ಹುಬ್ಬಳ್ಳಿ –
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ರಾಜ್ಯಾದ್ಯಂತ ಆಚರಣೆ ಮಾಡಲಾಗುತ್ತಿದ್ದು ಇನ್ನೂ ಇತ್ತ ಹುಬ್ಬಳ್ಳಿ ಯಲ್ಲೂ ಹುಟ್ಟು ಹಬ್ಬವನ್ನು ಆಚರಿಸಲಾಯಿತು ನಗರದಲ್ಲಿ ಅಪ್ಪು ಯೂಥ್ ಬ್ರಿಗೇಡ್ ಗೆಳೆಯರ ಬಳಗದ ವತಿಯಿಂದ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು
ಸಾಮಾನ್ಯವಾಗಿ ಕೇಕ್ ಕತ್ತರಿಸುವ ಮೂಲಕ ಇಲ್ಲವೇ ವೇದಿಕೆ ಕಾರ್ಯಕ್ರಮ ಮಾಡದೆ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರದ ಮೂಲಕ ಈ ಒಂದು ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು. ಹೊಸ ಗಬ್ಬೂರಿನಲ್ಲಿ ಲಕುಂಡಿ ಅಂದ ಮಕ್ಕಳ ಶಾಲೆಯಲ್ಲಿ ಮಕ್ಕಳಗೆ ನೇತ್ರ ತಪಾಸಣೆ ಮಾಡಿ ಕನ್ನಡವನ್ನು ವಿತರಣೆ ಮಾಡಲಾಯಿತು
ಇದರೊಂದಿಗೆ ಅಗಲಿದ ಕನ್ನಡದ ಚಿತ್ರರಂಗದ ಮಹಾನ್ ನಟ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬ ವನ್ನು ಮಾದರಿಯಾಗಿ ಆಚರಿಸಿ ಸಂಘಟನೆಯವರು ಇತರರಿಗೆ ಮಾದರಿಯಾಗಿದ್ದು ಕಂಡು ಬಂದಿತು
ಈ ಒಂದು ಸಂದರ್ಭದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಅಣ್ಣಪ್ಪ ಗೋಕಾಕ,ಆನಂದ ಬಡಿಗೇರ, ಭೀಮು ಹಲಗಿ,ವಿಜಯ,ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದರೊಂದಿಗೆ ರಾಜ್ಯಕ್ಕೆ ಅಪ್ಪು ಯೂಥ್ ಬ್ರಿಗೇಡ್ ಗೆಳೆಯರ ಬಳಗದವರು ಮಾದರಿಯಾದರು
ಹುಬ್ಬಳ್ಳಿಯಲ್ಲಿ ಅಪ್ಪು ಯೂಥ್ ಬ್ರಿಗೇಡ್ ಗೆಳೆಯರ ಬಳಗದ ವತಿಯಿಂದ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬ ಆಚರಣೆ – ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಣೆ….. ನೇತ್ರ ತಪಾಸಣೆ ಕಾರ್ಯಕ್ರಮ…..
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..