ಹುಬ್ಬಳ್ಳಿ –
ಹುಬ್ಬಳ್ಳಿ- ಧಾರವಾಡ ನಡುವೆ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ ಸ್ವಾಗತಿಸಿದ ಕಾಂಗ್ರೇಸ್ ಪಕ್ಷದ ಯುವ ಘಟಕ ಅಧ್ಯಕ್ಷ ಅರ್ಜುನ ಪಾಟೀಲ್…..ಸಚಿವ ಸಂತೋಷ ಲಾಡ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಕೆ
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಯತ್ನದಿಂದಾಗಿ ವಿದ್ಯುತ್ ಚಾಲಿತ ಕ್ಷೀಪ್ರ ಸಾರಿಗೆ ಯೋಜನೆ ಆರಂಭವಾಗುತ್ತಿದೆ.ಈ ಒಂದು ಕುರಿತಂತೆ ಬೆಂಗಳೂರಿನಲ್ಲಿ ನೂತನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವ ದಲ್ಲಿ ಒಪ್ಪಂದವನ್ನು ಮಾಡಲಾಯಿತು.
ಎಚ್‌ಇಎಸ್‌ಎಸ್ ಎಜಿ, ಹೆಸ್ (HESS) ಇಂಡಿಯಾ ಮತ್ತು ಎಸ್‌ಎಸ್‌ಬಿ ಎಜಿ ಕಂಪನಿಗಳೊಂದಿಗಿನ ಈ ಒಂದು ಹೊಸ ಯೋಜನೆಯೂ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸಂತೋಷ ಲಾಡ್ ಅವರ ಪ್ರಯತ್ನದಿಂದಾಗಿ ಅವಳಿ ನಗರಕ್ಕೆ ಮತ್ತೊಂದು ಹೊಸ ಯೋಜನೆ ಬಂದಂತಾಗಿದ್ದು ಇತ್ತೀಚಿಗಷ್ಟೇ ಸ್ವಿಟ್ಜರ್ಲ್ಯಾಂಡ್ ಗೆ ಭೇಟಿ ನೀಡಿ ಯೋಜನೆಯ ಪ್ರಾಯೋಗಿಕ ಕಾರ್ಯ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಿದ್ದರು.
ಅಲ್ಲದೇ ಮುಖ್ಯಮಂತ್ರಿ ಯವರಿಗೂ ಈ ಒಂದು ವಿಚಾರ ಕುರಿತಂತೆ ಮಾಹಿತಿಯನ್ನು ನೀಡಿದ್ದರು ಸಚಿವರ ನಿರಂತರ ಹೋರಾಟ ಅಧ್ಯಯನದ ಫಲವಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳ ನಡುವೆ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ ಆರಂಭವಾಗುತ್ತಿದೆ.ಯೋಜನೆ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿ, ಸಾಧಕ- ಭಾದಕಗಳ ಕುರಿತು ಚರ್ಚಿಸಿ ಅಂತಿಮವಾಗಿ ಒಪ್ಪಂದಕ್ಕೆ ಒಪ್ಪಿಗೆ ಯನ್ನು ನೀಡಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೂ
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಂತೋಷ ಲಾಡ್ ಅವರಿಗೂ ಸಾರಿಗೆ ಸಚಿವರಾರಿಗರುವ ರಾಮಲಿಂಗ ರೆಡ್ಡಿ ಯವರಿಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗ ಳಿಗೂ ಕಾಂಗ್ರೇಸ್ ಪಕ್ಷದ ಯುವ ಘಟಕದ ಅಧ್ಯಕ್ಷರಾ ಗಿರುವ ಅರ್ಜುನ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..