ನವಲಗುಂದ –
ಜನನಾಯಕ ಎನ್.ಹೆಚ್. ಕೋನರಡ್ಡಿ ಹುಟ್ಟು ಹಬ್ಬಕ್ಕೆ ನವಲಗುಂದದಲ್ಲಿ ಬೃಹತ್ ಪ್ರಮಾಣದಲ್ಲಿ ರಕ್ತ ದಾನ ಶಿಬಿರ
ಹೌದು ಕ್ಷೇತ್ರದ ಪ್ರತಿಯೊಂದು ಕೆಲಸ ಕಾರ್ಯಗಳನ್ನು ವಿಶೇಷವಾಗಿ ಮಾಡಿ ರೈತರ ಜಮೀನಿಗೆ ಹೋಗಲು ಚಕ್ಕಡ ದಾರಿ ನಿರ್ಮಿಸಿ ಹಾಗೂ ಮನೆ ಇಲ್ಲದ ಬಡವರಿಗೆ ಉಚಿತವಾಗಿ ಸೂರು ಒದಗಿಸಿ ರಾಜ್ಯದ ಗಮನ ಸೆಳೆ ಯುವ ಮೂಲಕ ಜನ ಸೇವೆ ಮಾಡುತ್ತಾ ಜನ ಸೇವಕ ಎಂದೆ ಕರೆಯಿಸಿಕೊಳ್ಳುತ್ತಿರುವ ನವಲಗುಂದ ಶಾಸಕ ಎನ್ ಹೆಚ್ ಕೋನರಡ್ಡಿ ಅವರ ಹುಟ್ಟು ಹಬ್ಬದ ಹಿನ್ನೆಲೆ ಯಲ್ಲಿ ಫೆಬ್ರುವರಿ 22 ರಂದು ಬೆಳಿಗ್ಗೆ 10.00 ಗಂಟೆಗೆ ನವಲಗುಂದ ನಗರದ ಅಪ್ಪಾಜಜಿ ಗಾರ್ಡನ್‌ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್.ಹೆಚ್. ಕೋನರಡ್ಡಿ ಅಭಿಮಾನಿ ಬಳಗದ ಅಧ್ಯಕ್ಷ ಪ್ರಭಾಕರ ಮೋಹಿತೆ ಹೇಳಿದರು.
ಹೌದು ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಜನತೆಗೆ ಚಿಕಿತ್ಸೆ ಗಿಂತ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಯಾಗಿದ್ದು ರಕ್ತದ ಕೊರತೆ ಹೀಗಾಗಿ ಈ ಸಮಸ್ಯೆಯನ್ನು ಗಂಭೀರ ವಾಗಿ ಪರಿಗಣಿಸಿ ಈ ಸಲದ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಬೇಕು ಎಂಬ ಉದ್ದೇಶ ದಿಂದ ನವಲಗುಂದ ದಲ್ಲಿ ಹುಟ್ಟು ಹಬ್ಬದ ದಿನದಂದೇ ರಕ್ತದಾನ ಹಾಗೂ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು
ಪಟ್ಟಣದ ಅಪ್ಪಾಜಿ ಗಾರ್ಡನ್ ನಲ್ಲಿ ಆಯೋಜನೆ ಮಾಡಲಾಗಿದ್ದು ಅಪಾರ ಸಂಖ್ಯೆಯಲ್ಲಿ ಯುವಕರು, ರೈತರು, ವಿವಿಧ ಸಂಘಟನೆಗಳು, ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಹಲವರು ರಕ್ತದಾನ ವನ್ನು ಮಾಡಲಿದ್ದು ಇದರೊಂದಿಗೆ ಜನ ಸೇವಕನ ಹುಟ್ಟು ಹಬ್ಬವನ್ನು ಶಾಸಕ ಎನ್ ಹೆಚ್ ಕೋನರೆಡ್ಡಿ ಅವರ ಅಭಿಮಾನಿ ಬಳಗದಿಂದ ಆಚರಿ ಸಲು ಮುಂದಾಗಿದ್ದೇವೆ.
ಈ ಶಿಬಿರದ ಮೂಲಕ ರಕ್ತ ಸಿಗದೇ ಇರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಯಾಗಿರುವ ರಕ್ತದ ಕೊರತೆ ನೀಗಿಸುವ ಉದ್ದೇಶ ಈ ಒಂದು ಶಿಬಿರದ್ದಾಗಿದ್ದು ಈ ಕಾರ್ಯಕ್ರಮದ ಮೂಲಕ ಶಾಸಕರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಪ್ರಭಾರಕ ಮೋಹಿತೆ ಹೇಳಿದರು.
ಸುದ್ದಿ ಸಂತೆ ನ್ಯೂಸ್ ನವಲಗುಂದ…..