This is the title of the web page
This is the title of the web page

Live Stream

[ytplayer id=’1198′]

February 2025
T F S S M T W
 12345
6789101112
13141516171819
20212223242526
2728  

| Latest Version 8.0.1 |

State News

ಆರೋಗ್ಯ ಸಂಜೀವಿನಿ ಯೋಜನೆ ಮಹತ್ವದ ಮಾಹಿತಿ – ಯಾರು ಯಾರು ಅರ್ಹರು ಏನು ಮಾಡಬೇಕು ಗೊತ್ತಾ ಸಂಪೂರ್ಣ ಮಾಹಿತಿ…..

ಆರೋಗ್ಯ ಸಂಜೀವಿನಿ ಯೋಜನೆ ಮಹತ್ವದ ಮಾಹಿತಿ – ಯಾರು ಯಾರು ಅರ್ಹರು ಏನು ಮಾಡಬೇಕು ಗೊತ್ತಾ ಸಂಪೂರ್ಣ ಮಾಹಿತಿ…..
WhatsApp Group Join Now
Telegram Group Join Now

ಬೆಂಗಳೂರು

ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಮಹತ್ವದ ಮಾಹಿತಿ ಯನ್ನು ನೌಕರರಿಗೆ ನೀಡಲಾಗಿದೆ ಹೌದು ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಮಹತ್ವದ ಮಾಹಿತಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು, ವೈದ್ಯಕೀಯ ಹಾಜರಾತಿ ನಿಯಮಗಳು 1963 ರನ್ವಯ ಕೆಲವೊಂದು ಇಲಾಖೆ ಗುಂಪುಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಹರಾಗಿರುತ್ತಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು, ವೈದ್ಯಕೀಯ ಹಾಜರಾತಿ ನಿಯಮಗಳು 1963 ರನ್ವಯ ಕೆಲವೊಂದು ಇಲಾಖೆ ಗುಂಪುಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಹರಾಗಿರುತ್ತಾರೆ.ಯೋಜನೆಗೆ ಅರ್ಹ ಅವಲಂಬಿತರು ಯಾರು ಅಂತಾ ನೋಡೊದಾದರೆ

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ “ಕುಟುಂಬ” ಅಂದರೆ,ಸರ್ಕಾರಿ ನೌಕರರ ಪತಿ ಅಥವಾ ಪತ್ನಿ ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಅವರು ಸರ್ಕಾರಿ ನೌಕರನೊಂದಿಗೆ ಸಾಮನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು.

ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿ ತವಾಗಿರಬೇಕು ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡತೆ) KASS ಯೋಜನೆಗೆ ಒಳಪಡದ ನೌಕರರ ವರ್ಗ ಸಾರ್ವಜನಿಕ ವಲಯದ (public sector establishment) ಇತರೇ ನೌಕರರು ಅಂದರೆ, ಸ್ಥಳಿಯ ಸಂಸ್ಥೆ, ಸ್ನಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆ, ವಿಶ್ವವಿದ್ಯಾಲಯಗಳು, ಶಾಸನ ಬದ್ಧ ಸಂಸ್ಥೆಗಳು, ಗುತ್ತಿಗೆ/ಹೊರಗುತ್ತಿಗೆ ನೌಕರರು, ಅರೆಕಾಲಿಕ ನೌಕರರು, ದಿನಗೂಲಿ ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.

ಈಗಾಗಲೇ ಬೇರೆ ಆರೋಗ್ಯ ಯೋಜನೆಯಡಿ ಒಳಪಟ್ಟ ಸರ್ಕಾರಿ ನೌಕರರು (ಉದಾ: ಪೊಲೀಸ್ ಇಲಾಖೆಯ ಲ್ಲಿನ ‘ಆರೋಗ್ಯ ಭಾಗ್ಯ’ ಯೋಜನೆಗೆ ಒಳಪಟ್ಟ ಸರ್ಕಾರಿ ನೌಕರರು) ಈ ಯೋಜನೆಗೆ ಒಳಪಡುವುದಿಲ್ಲ.

ರಾಜ್ಯ ಸೇವೆಯಲ್ಲಿ ನಿಯೋಜನೆ ಎರವಲು ಸೇವೆಯ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಸ್ಥಾಪನೆಯ ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.

ಸಾರ್ವಜನಿಕ ವಲಯದ ಸ್ಥಾಪನೆ ಎಂದರೇ “ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮ ಗಳು 1977 ರ ನಿಯಮ 5 ರಲ್ಲಿ ನಿರ್ಧಿಷ್ಟ ಪಡಿಸಲಾದ ಸ್ಥಾಪನೆಗಳ ನೌಕರರು.ವೈದ್ಯಕೀಯ ಚಿಕಿತ್ಸೆ ನೀಡುವ ಸಂಬಂಧ ರಾಜ್ಯ ಸರ್ಕಾರವು ರೂಪಿಸಿರುವ ಪ್ರತ್ಯೇಕ ನಿಯಮಗಳು ಅನ್ವಯವಾಗುವ ಇತರೇ ಯಾವುದೇ ವರ್ಗದ ವ್ಯಕ್ತಿಗಳಿಗೆ ಈ ಯೋಜನೆ ಅನ್ವಯಿ ಸುವುದಿಲ್ಲ.ನ್ಯಾಯಾಂಗ ಸೇವೆಯ ಅಧಿಕಾರಿಗಳು ಮತ್ತು ರಾಜ್ಯ ಉಚ್ಚ ನ್ಯಾಯಲಯದ ನೌಕರರು ಈ ಯೋಜನೆ ಒಳಪಡುವುದಿಲ್ಲ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……


Google News

 

 

WhatsApp Group Join Now
Telegram Group Join Now
Suddi Sante Desk