ಹುಬ್ಬಳ್ಳಿ –
ಯೂತ್ ಕಾಂಗ್ರೆಸ್ ಧಾರವಾಡ ಮಹಾನಗರ ಜಿಲ್ಲಾ ಘಟಕದ ನೇತೃತ್ವದಲ್ಲಿ ಉಚಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಮಹತ್ವಾಕಾಂಕ್ಷಿ ಕಾರ್ಯ ಕ್ರಮವನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ಹುಟ್ಟು ಹಬ್ಬದ ಹಿನ್ನೆಲೆ ಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾಗಿರುವ ಅರ್ಜುನ ಪಾಟೀಲ್ ತಿಳಿಸಿದ್ದಾರೆ.
📅 ದಿನಾಂಕ: 27-02-2025
⏰ ಸಮಯ: ಬೆಳಗ್ಗೆ 9:00 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ
📍 ಸ್ಥಳ: ಅನಿಲ್ ಕುಮಾರ್ ಪಾಟೀಲ್ ಅನ್ನಪೂರ್ಣ ನಿಲಯ, ಕಾರವಾರ ರಸ್ತೆ, ಹುಬ್ಬಳ್ಳಿ.
ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಚಿವ ಸಂತೋಷ್ ಲಾಡ್ – ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಅನಿಲ್ ಕುಮಾರ್ ಪಾಟೀಲ್ – ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರು ಅಲ್ತಾಫ್ ಹಳ್ಳೂರ್ – ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅರ್ಜುನ್ ಪಾಟೀಲ್ – ಯೂತ್ ಕಾಂಗ್ರೆಸ್ ಧಾರವಾಡ ಮಹಾನಗರ ಜಿಲ್ಲಾ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ
ಈ ಕಾರ್ಯಕ್ರಮವು ಅರ್ಜುನ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಯುವಕರು, ಸಮಾಜಸೇವಕರು ಹಾಗೂ ರಕ್ತದಾನಿಗಳು ಭಾಗವಹಿಸಲಿದ್ದಾರೆ
ಸರ್ವರಿಗೂ ಹೃತ್ಪೂರ್ವಕ ಆಹ್ವಾನವನ್ನು ಅರ್ಜುನ್ ಪಾಟೀಲ್ಅಧ್ಯಕ್ಷರು ಯೂತ್ ಕಾಂಗ್ರೆಸ್ ಧಾರವಾಡ ಮಹಾನಗರ ಜಿಲ್ಲಾ ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.