ಹುಬ್ಬಳ್ಳಿ –
ಹುಬ್ಬಳ್ಳಿ-ಧಾರವಾಡವನ್ನು ಸ್ವಚ್ಛವಾಗಿಡಲು ಮತ್ತು ಪರಿಸರ ಸಂರಕ್ಷಣೆಯ ದಿಶೆಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಮಹಾನಗರ ಪಾಲಿಕೆಯು ಇಂದು 66 ನೂತನ ಕಸ ಸಂಗ್ರಹ ಆಟೋ ಟಿಪ್ಪರ್ಗಳನ್ನು ಉದ್ಘಾಟನೆ ಕಾರ್ಯಕ್ರಮ ಹುಬ್ಬಳ್ಳಿ ಯಲ್ಲಿ ನಡೆಯಿತು ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣದಲ್ಲಿ ಈ ಕಾರ್ಯಕ್ರಮವು ಅವಳಿ ನಗರ ಗಳನ್ನು ಮಾದರಿ ಹಸಿರು ನಗರವನ್ನಾಗಿ ರೂಪಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಲು ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ,ಸಭಾ ನಾಯಕರಾದ ಈರೇಶ ಅಂಚಟಗೇರಿ, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಾಜಣ್ಣ ಕೊರವಿ, ಮಾಜಿ ಮಹಾಪೌರರಾದ ರಾಮಣ್ಣ ಬಡಿಗೇರ, ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ, ಹಾಗೂ ಪಾಲಿಕೆ ಸದಸ್ಯರಾದ ಶ್ರೀಮತಿ ಉಮಾ ಮುಕುಂದ, ಶ್ರೀಮತಿ ರೂಪಾ ಶೆಟ್ಟಿ, ಶ್ರೀ ಮಹದೇವಪ್ಪ ನರಗುಂದ,
ಶ್ರೀಮತಿ ಸೂರವ್ವ ಪಾಟೀಲ, ಶ್ರೀಮತಿ ಸುಮಿತ್ರಾ ಗುಂಜಾಳ, ಶಂಕರ ಶೆಳಕೆ, ಶ್ರೀನಿವಾಸ ಬೆಳದಡಿ, SWM ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಯರಂಗಾಳಿ, ಪರಿಸರ ಅಭಿಯಂತರ ಶ್ರೀಧರ ಟಿ.ಎನ್. ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.