ಹುಬ್ಬಳ್ಳಿ –
ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಕೈಜೊಡಿಸಿದ ಕೆಜಿಪಿ ಗ್ರೂಪ್ – ಯುವ ಉದ್ಯಮಿ ಶ್ರೀಗಂಧ ಶೆಟ್ ನೇತ್ರತ್ವದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಗೆ ಸಿದ್ದವಾಗುತ್ತಿವೆ ಸುಸಜ್ಜಿತ ಬ್ಯಾರಿಕೇಡ್ ಗಳು….. ಶೀಘ್ರದಲ್ಲೇ ಹಸ್ತಾಂತರವಾಗಲಿವೆ ಕೆಜಿಪಿ ಗ್ರೂಪ್ ನಿಂದ
ವ್ಯಾಪರ ವಹಿವಾಟಿಗೆ ಮಾತ್ರ ಸಿಮೀತವಾಗದ ಹುಬ್ಬಳ್ಳಿಯ ಕೆಜಿಪಿ ಗ್ರೂಪ್ ಸದಾ ಒಂದಿಲ್ಲೊಂದು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ.ಹೌದು ಇದಕ್ಕೆ ಸಾಕ್ಷಿ ಗ್ರಪ್ ನಿಂದ ನಡೆಯು ತ್ತಿರುವ ಹಲವಾರು ಕಾರ್ಯಕ್ರಮಗಳಾಗಿದ್ದು ಸಧ್ಯ ಮತ್ತೊಂದು ಮಹಾನ್ ಸಾಮಾಜಿಕ ಕಾರ್ಯಕ್ಕೆ ಕೆಜಿಪಿ ಗ್ರೂಪ್ ಕೈಜೊಡಿಸಿದೆ.
ಹೌದು ಕೆಜಿಪಿ ಗ್ರೂಪ್ ಚೇರಮನ್ ಗಣೇಶ ಶೆಟ್ ಮಾರ್ಗದರ್ಶನದಲ್ಲಿ ಗ್ರೂಪ್ ನ ಅಧ್ಯಕ್ಷ ಶ್ರೀಗಂಧ ಶೆಟ್ ನೇತ್ರತ್ವದಲ್ಲಿ ಹಲವಾರು ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಕ್ರಮಗಳೊಂದಿಗೆ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ಇವರು ಸಧ್ಯ ಮತ್ತೊಂದು ಮಹಾನ್ ಕಾರ್ಯಕ್ಕೆ ಕೈಜೊಡಿಸಿದ್ದಾರೆ.ಹೌದು ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಗೆ ಒಳ್ಳೇಯ ಗುಣಮಟ್ಟದ ಬ್ಯಾರಿ ಕೇಡ್ ಗಳನ್ನು ನೀಡುತ್ತಿದ್ದಾರೆ.
ಸುಮ್ಮನೆ ಕಾಟಾಚಾರಕ್ಕೆ ಕೊಡಬೇಕು ಎಂದುಕೊಂಡು ನೀಡದೆ ಕೆಜಿಪಿ ಗ್ರೂಪ್ ನ ಅಧ್ಯಕ್ಷರಾಗಿರುವ ಯುವ ಉಧ್ಯಮಿ ಶ್ರೀಗಂಧ ಶೆಟ್ ಅವರೇ ಆಸಕ್ತಿ ತಗೆದು ಕೊಂಡು ಒಳ್ಳೆಯ ಗುಣಮಟ್ಟದ ಬ್ಯಾರಿಕೇಡ್ ಗಳನ್ನು ಮಾಡಿಸುತ್ತಿದ್ದಾರೆ.ಪೊಲೀಸ್ ಇಲಾಖೆಯ ಮನವಿ ಹಿನ್ನಲೆಯಲ್ಲಿ ಈ ಒಂದು ಕಾರ್ಯವನ್ನು ಮಾಡುತ್ತಿದ್ದು 100 ಬ್ಯಾರಿಕೇಡ್ ಗಳನ್ನು ಮಾಡಿಸುತ್ತಿದ್ದಾರೆ.
ಕೆಲ ಬ್ಯಾರಿಕೇಡ್ ಗಳಲ್ಲಿ ಸಂಚಾರಿ ಪೊಲೀಸರಿಗೆ ಕುಳಿತು ಕೊಂಡು ಕರ್ತವ್ಯ ಮಾಡಲು ಅನುಕೂಲವಾಗುವ ಪ್ಲಾನ್ ಇಟ್ಟುಕೊಂಡು ಶ್ರೀಗಂಧ ಶೆಟ್ ಅವರೇ ಆಸಕ್ತಿ ತಗೆದುಕೊಂಡು ಸಿದ್ದತೆ ಮಾಡಿಸುತ್ತಿದ್ದು ಸಂಪೂರ್ಣ ವಾಗಿ ಸಿದ್ದವಾದ ನಂತರ ಪೊಲೀಸ್ ಇಲಾಖೆಗೆ ಹಸ್ತಾಂತರ ಕಾರ್ಯ ನಡೆಯಲಿದೆ.
ಶೀಘ್ರದಲ್ಲೇ ಈ ಒಂದು 100 ಬ್ಯಾರಿಕೇಡ್ ಗಳು ನಿರ್ಮಾಣಗೊಂಡು ಇಲಾಖೆಗೆ ಹಸ್ತಾಂತರವಾಗಲಿವೆ ಕೇವಲ ವ್ಯಾಪಾರ ವಹಿವಾಟಿಗೆ ಮಾತ್ರ ತಮ್ಮ ಕಾರ್ಯ ಕ್ಷೇತ್ರವನ್ನು ಸಿಮೀತವಾಗಿಟ್ಟುಕೊಳ್ಳದೆ ಸಾಮಾಜಿಕ ಧಾರ್ಮಿಕ ಕಾರ್ಯದಲ್ಲೂ ತಮ್ಮನ್ನು ತಾವು ತೊಡಿಸಿ ಕೊಂಡಿದ್ದಾರೆ ಎಂಬೊದಕ್ಕೆ ಸಂಘಟನೆ ಮಾಡುತ್ತಿರುವ ಹಲವಾರು ಕಾರ್ಯಕ್ರಮಗಳೇ ನಮ್ಮ ಮುಂದೆ ಸಾಕ್ಷಿ ಯಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……