ಬೆಂಗಳೂರು –
ಯಶಸ್ವಿಯಾಗಿ 5 ವರ್ಷ ಪೊರೈಸಿದ ಡಿಕೆಶಿಯವರಿಗೆ ಶುಭ ಹಾರೈಸಿದ ರಾಬರ್ಟ್ ದದ್ದಾಪೂರಿ ಟೀಮ್ – ಶುಭ ಹಾರೈಸಿ ಅಭಿನಂದಿಸಿದ ರಾಬರ್ಟ್ ದದ್ದಾಪೂರಿ
ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೊರೈಸಿದ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿರುವ ರಾಬರ್ಟ್ ದದ್ದಾಪುರಿ ಅವರು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಬೆಂಗಳೂರಿನಲ್ಲಿ ಡಿಕೆಶಿ ಅವರನ್ನು ಭೇಟಿಯಾಗಿ ಶುಭಾಶಯವನ್ನು ಕೋರಿದರು.ಕೆಪಿಸಿಸಿ ಅಧ್ಯಕ್ಷರಾಗಿ ತಳ ಮಟ್ಟದಲ್ಲಿ ಕೆಲಸವನ್ನು ಮಾಡಿ ಕಾಂಗ್ರೆಸ್ ಪಕ್ಷದ ಸದೃಢತೆಗೆ ಗಟ್ಟಿ ಬುನಾದಿಯನ್ನು ಹಾಕಿದ ಡಿಕೆ ಶಿವಕುಮಾರ್ ಅವರನ್ನು ತುಂಬು ಹೃದಯದಿಂದ ಅಭಿನಂದಿಸಲಾಯಿತು.ಅವರ ಸೇವೆ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಲಿ ಎಂದು ಹಾರೈಸಿದರು ಈ ಒಂದು ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಯುವ ಮುಖಂಡ ಜೇಮ್ಸ್ ಯಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..