ಬೆಂಗಳೂರು –
ಕರ್ನಾಟಕದಲ್ಲಿನ ಸರ್ಕಾರಿ ನೌಕಕರಿಗೆ ತುಟ್ಟಿಭತ್ಯ ಹೆಚ್ಚಳವು ಜಾರಿಯಾಗಲಿದೆ ಎನ್ನುವ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ ಹೌದು ಯಾವಾಗಿ ನಿಂದ ಹಾಗೂ ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಕುರಿತು ನೋಡೊದಾದರೆ.ತುಟ್ಟಿಭತ್ಯೆ (ಡಿಎ) ಹೆಚ್ಚಳ ಜೀವನ ವೆಚ್ಚದ ಏರಿಕೆಗೆ ತಕ್ಕಂತೆ ಆರ್ಥಿಕ ಸ್ಥಿರತೆ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ.
ಈ ಹೆಚ್ಚಳವು ಕೇಂದ್ರ ಸರ್ಕಾರದ ಡಿಎ ಪರಿಷ್ಕರಣೆ ಯನ್ನು ಆಧರಿಸಿದ್ದು, ಗ್ರಾಹಕ ಬೆಲೆ ಸೂಚ್ಯಂಕ ಆಧಾರದ ಮೇಲೆ ನಿರ್ಧರಿತವಾಗುತ್ತದೆ. 2025ರ ಮಾರ್ಚ್ 29ರ ಪ್ರಕಾರ, ರಾಜ್ಯ ಸರ್ಕಾರವು 2024ರಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡಿದೆ.
ಮೊದಲನೆಯದಾಗಿ ಮಾರ್ಚ್ 12, 2024ರಂದು ಶೇಕಡ 3.75ರಷ್ಟು ಹೆಚ್ಚಳದೊಂದಿಗೆ ಡಿಎ ಶೇಕಡ 38.75ರಿಂದ ಶೇಕಡ 42.5ಕ್ಕೆ ಏರಿದ್ದು, ಇದು ಜನವರಿ 1, 2024ರಿಂದ ಜಾರಿ ಆಯಿತು. ಎರಡನೇಯದಾಗಿ ನವೆಂಬರ್ 27, 2024ರಂದು ಶೇಕಡ 2.25ರಷ್ಟು ಏರಿಕೆಯಾಗಿ ಡಿಎ ಶೇಕಡ 8.50ರಿಂದ ಶೇಕಡ 10.75ಕ್ಕೆ ಪರಿಷ್ಕರಿಸಲಾಗಿದ್ದು, ಇದು ಆಗಸ್ಟ್ 1, 2024ರಿಂದ ಜಾರಿ ಆಯಿತು.
ಡಿಎ ಹೆಚ್ಚಳವು ಸುಮಾರು 5.2 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ-ಮಂಡಳಿ ಸಿಬ್ಬಂದಿ ಮತ್ತು 4.5 ಲಕ್ಷ ನಿವೃತ್ತರಿಗೆ ಲಾಭ ತರಲಿದೆ. 2024ರಲ್ಲಿ ಘೋಷಿತ ಈ ಎರಡು ಹೆಚ್ಚಳಗಳು ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು 2,792 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆಯನ್ನು ಉಂಟು ಮಾಡಿದೆ. ಈ ಪರಿಷ್ಕರ ಣೆಯು 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸು ಗಳ ಆಧಾರದ ಮೇಲೆ ನಡೆಯುತ್ತದೆ ಮತ್ತು ರಾಜ್ಯದ ಆರ್ಥಿಕ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳು ತ್ತದೆ
2025ರಲ್ಲಿ ಮುಂದಿನ ಡಿಎ ಹೆಚ್ಚಳವು ಜುಲೈ 1ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಡಿಎ ಘೋಷಣೆಯ ಬಳಿಕ ಕರ್ನಾಟಕವು ಸಾಮಾನ್ಯವಾಗಿ ಎರಡರಿಂದ ಮೂರು ತಿಂಗಳಲ್ಲಿ ತನ್ನ ಆದೇಶವನ್ನು ಹೊರಡಿಸುತ್ತದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಿದರೆ ಘೋಷಣೆ ಶೀಘ್ರವಾಗಬಹುದು. ಡಿಎ ಹೆಚ್ಚಳವು ನೌಕರರ ಜೀವನ ಮಟ್ಟವನ್ನು ಸುಧಾರಿಸುವ ಜೊತೆಗೆ ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಈ ಹಿನ್ನೆಲೆ ಸರ್ಕಾರಿ ನೌಕರರು ಮುಂದಿನ ಆದೇಶಕ್ಕಾಗಿ ಕಾತರದಿಂದ ಕಾದು ಕುಳಿತಿದ್ದು ಹೆಚ್ಚಳ ಕುರಿತು ರಾಜ್ಯ ಸರ್ಕಾರ ಮುಖ್ಯಮಂತ್ರಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬೊಂದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು …..