫೀಸ್ ಡಬ್ಬಿಯಲ್ಲಿ ಹಾಕುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್. ಮಂಜುನಾಥ್ ಮಾತನಾಡಿ, 2006ರ ನಂತರ ಆಯ್ಕೆ ಯಾದ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ಅತೀ ಕಡಿಮೆ ಪಿಂಚಣಿ ದೊರೆಯುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಆದ್ದರಿಂದ ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿ ಮಾಡಬೇಕು ಎಂದು ಪತ್ರಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಈ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಫೆಬ್ರವರಿ 7ರಂದು ಅನಿರ್ಧಷ್ಟಾವಧಿ ಧರಣಿ ಹಮ್ಮಿ ಕೊಳ್ಳಲಾಗಿದೆ ತಾಲ್ಲೂಕಿನಲ್ಲಿ 850 ಜನ ನೌಕರರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಉಮೇಶ್, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಸಂಜೀವರಾಯಪ್ಪ, ಪ್ರಧಾನ ಕಾರ್ಯ ದರ್ಶಿ ಬಾಲಪ್ಪ, ಸೋಮಶೇಖರ್, ಕುಮಾರ್, ಕಾರ್ಯದರ್ಶಿ, ಶಬರಿನ್, ಶ್ರೀಧರ್, ಬಾಬಾಜಾನ್, ಗಿರಿಧರ್, ಕೃಷ್ಣಪ್ಪ ಹಾಗೂ ಸರ್ಕಾರಿ ನೌಕರರು ಭಾಗವಹಿಸಿದ್ದರು.
ಸುದ್ದಿ ಸಂತೆ ನ್ಯೂಸ್ ಗೌರಿ ಬಿದನೂರು…..