ಬೆಂಗಳೂರು –
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಕಳೆದ 5 ದಿನಗಳಿಂದ ರಾಜ್ಯದಲ್ಲಿ ಆರಂಭವಾಗಿರುವ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಜಾತಿ ಗಣತಿಗೆ ಹೋಗದ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರಕಾರ ನಿರ್ಧರಿಸಿ ರುವ ಬೆನ್ನಲ್ಲೇ ಬೀದರ್ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಲಾಗಿದೆ
ಓರ್ವ ಕ್ಷೇತ್ರ ಸಮನ್ವಯಾಧಿಕಾರಿಯನ್ನು ಅಮಾನತು ಗೊಳಿಸಿದೆ.ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವೇಳೆ ನೆಟ್‌ವರ್ಕ್ ಸಿಗದ ಕಾರಣ ಮರ ಹಾಗೂ ನೀರಿನ ಟ್ಯಾಂಕ್ ಏರಿದ ಇಬ್ಬರು ಸಮೀಕ್ಷಕರಿಗೆ ಕಾರಣ ಕೇಳಿ ಬಸವಕಲ್ಯಾಣ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಚೇರಿಯಿಂದ ನೋಟಿಸ್ ನೀಡಲಾಗಿದೆ
ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡ ಹುಲಸೂರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋವಿಂದ ಮಹಾರಾಜ, ಹಂದ್ರಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಅನಿಲ್ ಕುಮಾರ್ ಶಾಸ್ತ್ರಿ ಅವರಿಗೆ ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ನೀಡಿ¨ªಾರೆ.
ಸಮೀಕ್ಷೆ ಕಾರ್ಯದಲ್ಲಿ ನಿಯುಕ್ತಿಗೊಂಡ ಇಬ್ಬರು ಶಿಕ್ಷಕರು ಮರ ಹಾಗೂ ನೀರಿನ ಟ್ಯಾಂಕ್ ಹತ್ತಿದ್ದರು. ಈ ಹಿನ್ನೆಲೆಯಲ್ಲಿ ಸರಕಾರದ ಆದೇಶ ಉಲ್ಲಂ ಸಿ ನಿಯಮ ಬಾಹಿರವಾಗಿ ವರ್ತಿಸಿ, ಸರಕಾರದ ನೀತಿಯನ್ನು ಅಣಕಿ ಸಿದ್ದೀರಿ. ಸರಕಾರಿ ನೌಕರರಲ್ಲದ ರೀತಿ ವರ್ತಿಸಿ ನೆಟ್‌ವರ್ಕ್ ಗಾಗಿ ಮರ-ನೀರಿನ ಟ್ಯಾಂಕ್ ಹತ್ತಿ ಆ ಚಿತ್ರಗಳನ್ನು ಹಂಚಿಕೊಂಡಿದ್ದೀರಿ. ಈ ಕುರಿತು 3 ದಿನಗಳ ಒಳಗೆ ಲಿಖೀತ ಹೇಳಿಕೆ ಸಲ್ಲಿಸಬೇಕು. ಇಲ್ಲವಾದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕ್ರಮ ಕೈಗೊಳ್ಳಲಾಗು ವುದು ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..