ಗೋಕಾಕ –
ಹಾರ್ಟ್ ಅಟ್ಯಾಕ್ ಗೆ ASI ಬಲಿ – ಹುಬ್ಬಳ್ಳಿಯ ASI ಮೀರಾನಾಯಕ್ ಸಾವು…..ಡೂಟಿ ಮೇಲಿದ್ದಾಗಲೇ ಸಾವು
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಆತಂಕವನ್ನುಂಟು ಮಾಡಿರುವ ಹೃದಯಾಘಾತವು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಮತ್ತಷ್ಟು ತಲ್ಲವನ್ನುಂಟು ಮಾಡಿದ್ದು ಈ ನಡುವೆ ಈ ಒಂದು ಹಾರ್ಟ್ ಅಟ್ಯಾಕ್ ಗೆ ಬೆಳಗಾವಿ ಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಾವಿಗೀ ಡಾಗಿದ್ದಾರೆ.ಹೌದು ಐತಿಹಾಸಿಕ ಗೋಕಾಕ್ ನ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ.
ಜಾತ್ರೆಯ ಬಂದೋಬಸ್ತ್ ಗೆ ಬಂದಿದ್ದ ಎಎಸ್‌ಐ ರೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿ ದ್ದಾರೆ.ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಎಲ್.ಜೆ ಮೀರಾನಾಯಕ್ ಹೃದಯಾಘಾತದಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿ ಯಾಗಿದ್ದಾರೆ.ಹುಬ್ಬಳ್ಳಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್.ಜೆ ಮೀರಾನಾಯಕ್.
ಗೋಕಾಕ್ ಲಕ್ಷ್ಮಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಗೆ ಬಂದಿದ್ದರು.ಗೋಕಾಕ್ ಪಟ್ಟಣದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡಿದ್ದ ಇವರು ಅಲ್ಲಿಯೇ ಸಾವಿಗೀಡಾಗಿದ್ದಾರೆ.ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಮೃತರ ಶವವನ್ನು ಶಿಪ್ಟ್ ಮಾಡ ಲಾಗಿದೆ.ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರ ಮಾಡಿದ್ದು ಎಸ್‌ಪಿ ಭೀಮಾ ಶಂಕರ್ ಗುಳೇದ್ ಸೇರಿ ಹಿರಿಯ ಅಧಿಕಾರಿಗಳ ಸಂತಾಪವನ್ನು ಸೂಚಿಸಿದ್ದಾರೆ.
ಗೋಕಾಕ್ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಇನ್ನೂ ಇತ್ತ ಹುಬ್ಬಳ್ಳಿ ಧಾರವಾಡ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಮೀರಾ ನಾಯಕ್ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ ಪೊಲೀಸ್ ಆಯುಕ್ತ ಶಶಿಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ನವನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿಗಳು ಸಂತಾಪವನ್ನು ಸೂಚಿಸಿ ದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..