ಫೆಬ್ರುವರಿ 15 ರಿಂದ ಮೇ14 ರ ವರೆಗೆ ಕಡಲೆ ಖರೀದಿ ಪ್ರಾರಂಭ

Suddi Sante Desk

ಧಾರವಾಡ –

ಅನ್ನದಾತನ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಬೆಳೆಗಳಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರಕಾರವು ಹಿಂಗಾರು ಹಂಗಾಮಿನ ಕಡಲೆಯನ್ನು ಪ್ರತಿ ಕ್ವಿಂಟಾಲಿಗೆ ರೂ.5100/-ಗಳ ಬೆಂಬಲ ಬೆಲೆಯಂತೆ ಒಟ್ಟು 1,67,000 ಮೆಟ್ರಿಕ್ ಟನ್ ಖರೀದಿ ಮಾಡಲು ನಿರ್ಧರಿಸಿದ್ದು, ಪ್ರತಿ ಎಕರೆಗೆ 4 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಖರೀದಿಗೆ ನಿಗದಿಪಡಿಸಲಾಗಿದೆ.

ಕಡಲೆ ಖರೀದಿಗೆ ನೋಂದಣಿ ದಿನಾಂಕ :
15/02/2021 ರಿಂದ 29/04/2021 ರ ವರೆಗೆ

ಕಡಲೆ ಖರೀದಿಯ ದಿನಾಂಕ :
15/02/2021 ರಿಂದ 14/05/2021 ರ ವರೆಗೆ

ಸಮಸ್ತ ರೈತ ಬಾಂಧವರು ಪ್ರಸಕ್ತ ವರ್ಷದ ಕಡಲೆ ಖರೀದಿ ಯೋಜನೆಯ ಸದುಪಯೋಗವನ್ನು ಪಡೆದುಕೂಳ್ಳಲು ವಿನಂತಿಯನ್ನು ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕರು ರೈತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.