This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

ಕಲಕೇರಿ ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು “ಮತದಾನ” – ಮತ ಚಲಾಯಿಸಿ ಚುನಾವಣೆ ಕುರಿತು ಕುರಿತು ಮಾಹಿತಿ ಪಡೆದುಕೊಂಡರು ವಿದ್ಯಾರ್ಥಿಗಳು…..ಶಾಲಾ ಸಂಸತ್ ಚುನಾವಣೆ ಹೇಗಿತ್ತು ನೋಡಿ…..

ಕಲಕೇರಿ ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು “ಮತದಾನ” – ಮತ ಚಲಾಯಿಸಿ ಚುನಾವಣೆ ಕುರಿತು ಕುರಿತು ಮಾಹಿತಿ ಪಡೆದುಕೊಂಡರು ವಿದ್ಯಾರ್ಥಿಗಳು…..ಶಾಲಾ ಸಂಸತ್ ಚುನಾವಣೆ ಹೇಗಿತ್ತು ನೋಡಿ…..
WhatsApp Group Join Now
Telegram Group Join Now

ಧಾರವಾಡ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಎಷ್ಟೊಂದು ಅಮೂಲ್ಯ ಎಂಬುದನ್ನು ಶಾಲಾ ಚುನಾವಣಾ ಆಯೋಗವು ಪ್ರತಿಯೊಬ್ಬರ ಒಳಗೊಳ್ಳುವಿಕೆ ಮತ್ತು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದಕ್ಕೆ ಬದ್ಧವಾಗಿದೆ ಎಂದು ಅಣಕು “ಮನೆ ಮತದಾನ”ದ ಮೂಲಕ ತೊರಿಸಿಕೊಟ್ಟಿದೆ. ಮತದಾನ ಕೇಂದ್ರಗಳಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಡೆತಡೆಗಳನ್ನು ಎದುರಿಸುವ ಮತ ದಾರರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಪ್ರಗತಿಪರ ಕ್ರಮವಾಗಿದೆ.

ಹೌದು ಕಲಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜುಲೈ ೦೯ ರಂದು ಶಾಲಾ ಸಂಸತ್ತಿಗೆ ಇಂದು ನಡೆದಿರುವ ಮತದಾನದಲ್ಲಿ ಸೃಷ್ಟಿ ತುಳಜಮ್ಮನವರ ೯ ನೇ ತರಗತಿ ಅಣಕು “ಮನೆ ಮತದಾನ” ಮಾಡುವ ಮೂಲಕ ಪ್ರಜಾ ಪ್ರಭುತ್ವ ಸಬಲಿಕರಣಕ್ಕೆ ಸಾಕ್ಷಿಯಾದರು. ವಿಶೇಷ ಚೇತನರ (ಪಿಡಬ್ಲ್ಯುಡಿ) ಮತ್ತು ೮೫ ವರ್ಷ ಮೇಲ್ಪಟ್ಟ ವರಿಗೆ ಮನೆಯಿಂದಲೆ ಮತದಾನ ಮಾಡುವುದಕ್ಕೆ ಅವಕಾಶ ನೀಡಿರುತ್ತದೆ.ಈ ಅವಕಾಶವನ್ನು ಬಳಸಿ ಕೊಂಡು ೯೧ ವರ್ಷ ವಯೋವೃದ್ಧೆ ವೇಶಭೂಷಣ ಧರಿಸಿಕೊಂಡ “ಸೃಷ್ಟಿ ತುಳಜಮ್ಮನವರ” ಮತವನ್ನು ಚಲಾಯಿಸಿದರು.

ಮತದಾನ ಮಾಡುವ ಮೂಲಕ ಉತ್ತಮ ವ್ಯವಸ್ಥೆ ಗಮನಿಸಿ ಸಾಹೆಬ್ರಿಗೆ (ಪ್ರಶಾಂತ ಝಳಕಿ ಪ್ರಭಾರಿ ಮುಖ್ಯಶಿಕ್ಷಕರು ಶಾಲಾ ಚುನಾವಣೆ ಎ.ಆರ್.ಓ ಮತ್ತು ತಂಡದವರಿಗೆ) ಅಭಿನಂದನೆಗಳನ್ನು ತಿಳಿಸಿದರು. ನನಗೆ ವಯಸ್ಸಾಗಿದೆ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ ಮನೆಗೆ ಬಂದು ಮತಗಟ್ಟೆಮಾಡಿ ಮತಹಾಕಲು ಸಹಾಯ ಮಾಡಿದ ತಮಗೆ ಹಾಗೂ ಆಯೋಗಕ್ಕೆ(ಮುಖ್ಯಾಧ್ಯಾಪಕರಿಗೆ) ಕೃತಜ್ಞತೆ ಸಲ್ಲಿಸಿದಳು.

ಮತದಾನ ಬಹಿಷ್ಕಾರ ಮನವೊಲಿಕೆ ಹುಣಸಿಕುಮರಿ ಗ್ರಾಮದ ವಿದ್ಯಾರ್ಥಿಗಳು ಹಳ್ಳಿಗೆ ಬಸ್ ವ್ಯವಸ್ಥೆ ಸರಿಯಾದ ವೇಳೆಗೆ ಬರುತ್ತಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದ್ದು, ಮನವೊಲಿಸುವ ಕೆಲಸ ವನ್ನು ಅಧಿಕಾರಿಗಳು ನಡೆಸಿದರು,ನಂತರದಲ್ಲಿ ಮತದಾನ ಮಾಡುವ ಮೂಲಕ ಮತೋತ್ಸವಕ್ಕೆ ಜೈ ಎನ್ನಲಾಯಿತು.

ಮತಗಟ್ಟೆಯಲ್ಲಿ ೯೯ ರಷ್ಟು ಮತದಾನ ಕಲಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿಗೆ ಇಂದು ನಡೆದಿರುವ ಮತದಾನ ಬಹುತೇಕ ಶಾಂತಿ ಯುತವಾಗಿದ್ದು ಮತದಾರರು ಉತ್ಸಾಹದಿಂದ ಮತಚಲಾಯಿಸಿದರು. ಮತಯಂತ್ರ ದೋಷ, ಮತದಾನ ಬಹಿಷ್ಕಾರ, ಕೆಲವು ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿ.

ಮತದಾನ ಸುಗಮವಾಗಿ, ಶಾಂತಿಯುತವಾಗಿ ಸಾಗಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿ ಯಾಗಿಲ್ಲ.ಶಾಲೆಯ ಎಲ್ಲ ೮ ರಿಂದ ೧೦ನೇ ತರಗತಿ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ ೧೧-೩೦ಕ್ಕೆ ಮತದಾನ ಆರಂಭವಾಗಿ, ಮತದಾರರು ಭಾರಿ ಉತ್ಸಾಹದಿಂದ ಮತ ಚಲಾಯಿಸಿದರು. ಬೆಳಿಗ್ಗೆಯೇ ಮತಗಟ್ಟೆಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು.

ಶಾಲೆಯ ಎಲ್ಲ ಮತಗಟ್ಟೆಗಳಲ್ಲೂ ಬೆಳಿಗ್ಗೆಯೇ ಬಿರುಸಿನ ಮತದಾನ ನಡೆದಿದ್ದು, ಮಧ್ಯಾಹ್ನ ೧೨ ಗಂಟೆ ವೇಳೆಗೆ ಶೇ. ೯೯ ರಷ್ಟು ಮತದಾನ ಆಗಿದೆ. ಮತದಾರರನ್ನು ಮತ ಗಟ್ಟೆಗೆ ಸೆಳೆಯುವ ಚುನಾವಣಾ ಆಯೋಗದ ಪ್ರಯತ್ನ ಗಳು ಯಶಸ್ವಿಯಾಗಿದ್ದು, ಶಾಲೆಯ ಎಲ್ಲ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಬೆಳ್ಳಂಬೆಳಿಗ್ಗೆಯೇ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ, ಮತ ಹಾಕಿ ಪ್ರಜಾತಂತ್ರದ ಹಬ್ಬಕ್ಕೆ ಜೈ ಎಂದಿದ್ದಾರೆ.

ಎಲ್ಲೆಡೆ ಮತದಾನ ಬಿರುಸಿನಿಂದ, ಶಾಂತಿಯುತವಾಗಿ ನಡೆಯಿತು.ಬಿಗಿಬಂದೋಬಸ್ತ್ ಅಹಿತಕರ ಘಟನೆ ಇಲ್ಲ ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಶಾಲಾ ಚುನಾವಣಾ ಆಯೋಗ ಎಲ್ಲ ವ್ಯವಸ್ಥೆ ಮಾಡಿದ್ದು, ಮತದಾನ ಸಂದರ್ಭದಲ್ಲಿ ಮಧ್ಯಾಹ್ನದವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಎಲ್ಲ ಮತಗಟ್ಟೆಗಳಲ್ಲೂ ಶಾಲಾ ವಿದ್ಯಾರ್ಥಿಗಳೇ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬಿಗಿ ಭದ್ರತೆಯಲ್ಲಿ ಮತದಾನ ನಡೆದಿದೆ.

ಇವಿಎಂ ತಾಂತ್ರಿಕ ತೊಂದರೆ; ತರಗತಿಯಲ್ಲಿ ಮತ ಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಮತಯಂತ್ರ ಸರಿಪಡಿಸಿದ ನಂತರ ಮತದಾನ ವಿಳಂಬವಾಗಿ ಆರಂಭವಾಗಿದೆ.
ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗಳನ್ನು ಆರಿಸುವ ಮೂಲಕ ರಾಷ್ಟöçದ ಅಭಿವೃದ್ಧಿಗೆ ಅಡಿಪಾಯವಾ ಗಲಿದೆ ಎಂದು ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್ ಕರೆನೀಡಿದರು

ಕಲಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ “ಮನೆ ಮತದಾನ” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಶಾಲಾ ಸಂಸತ್ ಚುನಾವಣೆಯನ್ನು ಹಮ್ಮಿಕೊಳ್ಳಲಾಯಿತು. ಅವರು ಉಪನ್ಯಾಸ ನೀಡುತ್ತಾ ಮಾತನಾಡಿ ಮತದಾರ ಪ್ರಭುಗಳು ತಮ್ಮ ಕಡ್ಡಾಯ ಮತದಾನದಿಂದ ಸರಿಯಾದ ಕ್ರಮದಲ್ಲಿ ರಾಷ್ಟöçದ ಅಭಿವೃದ್ಧಿ ಕೈಗೊಳ್ಳದಿದ್ದರೆ,ಹಾಗೂ ಆಯ್ಕೆಯಾದ ಜನಪ್ರತಿನಿದಿಗಳು ಸರಿಯಾದ ಸೇವೆ ನೀಡದಿದ್ದರೆ ಜನರೆ ಅಧಿಕಾರದಿಂದ ದೂರಮಾಡುತ್ತಾರೆ ಎಂಬುವುದಕ್ಕೆ ನಮ್ಮ ನೆರೆಹೊರೆ ರಾಷ್ಟçಗಳೇ ಉದಾರಣೆಯಾಗಿವೆ. ಹಾಗಾಗಿ ನಾವು ನೀಡುವ ಮತವು ಅಭಿವೃದ್ಧಿ ಪಥದತ್ತ ಸಾಗುವ ವ್ಯಕ್ತಿಗಳಿಗೆ ದೊರೆಯಬೇಕೆಂದು ಕರೆ ನೀಡಿದರು.ಮನೆ ಮತದಾನ ಮಾಡುವುದರಿಂದ ದುರ್ಬಲರಿಗೆ ಮತದಾನ ಮಾಡಲು ಅವಕಾಶ ಮಾಡಿ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಾಗಿದೆ ಎಂದರು.
ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಝಳಕಿ ಮಾತನಾಡಿ “ಇಂದಿನ ಮಕ್ಕಳೇ – ನಾಳೆಯ ನಾಡಿನ ಪ್ರಜೆ (ಭು)ಗಳು” ನಮ್ಮದು ಪ್ರಜಾಪ್ರಭುತ್ವ ರಾಷ್ಟöç, ಪ್ರಜೆಗಳಿಂದ, ಪ್ರಜೆಗಳಿಗಾಗಿ ಆರಿಸಲ್ಪಟ್ಟ ಪ್ರಜಾಪ್ರತಿನಿಧಿಗಳೇ ನಡೆಸುವ ಸರ್ಕಾರ. ಈ ಪ್ರಜಾಪ್ರಭುತ್ವದ ಯಶಸ್ಸು ಪ್ರe್ಞÁವಂತ, ವಿದ್ಯಾವಂತ ಮತದಾರರನ್ನು ಅವಲಂಬಿಸಿದೆ. ಇಲ್ಲಿ ‘ಚುನಾವಣೆ’ಗಳು ಮಹತ್ತರ ಪಾತ್ರವಹಿಸುತ್ತವೆ. ಪ್ರಜೆಗಳು ನೀಡುವ ಮತವು ಮುಂದೊAದು ದಿನ ಅಭಿವೃದ್ಧಿ ಪಥದತ್ತಸಾಗಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟçಗಳ ಪಟ್ಟಿಗೆ ಸೇರಲಿದೆ ಎಂದರು.
ಹೌದು ೨೦೨೫-೨೬ ನೇ ಸಾಲಿನ ಶೇ. ೯೯ರಷ್ಟು ಮತದಾನವಾಗಿ, ಚುನಾವಣಾ ಆಯೋಗ ಬಳಸುವ ವಿದ್ಯುನ್ಮಾನ ಮತ ಯಂತ್ರದAತೆಯೇ ಇರುವ ಮೋಬೈಲ್ ಮತಪೆಟ್ಟಿಗೆಯಲ್ಲಿ ಶಾಲಾ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು. ಫಲಿತಾಂಶಕ್ಕಾಗಿ ಶಾಲಾ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದರು.
ಮುಖ್ಯ ಚುನಾವಣಾಧಿಕಾರಿಗಳ ಸೂಚನೆಯಂತೆ ಸಾರ್ವತ್ರಿಕ ಚುನಾವಣೆಯ ಹಂತಗಳಾದ ಅಧಿಸೂಚನೆ ಪ್ರಕಟಣೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಲಾಟರಿ ಮೂಲಕ ಚಿಹ್ನೆಗಳ ಆಯ್ಕೆ, ಅಳಿಸಲಾಗದ ಶಾಯಿ, ಕಣದಲ್ಲಿ ಒಟ್ಟು ೧೭ ವಿದ್ಯಾರ್ಥಿಗಳಿದ್ದು ೧೧ ಪ್ರತಿನಿಧಿಗಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮೂರು ದಿನಗಳಿಂದ ಬಿಡುವಿನ ವೇಳೆಯಲ್ಲಿ ಕೆಲವು ವಿದ್ಯಾರ್ಥಿಗಳು ಪ್ರಚಾರದಲ್ಲಿ ತೊಡಗಿದ್ದರು. ತಮಗೇ ಮತ ನೀಡುವಂತೆ ತಮ್ಮ ಸಹಪಾಠಿಗಳ ಮನವೊಲಿಕೆಯ ದೃಶ್ಯ ಸಾಮಾನ್ಯ ಚುನಾವಣೆಗಳಲ್ಲಿ ನಡೆಯುವಂತೆ ಕಂಡುಬAತು.
ಒಟ್ಟಾರೆ ಶೇ. ೯೯ ರಷ್ಟು ಮತದಾನವಾಗಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿತ್ತು, ಇನ್ನೂ ಫಲಿತಾಂಶ ಪ್ರಕಟಣೆಯಾಗುತ್ತಿದ್ದಂತೆ ಪ್ರಧಾನಮಂತ್ರಿಯಾಗಿ ಪ್ರಧಾನಮಂತ್ರಿಯಾಗಿ ಕಾರ್ತಿಕ ಅಮರಗೋಳ, ಉಪಪ್ರಧಾನಮಂತ್ರಿಯಾಗಿ ಶ್ರೇಯಾ ಚವಲಗಿ, ಕ್ರೀಡಾ ಮಂತ್ರಿ-ಸಮರ್ಥ ಪಾಗೋಜಿ, ಸಾಂಸ್ಕೃತಿಕ ಮಂತ್ರಿ-ಪ್ರತಿಜ್ಞಾ ಪಾಗೋಜಿ, ವಿದ್ಯಾ ಮಂತ್ರಿ – ಸಂಜನಾ ಪಾಗೋಜಿ, ಪ್ರಾರ್ಥನಾ ಮಂತ್ರಿ- ಸಾಬಪ್ಪಾ ಮುರಕಟ್ಟಿ, ಗ್ರಂಥಾಲಯ ಮಂತ್ರಿ – ಚೈತ್ರಾ ಇದ್ಲಿ, ಆಹಾರ ಮಂತ್ರಿ-ಕೃಷ್ಣ ರಾಟೋಳ್ಳಿ, ಪ್ರವಾಸ ಮಂತ್ರಿ- ಸಾಯಿನಾಥ ಅವರಾಧಿ ಆರೋಗ್ಯ ಮಂತ್ರಿ-ವಿನಾಯಕ ಹಡಪದ ಆಯ್ಕೆಯಾಗುತ್ತಿದ್ದಂತೆ ಜಯಘೋಷಣೆ ಮುಳುಗಿತು. ಸಭಾಧ್ಯಕ್ಷರು – ಸಮರ್ಥ ಪಾಗೋಜಿ ವಿರೋಧ ಪಕ್ಷದ ನಾಯಕಿ- ರೇವತಿ ಪಾಗೋಜಿ ವಿದ್ಯಾದೇವತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೆ. ಗೆದ್ದ ಅಭ್ಯರ್ಥಿಯ ಜೊತೆ ಸೋತವರೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ. ಒಟ್ಟಾರೆ ಇಡೀ ದಿನ ಶಾಲೆಯಲ್ಲಿ ಹಬ್ಬದ ವಾತಾವರಣ. ಅನುಸರಿದ ಪ್ರಕ್ರಿಯೆ ನಿಜಕ್ಕೂ ಗಮನ ಸೆಳೆದಿದೆ. ಅತ್ಯಾಧುನಿಕ ಡಿಜಿಟಲೀಕರಣಕ್ಕೆ ಇದು ಹೇಳಿ ಮಾಡಿಸಿದಂತಾಯಿತು.
ಎಲ್ಲಾ ಚುನಾವಣೆ ಪ್ರಕ್ರಿಯೆಗಳನ್ನು ಚುನಾವಣೆ ಅಧಿಕಾರಿಯಾಗಿ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಝಳಕಿ
ಶಿಕ್ಷಕಿ ಮಂಜುಳಾ ಜಾವೂರ, ವಿಜಯಲಕ್ಷ್ಮೀ ಕೆಂಚಕ್ಕನವರ,ದೀಪಾ ಬಸನಗೌಡರ, ಎಂ ಎಸ್ ದಾವಲಭಾಯಿ,
ಮಂಜುಳಾ ಪ್ಯಾಟಿಶೆಟ್ಟರ, ಪ್ರಶಾಂತ ವಿಭೂತಿ ಪ್ರತಿಯೊಂದು ಹಂತಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ವಿಶೇಷವಾಗಿತ್ತು.
ಒಟ್ಟಾರೆ ಇಡೀ ದಿನ ಶಾಲೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಜವಾಬ್ದಾರಿ ಮತ್ತು ನಾಯಕತ್ವ ಗುಣಗಳನ್ನು ಮೂಡಿಸುವ ಇಂತಹ ಮತದಾನದಿಂದ ಮಕ್ಕಳಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೂಲ ತತ್ತ÷್ವ ಮೌಲ್ಯಗಳನ್ನು ಬಿತ್ತರಿಸಿದಂತಾಯಿತು. ಅಲ್ಲದೆ ಸಮಾಜ ವಿಜ್ಞಾನದಲ್ಲಿರುವ `ಚುನಾವಣೆ ಮತ್ತದರ ರೂಪುರೇಷೆಗಳು’ ಎಂಬ ಕಲಿಕಾಂಶಕ್ಕೆ ಪ್ರಾಯೋಗಿಕತೆಯನ್ನು ದೊರಕಿಸಿಕೊಡುವಲ್ಲಿ ಈ ಚುನಾವಣೆ ಸಾಕ್ಷಿಯಾಯಿತು.


Google News

 

 

WhatsApp Group Join Now
Telegram Group Join Now
Suddi Sante Desk