ರಬಕವಿ ಬನಹಟ್ಟಿ –
ವಿದ್ಯಾರ್ಥಿಗಳಿಗೆ ಗಿಡ ಮರಗಳನ್ನು ಬೆಳೆಸುವುದು, ಪರಿಸರ ರಕ್ಷಣೆ, ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರೆ ಭವಿಷ್ಯದಲ್ಲಿ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದು ಜಗದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ಐ.ಸಿಂದೆ ತಿಳಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ಹಸಿರು ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶಿಕ್ಷಕಿ ಮಂಜುಳಾ ಹೂಗಾರ ಮಾತನಾಡಿ, ‘ಶಾಲೆಯಲ್ಲಿ ಹಸಿರು ಪಡೆಯ ವಿದ್ಯಾರ್ಥಿಗಳ ಮೂಲಕ ಸ್ವಚ್ಛತೆ, ಗಿಡ ಮರಗಳ ರಕ್ಷಣೆ, ಶಾಲೆಯಲ್ಲಿ ಹಸಿರು ಎಲೆಗಳ ಮೂಲಕ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಪರಿಸರ ವೀಕ್ಷಣೆ ಯಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇವು ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ ಎಂದರು.
ಸಿ.ವಿ. ಕುಲಕರ್ಣಿ, ಎಸ್.ಎಂ. ವಾಲಿ, ಎಸ್.ಎಸ್. ಬುಗಟ್ಯಾಗೋಳ, ಡಿ.ಎ. ದಿಲ್ವಾರನಾಯಕ, ಜೆ.ಎಂ. ಮುಂಡಗನೂರ, ವಿ.ಬಿ. ಪೂಜಾರ, ಎಸ್.ಜಿ. ಪವಾರ, ಸದಾಶಿವ ದಳವಾಯಿ ಮತ್ತು ಎನ್.ಐ. ಮಠಪತಿ ಇದ್ದರು.
ಸುದ್ದಿ ಸಂತೆ ನ್ಯೂಸ್ ರಬಕವಿ ಬನಹಟ್ಟಿ…..