ಧಾರವಾಡ –
ಹಾಪ್ ಕಾಮ್ಸ್ ಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು – ಸುದ್ದಿ ಸಂತೆಯ ವರದಿ ಬೆನ್ನಲ್ಲೇ ಸ್ವಚ್ಚವಾದವು ಪಾಪ್ ಕಾಮ್ಸ್ ಗಳು…..ಕೌಂಟರ್ ಗೆ ಬಂದ ನೀರು, ಬಾಳೆಹಣ್ಣು ಲಕ್ಷ ಲಕ್ಷ ಬಾಡಿಗೆ ವಸೂಲಿ ಮಾಡುವವರ ಮೇಲೆ ಯಾಕೆ ಕ್ರಮವಿಲ್ಲ DC ಯವರೇ…..
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿನ ಹಾಪ್ ಕಾಮ್ಸ್ ಮಳಿಗೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.ಹೌದು ಹೆಸರಿಗೆ ಮಾತ್ರ ಹಾಪ್ ಕಾಮ್ಸ್ ಒಳಗಡೆ ಮಾತ್ರ ರೈತರು ಬೆಳೆದ ತೋಟ ಗಾರಿಕೆಯ ಯಾವುದೇ ಒಂದು ಹಣ್ಣು ಹಂಪಲಗಳನ್ನು ಮಾರಾಟ ಮಾಡುತ್ತಿರಲಿಲ್ಲ ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ವರದಿಯೊಂದನ್ನು ಪ್ರಕಟಿಸಿತ್ತು ವರದಿ ಬೆನ್ನಲ್ಲೇ ಕೊನೆಗೂ ಎಚ್ಚೇತ್ತುಕೊಂಡ ಇಲಾಖೆಯ ಅಧಿಕಾರಿಗಳು ಹಾಪ್ ಕಾಮ್ಸ್ ಮಳಿಗೆಗೆ ಭೇಟಿ ನೀಡಿ ಮಾರಾಟ ಮಾಡಲಾಗುತ್ತಿದ್ದ ಬೇರೆ ಬೇರೆ ವಸ್ತುಗಳನ್ನು ತೆರುವುಗೊಳಿಸಿದ್ದಾರೆ.
ಸಧ್ಯ ಕುಡಿಯುವ ನೀರಿನ ಬಾಟಲ್ ಮತ್ತು ಬಾಳೆಹಣ್ಣು ಗಳನ್ನು ಕೌಂಟರ್ ನಲ್ಲಿ ಇಡಲಾಗಿದ್ದು ಹೆಸರೊಂದು ಮಾರಾಟವೊಂದು ಎಂದುಕೊಂಡಿದ್ದ ಮಳಿಗೆಯವರಿಗೆ ಬಿಸಿ ಮುಟ್ಟಿಸಿದ್ದಾರೆ.ನ್ಯೂಸ್ ಸೆನ್ಸ್ ಆಗುತ್ತದೆ ಏನು ಬರಿಯಬೇಡಿ ಎನ್ನುತ್ತಿದ್ದ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಸಂತೆ ಟೀಮ್ ಪಕ್ಕಾ ದಾಖಲೆಗಳೊಂದಿಗೆ ಎಚ್ಚರಿ ಸಿದ್ದು
ಇನ್ನೂ ಹೊಸ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆ ಸೇರಿದಂತೆ ದುಡಿದು ತಿನ್ನುವರವನ್ನು ಲಕ್ಷ ಲಕ್ಷ ರೂಪಾಯಿಯಲ್ಲಿ ಬಾಡಿಗೆ ವಸೂಲಿ ಮಾಡುವ ಸುಲಿದು ತಿನ್ನುವವರ ಬಗ್ಗೆ ಸರಣಿ ವರದಿಗಳು ದಾಖಲೆಗ ಳೊಂದಿಗೆ ಬರಲಿದ್ದು ಸುದ್ದಿ ಸಂತೆ ಯ ವರದಿಗಳಿಗೆ ಸದಾ ಸ್ಪಂದಿಸುವ ಉತ್ಸಾಹಿ DC ಯವರೇ ಲಕ್ಷ ಲಕ್ಷ ಬಾಡಿಗೆ ವಸೂಲಿ ಮಾಡುತ್ತಿರುವವರ ಕುರಿತು ಮಾಹಿತಿ ಪಡೆದು ಕೊಂಡಿದ್ದು ಅವರ ಮೇಲೆ ಕ್ರಮವಾಗಲಿ ಇಲಾಖೆಯ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿರುವ ಮೇಲೆ ಯಾಕೆ ಮೃದು ಧೋರಣೆ ಅರ್ಥವಾಗುತ್ತಿಲ್ಲ
ಸುದ್ದಿ ಸಂತೆ ನ್ಯೂಸ್ ಧಾರವಾಡ……