ಬಂಗಾರಪೇಟೆ –
ಜಾತಿ ಸಮೀಕ್ಷೆ ಮಾಡಲು ಹೋಗಿದ್ದ ಶಿಕ್ಷಕನ ಮೇಲೆ ನಾಯಿಯೊಂದು ದಾಳಿ ಮಾಡಿ ಕಚ್ಚಿ ಗಾಯ ಮಾಡಿರುವ ಘಟನೆ ಬಂಗಾರಪೇಟೆ ತಾಲೂಕಿನ ದೇಶೀಹಳ್ಳಿ ಗ್ರಾಮ ದಲ್ಲಿ ನಡೆದಿದೆ.ಹಿಂದಿನಿಂದ ಬಂದು ಬಲಗಾಲು ಕಚ್ಚಿದ ನಾಯಿ ರೆಡ್ಡಿ ಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೆಂಕಟಪ್ಪ ಅವರು ದೇಶಿಹಳ್ಳಿಗೆ ಸಮೀಕ್ಷೆ ಮಾಡಲು ಹೋಗಿದ್ದರು.
ಈ ಸಮಯದಲ್ಲಿ ನಾಯಿಯೊಂದು ಹಿಂದಿನಿಂದ ಬಂದಿದ್ದು, ಬಲಗಾಲಿಗೆ ಕಚ್ಚಿದೆ. ತಕ್ಷಣವೇ ಅಲ್ಲಿದ್ದ ಶಿಕ್ಷಕರು ವೆಂಕಟಪ್ಪ ಅವರನ್ನ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ನಾಯಿ ಕಡಿತದಿಂದ ಗಾಯಗೊಂಡಿರುವ ಶಿಕ್ಷಕ ವೆಂಕಟಪ್ಪ ಅವರಿಗೆ ಕೆಲ ದಿನಗಳ ಕಾಲ ವಿಶ್ರಾಂತಿ ಮಾಡಲು ವೈದ್ಯರು ಸೂಚನೆ ನೀಡಿದ್ದಾರೆ.
ಹಾಗಾಗಿ ಅವರನ್ನ ಸಮೀಕ್ಷೆಯ ಕಾರ್ಯದಿಂದ ಕೈಬಿಟ್ಟು ವಿಶ್ರಾಂತಿ ನೀಡಬೇಕು ಎಂದು ಎಂದ ಉಳಿದ ಶಿಕ್ಷಕರು ಮನವಿ ಮಾಡಿದ್ದಾರೆ.ಈ ವಿಚಾರವಾಗಿ ಗಾಯಾಳು ವೆಂಕಟಪ್ಪ ಅವರು ಮಾತನಾಡಿ , ದೇಶಿಹಳ್ಳಿ ಗ್ರಾಮದ ಮನೆಯೊಂದರ ಬಳಿ ಸಮೀಕ್ಷೆ ಮಾಡಲು ಹೋದಾಗ ಈ ಘಟನೆ ನಡೆದಿದೆ.
ನಾಯಿಯೊಂದು ಹಿಂದಿನಿಂದ ಬಂದು ಬಲ ಕಾಲಿಗೆ ಕಚ್ಚಿದ್ದು, ನಾಯಿಯ ಮೂರು ಹಲ್ಲಿನ ಗುರುತು ಬಿದ್ದಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ನಾಯಿ ಕಚ್ಚಿದ ಕಾರಣದಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂ ಡಿದ್ದು, ಬಂಗಾರಪೇಟೆಯ ನಗರ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹಾಗಾಗಿ ಮನೆ ಮನೆಗಳಿಗೆ ಹೋಗಿ ಸಮೀಕ್ಷೆ ಮಾಡುವುದು ತುಂಬಾ ಕಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಶಿಕ್ಷಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಮೊದಲ ದಿನದಿಂದ ಇಲ್ಲಿಯವರೆಗೂ ಸಾಕಷ್ಟು ಕಷ್ಟ ಅನುಭವಿ ಸುತ್ತಿರುವ ಶಿಕ್ಷಕರು, ಒಂದು ಸಲ ಮುಗಿದ್ರೆ ಸಾಕಪ್ಪಾ ಎಂದು ದೇವರಿಗೆ ಪ್ರಾರ್ಥಿಸುವ ಮಟ್ಟಕ್ಕೆ ಹೋಗಿದೆ.
ರಾಜ್ಯ ಸರ್ಕಾರದ ಆದೇಶದಂತೆ ಸೆ.22 ರಿಂದ ಜಾತಿ ಸಮಿತಿ ಆರಂಭವಾಗಿದ್ದು, ಮೊದಲ ದಿನದ ಮೊದಲ ಹೆಜ್ಜೆಯಿಂದಲೆ ಶಿಕ್ಷಕರಿಗೆ ಒಂದಲ್ಲ ಒಂದು ಸಮೀಕ್ಷೆಗೆ ಅಡಿಯಾಗುತ್ತಲೇ ಇದೆ. ಮೊದಲ ದಿನ ನೆಟ್ ವರ್ಕ್ ಸಮಸ್ಯೆ ಎದುರಾದರೆ,
ಎರಡನೇ ದಿನ ನೆಟ್ವರ್ಕ್ ಜೊತೆ ಸರ್ವರ್ ಸಮಸ್ಯೆ ಕೂಡ ಎದುರಾಗಿದೆ. ಇದರ ನಡುವೆಯೇ ಸಾರ್ವಜನಿಕರು ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಮೇಲಧಿಕಾ ರಿಗಳ ಮುಂದೆ ಗೋಳಾಡುತ್ತಿದ್ದಾರೆ. ಗಣತಿಗಾಗಿ ಬಳಸುತ್ತಿರುವ ಮೊಬೈಲ್ ಆಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಶಿಕ್ಷಕರು ದೂರಿದ್ದಾರೆ. ಫೋಟೋ ಅಪ್‌ಲೋಡ್ ಮಾಡುವಾಗ ಆಗಾಗ್ಗೆ ಎರರ್ ಎನ್ನುವುದು ದೊಡ್ಡ ಸಮಸ್ಯೆ ಎದುರಾಗಿದೆ.
ಸುದ್ದಿ ಸಂತೆ ನ್ಯೂಸ್ ಬಂಗಾರಪೇಟೆ…..