ಹುಬ್ಬಳ್ಳಿ –
KGP ಗ್ರೂಪ್ ನಿಂದ ರಂಜಾನ್ ಹಬ್ಬಕ್ಕಾಗಿ ಮುಸ್ಲಿಂ ಬಾಂಧವರಿಗೆ ವಿಶೇಷ ಖರ್ಜೂರ ವಿತರಣೆ – ಹುಬ್ಬಳ್ಳಿ ಧಾರವಾಡ ದಲ್ಲಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯದೊಂದಿಗೆ ಸ್ಪೇಶಲ್ ಖರ್ಜೂರ ವಿತರಿಸಿದ ಶ್ರೀಗಂಧ ಶೇಟ್…..
ಸದಾ ವ್ಯಾಪಾರ ವಹಿವಾಟು ಎಂದುಕೊಂಡು ಅಷ್ಟಕ್ಕೇ ತಮ್ಮ ಕಾರ್ಯವನ್ನು ಸೀಮಿತಗೊಳಿಸಿಕೊಳ್ಳ ಹುಬ್ಬಳ್ಳಿಯ ಕೆಜಿಪಿ ಗ್ರೂಪ್ ಹಲವಾರು ಸಾಮಾಜಿಕ ಧಾರ್ಮಿಕ ಸೇವಾ ಕಾರ್ಯಗಳನ್ನು ಮಾಡುತ್ತಿದೆ.ಹೌದು ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಧಾರ್ಮಿಕ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಕೆಜಿಪಿ ಗ್ರೂಪ್ ಸಾಮಾಜಿಕ ಸೇವೆ ಸದಾ ಮುುಂದು ಎಂಬೊದನ್ನು ಗ್ರೂಪ್ ನ ಅಧ್ಯಕ್ಷರಾಗಿರುವ ಶ್ರೀಗಂಧ ಶೇಟ್ ಅವರು ತೋರಿಸಿಕೊಡುತ್ತಿದ್ದಾರೆ.
ಶ್ರೀಗಂಧ ಶೇಟ್ ಅವರ ಮಾರ್ಗದರ್ಶನದಲ್ಲಿ ನಡೆದುಕೊಂಡು ಬರುತ್ತಿರುವ ಈ ಒಂದು ಗ್ರೂಪ್ ಈಗಾಗಲೇ ಹಲವಾರು ಸಾಮಾಜಿಕ ಕೆಲಸಗಳೊಂದಿಗೆ ಸಮಾಜ ಸೇವೆಯನ್ನು ಮಾಡುತ್ತಿದೆ.ಇನ್ನೂ ಗ್ರೂಪ್ ನ ಮಾಲೀಕರಾಗಿರುವ ಶ್ರೀಗಂಧ ಶೇಟ್ ಅವರು ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರಿಗೆ ವಿಶೇಷ ವಾದ ಖರ್ಜೂರಗಳನ್ನು ವಿತರಣೆ ಮಾಡುತ್ತಿದ್ದಾರೆ.
ವಿಶೇಷವಾದ ಖರ್ಜೂರಗಳನ್ನು ತರಿಸಿಕೊಂಡು ವಿತರಣೆ ಮಾಡ್ತಾ ಇದ್ದಾರೆ.ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಬಹುತೇಕ ಪ್ರಮಾಣದಲ್ಲಿ ಉಪವಾಸ ಇರುತ್ತಾರೆ ಹೀಗಾಗಿ ಸ್ಪೇಶಲ್ ಖರ್ಜೂರಗಳನ್ನು ವಿತರಣೆ ಮಾಡಿದರು.ಅವಳಿ ನಗರದಲ್ಲಿನ ಮುಸ್ಲಿಂ ಬಾಂಧವರಿಗೆ ಗ್ರೂಪ್ ನಿಂದ ಶ್ರೀಗಂಧ ಶೇಟ್ ಅವರು ತಾವೇ ತೆರಳಿ ರಂಜಾನ್ ಹಬ್ಬದ ಶುಭಾಶಯಗಳನ್ನು ಹೇಳುತ್ತಾ ಖರ್ಜೂರಗಳನ್ನು ವಿತರಣೆ ಮಾಡಿದರು
ಈ ಒಂದು ಸಂದರ್ಭದಲ್ಲಿ ಶ್ರೀಗಂಧ ಶೇಟ್ ಅವರೊಂ ದಿಗೆ ಅನುಪ ಸೇರಿದಂತೆ ಗೆಳೆಯರು ಆಪ್ತರು ಮುಸ್ಲಿಂ ಸಮುದಾಯದ ಮುಖಂಡರು ಬಂಧುಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..