ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ದಲ್ಲೂ ಮಹಾನಗರ ಪಾಲಿಕೆಯ ನೌಕರರಿಂದ ಪ್ರತಿಭಟನೆ – ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ಮಾಡಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ ನೌಕರರು ಸಿಬ್ಬಂದಿಗಳು…..
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲಿ ಕರೆ ನೀಡಿರುವ ಮಹಾನಗರ ಪಾಲಿಕೆಯ ನೌಕರರ ಪ್ರತಿಭಟನೆಗೆ ಹುಬ್ಬಳ್ಳಿಯಲ್ಲೂ ಬೆಂಬಲ ಕಂಡು ಬಂದಿದೆ ರಾಜ್ಯವ್ಯಾಪಿ ಕರೆ ನೀಡಿರುವ ಪಾಲಿಕೆಯ ನೌಕರರ ಈ ಒಂದು ಹೋರಾಟಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೌಕರರು ಸಿಬ್ಬಂದಿಗಳು ಬೆಂಬಲವನ್ನು ನೀಡಿದ್ದು ಪ್ರತಿಭಟನೆ ಮಾಡಿದ್ರು.
ಧಾರವಾಡದಲ್ಲಿ ಪಾಲಿಕೆಯ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ರೆ ಇತ್ತ ಹುಬ್ಬಳ್ಳಿಯಲ್ಲೂ ಮಹಾ ನಗರ ಪಾಲಿಕೆ ಸಿಬ್ಬಂದಿಯಿಂದ ಪ್ರತಿಭಟನೆ ಕಂಡು ಬಂದಿತು.ಪ್ರತಿಭಟನೆಯ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳು ಅಧಿಕಾರಿಗಳು ಕಚೇರಿ ಯಿಂದ ದೂರ ಉಳಿದು ಹೋರಾಟವನ್ನು ಮಾಡಿದ್ರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಒಂದು ಹೋರಾಟಕ್ಕೆ ಕರೆ ನೀಡಲಾಗಿದ್ದು ಹೀಗಾಗಿ ಬೆಂಬಲ ವನ್ನು ಸೂಚಿಸಿದ ನೌಕರರು ಅಧಿಕಾರಿಗಳು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪ್ರತ್ಯೇಕವಾಗಿ ಹೋರಾಟವನ್ನು ಮಾಡಿದ್ರು.ಪಾಲಿಕೆಯ ಆಯುಕ್ತರ ಕಚೇರಿ ಮುಂದೆ ನೌಕರರು ಸಂಘಟನೆಯ ನೇತ್ರತ್ವದಲ್ಲಿ ಈ ಒಂದು ಪ್ರತಿಭಟನೆಯನ್ನು ಮಾಡಿ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದರು
ನೌಕರರು ಸಿಬ್ಬಂದಿಗಳು.ಇನ್ನೂ ಮಹಾನಗರ ಪಾಲಿಕೆ ಸಿಬ್ಬಂದಿ ಅಧಿಕಾರಿಗಳು ಕೆಲಸಕ್ಕೆ ಗೈರಾಗಿದ್ದ ಹಿನ್ನಲೆ ಯಲ್ಲಿ ಸಿಬ್ಬಂದಿ ಇಲ್ಲದೇ ಕಚೇರಿಗಳು ಬಣಬಣ ಅಂತಿರುವ ದೃಶ್ಯಗಳು ಕಂಡು ಬಂದವು.ಪ್ರತಿನಿತ್ಯ ಜನರಿಂದ ತುಂಬಿರುತ್ತಿದ್ದ ಪಾಲಿಕೆ ಬಿಕೋ ಬಿಕೋ ಎನ್ನುತ್ತಿರುವ ದೃಶ್ಯಗಳು ಕಂಡು ಬಂದವು.ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿ ಗಳು ಅಧಿಕಾರಿಗಳು ಈ ಒಂದು ಹೋರಾಟದೊಂದಿಗೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.
ಪ್ರಮೋದ ಕಪ್ಪಲಿ ಜೊತೆ ಅಲಿ ಕುಂದಗೋಳ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ