ಹುಬ್ಬಳ್ಳಿ ಧಾರವಾಡ –
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಯ ಮತ್ತೊಂದು ವಿಕೆಟ್ ಪತನವಾಗಿದೆ ಹೌದು ಈಗಾಗಲೇ ಹಲವು ಅಧಿಕಾರಿಗಳು ಸಿಬ್ಬಂದಿ ಗಳ ವರ್ಗಾವಣೆ ಬೆನ್ನಲ್ಲೇ ಪಾಲಿಕೆಯ ಮತ್ತೊಂದು ಮಹಾನ್ ವಿಕೆಟ್ ವೊಂದು ಪತನ ಬಗಿದೆ ಹೌದು ಪಾಲಿಕೆಯಲ್ಲಿ ಸಿವಿಲ್ ವಿಭಾಗದಲ್ಲಿ ಸಹಾಯಕ ಅಭಿಯಂತರಾಗಿದ್ದ ರವೀಂದ್ರ ಅನದಿನ್ನಿ ವರ್ಗಾವಣೆ ಯಾಗಿದ್ದಾರೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಯಿಂದ ದೂರದ ತುಮಕೂರಿನ ಮಹಾನಗರ ಪಾಲಿಕೆ ಯಲ್ಲಿ ಖಾಲಿ ಇರುವ ಸಿವಿಲ್ ವಿಭಾಗದ ಸಹಾಯಕ ಅಭಿಯಂತರರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ ಇನ್ನೂ ಈ ಒಂದು ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಯವರು ಆದೇಶವನ್ನು ಮಾಡಿದ್ದು ಇತ್ತ ವರ್ಗಾವಣೆ ಯಾಗಿರುವ ಇವರನ್ನು ಪಾಲಿಕೆಯ ಆಯುಕ್ತರು ಯಾವಾಗ ಬಿಡುಗಡೆ ಮಾಡ್ತಾರೆ ಎಂಬ ಪ್ರಶ್ನೆ ಯ ನಡುವೆ ವರ್ಗಾವಣೆ ಯಾಗಿರುವ ಇವರು ಮಹಾನ್ ಪಂಡಿತ ನೊಂದಿಗೆ ಈ ಒಂದು ವರ್ಗಾವಣೆ ಯನ್ನು ಕ್ಯಾನ್ಸಲ್ ಮಾಡಿಸಿಕೊಳ್ಳಲು ಬೆಂಗಳೂರಿನಲ್ಲಿ ಠಿಕಾಣೆ ಹೂಡಿದ್ದು ಎಲ್ಲವೂ ಈಗ ದೀಡ ಪಂಡಿತ ನ ಕೈಯಲ್ಲಿ ಇದೆ.
ಒಟ್ಟಾರೆ ಏನೇ ಆಗಲಿ ಆದೇಶ ಆದ ಮೇಲೆ ಸರ್ಕಾರದ ನಿಯಮಗಳಂತೆ ಬಿಡುಗಡೆ ಮಾಡಲೇಬೇಕು ಇಲ್ಲದಿದ್ದರೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಪಂಡಿತ ಮಾಡುತ್ತಿರುವ ಆಟ ಬಲ್ಲವರು ಯಾರು ಎಂಬ ಮಾತುಗಳು ಮತ್ತೆ ಸದ್ದಾಗಲಿವೆ.
ಪ್ರಮೋದ್ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.