ಧಾರವಾಡ –
ಧಾರವಾಡದ ಹೊಸ ಬಸ್ ನಿಲ್ದಾಣ ದಲ್ಲಿ ಕೆಲವು ಅಂಗಡಿ ಗಳ ಬಾಡಿಗೆ ಕೇಳಿದ್ರೆ ಶಾಕ್ ಆಗುತ್ತದೆ ಇಲಾಖೆ ಯಿಂದ ಕೆಲವರು ಬಾಡಿಗೆ ತೆಗೆದು ಕೊಂಡು ನಾಲ್ಕೈದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಬಾಡಿಗೆ ವಸೂಲಿ ಮಾಡ್ತಾ ಇದ್ದರೆ ಇನ್ನೊಂದೆಡೆ ವ್ಯಕ್ತಿ ಯೊಬ್ಬರು ಕಡಿಮೆ ದರಕ್ಕೆ ಟೆಂಡರ್ ತೆಗೆದುಕೊಂಡು ದುಬಾರಿಯಾಗಿ ಬಾಡಿಗೆ ನೀಡಿದ್ದಾರೆ
ಅಲ್ಪ ಹಣಕ್ಕೆ ಟೆಂಡರ್ ಪಡೆದು ದುಬಾರಿ ಯಾದ ದರಕ್ಕೆ ಬಾಡಿಗೆ ನೀಡಿರುವ ವಿಚಾರ ಕುರಿತು ಸುದ್ದಿ ಸಂತೆ ಟೀಮ್ ಬೆಳಕಿಗೆ ತೆಗೆದುಕೊಂಡ ಬೆನ್ನಲ್ಲೇ ಡಿಸಿ ಯವರು ಬಾಡಿಗೆ ದಾರರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ ಮಾಹಿತಿ ನೀಡಿದ್ರು ಕೂಡಾ ಈವರೆಗೆ ದುಬಾರಿ ಬಾಡಿಗೆ ತೆಗೆದುಕೊಳ್ಳುವವರ ಮೇಲೆ ಯಾವ ಕ್ರಮವನ್ನು ಕೈಗೊಂಡಿಲ್ಲ
ಈಗಷ್ಟೇ ಹೊಸದಾಗಿ ಬಂದಿರುವ ಉತ್ಸಾಹಿ ಡಿಸಿ ಯವರು ಯಾಕೆ ಮೌನವಾಗಿದ್ದಾರೆ ಯಾಕೆ ಗೊತ್ತಿಲ್ಲ ಹೀಗಿರುವಾಗ ಸೂಕ್ತ ದಾಖಲೆಗಳೊಂದಿಗೆ ಸುದ್ದಿ ಸಂತೆ ಟೀಮ್ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ ಕಾಗೆ ಅವರನ್ನು ಭೇಟಿಯಾಗ ಲಿದ್ದಾರೆ.ಹುಬ್ಬಳ್ಳಿಯಲ್ಲಿ ಇಲಾಖೆಯ ಕಾರ್ಯಕ್ರಮದ ನಂತರ ಟೀಮ್ ಭೇಟಿಯಾಗಿ ಕಂಪ್ಲೀಟ್ ಮಾಹಿತಿ ನೀಡಿ ಅಧಿಕಾರಿಗಳ ಮತ್ತು ಡಬಲ್ ಬಾಡಿಗೆ ವಸೂಲಿ ಮಾಡುವವರ ಮಾಹಿತಿ ನೀಡಲಿದೆ
ಸುದ್ದಿ ಸಂತೆ ನ್ಯೂಸ್ ಧಾರವಾಡ…..