ಹುಬ್ಬಳ್ಳಿ –
ಅಪಘಾತ ಮಾಡಿದ ಚಾಲಕರಿಗೆ ಸನ್ಮಾನ ಮಾಡಿ ಚಾಲಕರಿಗೆ ಅವಮಾನ ಮಾಡಿದ ಘಟನೆ ಹುಬ್ಬಳ್ಳಿಯ BRTS ಡಿಪೋ ದಲ್ಲಿ ನಡೆದಿದೆ.ಹೌದು ಹುಬ್ಬಳ್ಳಿಯ ಬಿಆರ್ ಟಿಎಸ್ ಘಟಕದ ಎರಡು ಬಸ್ ಗಳು ಧಾರವಾಡದ ಟೋಲ್ ನಾಕಾ ದ ಬಳಿ ಅಪಘಾತ ಗಳಾಗಿವೆ
ಇನ್ನೂ ಪ್ರಮುಖ ವಾಗಿ ಮುಂದೆ ಹೊರಟಿದ್ದ ಬಸ್ ಸ್ವಲ್ಪ ಮಟ್ಟಿಗೆ ನಿಧಾನವಾಗಿದೆ ಈ ಒಂದು ಸಂದರ್ಭದಲ್ಲಿ ಹಿಂದೆ ಬರುತ್ತಿದ್ದ ಬಸ್ ನ ಬ್ರೇಕ್ ಹಾಕಲು ಚಾಲಕ ಮುಂದಾಗಿದ್ದು ಬ್ರೇಕ್ ಹತ್ತಿಲ್ಲ ಬ್ರೇಕ್ ಹಾಕಿದರು ಕೂಡಾ ನಿಂತುಕೊಂಡಿಲ್ಲ ಹೀಗಾಗಿ ಮುಂದೆ ಹೊರಟಿದ್ದ ಬಸ್ ಗೆ ಹಿಂದಿನ ಬಸ್ ಡಿಕ್ಕಿ ಯಾಗಿದೆ
ಈ ಒಂದು ಅಪಘಾತ ಚಾಲಕರ ನಿರ್ಲಕ್ಷ್ಯ ದಿಂದ ಆಗಿಲ್ಲ ಬಸ್ ಗಳು ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮ ವಾಗಿ ಅಪಘಾತ ವಾಗಿದ್ದು ಈ ಒಂದು ಮಾಹಿತಿ ಗಮನಕ್ಕೆ ಬರುತ್ತಿದ್ದಂತೆ ಹಿಂದೆ ಮುಂದೆ ನೋಡದೆ ತಿಳಿದು ಕೊಳ್ಳದ DC ಸಿದ್ದಲಿಂಗಯ್ಯ ಇಬ್ಬರು ಚಾಲಕ ರನ್ನು ಡಿಪೋ ಗೆ ಬರಮಾಡಿಕೊಂಡು ಸನ್ಮಾನಿಸಿ ಅವಮಾನ ಮಾಡಿದ್ದಾರೆ.
ಹುಬ್ಬಳ್ಳಿಯ BRTS ಡಿಪೋ ದಲ್ಲಿ ಈ ಒಂದು ಘಟನೆ ನಡೆದಿದೆ.ಮುಂದೆ ಹೋಗುತ್ತಿದ್ದ ಚಿಗರಿ ಬಸ್ ಬ್ರೇಕ್ ಹಾಕಿದಾಗ ಹಿಂದೆ ಹೋಗುತ್ತಿದ್ದ ಬಸ್ ನ್ನು ನಿಲ್ಲಿಸಲು ಚಾಲಕನ ಪ್ರಯತ್ನ ಮಾಡಿದಾಗಲೂ ಕೂಡಾ ನಿಂತು ಕೊಳ್ಳದೇಬ್ರೇಕ್ ಹತ್ತದಿದ್ದಾಗ ಮುಂದಿನ ಬಸ್ ಗೆ ಡಿಕ್ಕಿ ಹೊಡೆದಿದೆ ಚಿಗರಿ ಬಸ್
ಯಾವುದೇ ಪ್ರಾಣ ಹಾನಿ ಯಾಗದೇ ಬಸ್ ನ ಮುಂಭಾಗ ಇನ್ನೊಂದು ಬಸ್ ನ ಹಿಂದಿನ ಗ್ಲಾಸ್ ಜಖಂ ಆಗಿದೆ.ಎರಡು ಬಸ್ ಗಳ ಚಾಲಕರನ್ನು ಡಿಪೋ ಬರಮಾಡಿಕೊಂಡು ಸನ್ಮಾನಿಸಿ ಅವಮಾನಿಸಿದ್ದಾರೆ ಡಿಸಿ ಡಿಸಿ ಪೊನ್ ಮಾಡಿ ಇದನ್ನು ಹೇಳಿದ ನಂತರ ಡಿಪೋ ಮ್ಯಾನೇಜರ್ ಈ ಒಂದು ಕೆಲಸ ಮಾಡಿದ್ದಾರೆ
ಬಸ್ ಗಳ ಮುಂದೆ ಚಾಲಕರನ್ನು ನಿಲ್ಲಿಸಿ ಮಾಲೆ ಹಾಕಿ ಈ ಒಂದು ಪೊಟೊ ವನ್ನು ತಮ್ಮ ಮೊಬೈಲ್ ಗೆ ಹಾಕಿಸಿ ಕೊಂಡ ಡಿಸಿ ನಮನತರ ಸನ್ಮಾನ ಮಾಡಿದ ಈ ಒಂದು ಚಾಲಕರ ಪೊಟೊ ಗಳನ್ನು ಗ್ರೂಪ್ ಗೆ ಹಾಕಿ ದೊಡ್ಡ ಮಹಾನ್ ಕಾರ್ಯವನ್ನು ಮಾಡಿ ಅವಮಾನಿಸಿದ್ದಾರೆ ಅಧಿಕಾರಿಗಳ ನಡೆಗೆ ಆಕ್ರೋಶ ಅಸಮಾಧಾನ ವ್ಯಕ್ತವಾಗಿದೆ
ಇಲಾಖೆಯ ಅಧಿಕಾರಿಗಳ ನಡೆಗೆ ಬೇಸತ್ತ ಚಾಲಕರಿಂದ ಪ್ರತಿಭಟನೆ ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ ಇನ್ನೂ ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಬೀದಿಗಿಳಿ ಯಲಿದ್ದಾರೆ ಚಾಲಕರುಬಸ್ ಬಂದ್ ಮಾಡಿ ಶೀಘ್ರದಲ್ಲೇ ಪ್ರತಿಭಟನೆ ಗೆ ನಿರ್ಧಾರ ಕೈಗೊಂಡಿದ್ದಾರೆ ಚಾಲಕರು
ಸನ್ಮಾನ ನೆಪದಲ್ಲಿ ಅವಮಾನ ಮಾಡಿದವರಿಗೆ ಪಾಠ ಕಲಿಸಲು ಮುಂದಾಗಿದ್ದಾರೆ ಚಾಲಕರು ಇನ್ನೂ ಒಳ್ಳೆಯ ಕೆಲಸ ಮಾಡಿ ಡಿಸಿ ಗೆ ಮೊದಲು ಸಾರಿಗೆ ಸಚಿವರಿಗೆ ಹೇಳಿ ಸನ್ಮಾನ ಮಾಡಿಸಿ ಗೌರವಿಸಬೇಕಿದೆ ಅದನ್ನು ಕೂಡಾ ಸುದ್ದಿ ಸಂತೆ ಟೀಮ್ ಸರಣಿ ವರದಿಗಳ ಮೂಲಕ ಸಾರಿಗೆ ಸಚಿವರ ಗಮನಕ್ಕೆ ತರಲಿದೆ
ಮೊದಲು ಬಸ್ ಗಳ ಪರಿಸ್ಥಿತಿ ಹೇಗಿದೆ ಒಮ್ಮೆ ನೋಡಿ ಆ ಮೇಲೆ ಇಂತಹ ಕಾರ್ಯ ಕೆಲಸವನ್ನು ಮಾಡಿ ಡಿಸಿ ಯವರೇ ನೀವು ಬಂದ ಮೇಲೆ ಬಿಆರ್ ಟಿಎಸ್ ನಲ್ಲಿ ಹೌದು ಅನ್ನುಂತಹ ಒಂದೇ ಒಂದು ಕೆಲಸ ಗಳಾಗಿಲ್ಲ ಇಂತಹ ಕೆಲಸ ಮಾಡುತ್ತಿರುವ ನಿಮಗೆ ಚಾಲಕರ ಶಾಪ ತಟ್ಟಲಿದೆ ನೋಡತಾ ಇರಿ.
ಪ್ರಮೋದ್ ಜೊತೆ ಅಲಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..