ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮುಖ್ಯಲೆಕ್ಕಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶಂಕರನಂದ ಬನಶಂಕರಿ – ಸ್ವಾಗತ ಮಾಡಿಕೊಂಡು ಶುಭ ಹಾರೈಸಿದ ಆಯುಕ್ತ ಡಾ ರುದ್ರೇಶ ಘಾಳಿ….. ಲೆಕ್ಕಪತ್ರ ವಿಭಾಗಕ್ಕೆ ಹೊಸ ಲೆಕ್ಕಾಧಿಕಾರಿ
ರಾಜ್ಯದಲ್ಲಿಯೇ ದೊಡ್ಡ ಎರಡನೇಯ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹೊಸ ಮುಖ್ಯ ಲೆಕ್ಕಾಧಿಕಾರಿಯಾಗಿ ಶಂಕರನಂದ ಬನಶಂಕರ ವರ್ಗಾವಣೆಯಾಗಿ ಬಂದಿದ್ದಾರೆ.ಈ ಹಿಂದೆ ಇದ್ದ CAO ವಿಶ್ವನಾಥ ಅವರ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ಶಂಕರನಂದ ಬನಶಂಕರಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ.
ಆದೇಶವಾಗುತ್ತಿದ್ದಂತೆ ಇತ್ತ ಮಹಾನಗರ ಪಾಲಿಕೆಗೆ ಮುಖ್ಯ ಲೆಕ್ಕಾಧಿಕಾರಿಯಾಗಿ ಶಂಕರನಂದ ಬನಶಂಕರಿ ಅವರು ಅಧಿಕಾರವನ್ನು ವಹಿಸಿಕೊಂಡರು.ರಾಜ್ಯ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಇಂದು ಪಾಲಿಕೆ ಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡರು.ಧಾರವಾಡದ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಆಯುಕ್ತರನ್ನು ಭೇಟಿಯಾಗಿ ಅಧಿಕಾರವನ್ನು ವಹಿಸಿಕೊಂಡರು.
ಇದೇ ವೇಳೆ ಹೊಸದಾಗಿ ಪಾಲಿಕೆಗೆ ಮುಖ್ಯಲೆಕ್ಕಾಧಿಕಾರಿ ಯಾಗಿ ಆಗಮಿಸಿದ ಇವರನ್ನು ಆಯುಕ್ತ ಡಾ ರುದ್ರೇಶ ಘಾಳಿ ಯವರು ಸ್ವಾಗತ ಮಾಡಿಕೊಂಡು ಶುಭ ಹಾರೈಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..