ಧಾರವಾಡ –
ಧಾರವಾಡ ಹೊಸ ಬಸ್ ನಿಲ್ದಾಣದ ದುಬಾರಿ ಬಾಡಿಗೆ ವಿಚಾರ ದಲ್ಲಿ ಸಚಿವ ಸಂತೋಷ ಲಾಡ್ ಭೇಟಿ – ಕಡಿಮೆ ಹಣಕ್ಕೆ ಟೆಂಡರ್ ತಗೆದುಕೊಂಡು ಲಕ್ಷ ಲಕ್ಷ ಹೇಗೆ ವಸೂಲಿ ಮಾಡ್ತಾರೆ ಸಚಿವರಿಗೆ ಮಾಹಿತಿ ನೀಡಲಿರುವ ಟೀಮ್…..ಮೌನ ಮೌನ…..
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಅಲ್ಪ ಹಣಕ್ಕೆ ಟೆಂಡರ್ ತಗೆದುಕೊಂಡು ಲಕ್ಷ ಲಕ್ಷ ವಸೂಲಿ ಮಾಡುತ್ತಾ ವ್ಯಾಪಾರಿಗಳನ್ನು ಸುಲಿಗೆ ಮಾಡಲಾಗುತ್ತಿದೆ.ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ವರದಿ ಮೂಲಕ ಬೆಳಕು ಚೆಲ್ಲಿದೆ.ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ನೊಟೀಸ್ ನೀಡಿರುವ ಇಲಾಖೆ ತುರ್ತಾಗಿ ಕ್ರಮವನ್ನು ಕೈಗೊಂಡು ಬಿಸಿಯನ್ನು ಮುಟ್ಟಿಸಬೇಕಾದ ಇಲಾಖೆಯ ಅಧಿಕಾರಿ ಗಳು ಮೌನವಾಗಿದ್ದಾರೆ.
ಅತ್ತ ಬಾಡಿಗೆದಾರರಿಂದಲೂ ಕಂಪ್ಲೀಟ್ ಮಾಹಿತಿಯನ್ನು ಪಡೆದುಕೊಂಡಿರುವ ಡಿಸಿಯವರು ಇತರೆ ಅಧಿಕಾರಿ ಗಳು ಮೌನವಾಗಿದ್ದು ಕ್ರಮವನ್ನು ಕೈಗೊಳ್ಳಲು ಹಿಂದೆ ಮುಂದೆ ನೋಡ್ತಾ ಇದ್ದು ಇದನ್ನೇಲ್ಲವನ್ನು ಗಮನಿಸಿದ ಸುದ್ದಿ ಸಂತೆ ಟೀಮ್ ಸಧ್ಯ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ ಅಲ್ಪ ಹಣಕ್ಕೆ ಹೇಗೆ ಯಾವ ರೀತಿ ಟೆಂಡರ್ ತಗೆದುಕೊಳ್ಳಲಾಗಿದೆ ಇಲಾಖೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ಲಕ್ಷ ಲಕ್ಷ ಬಾಡಿಗೆಯನ್ನು ಹೇಗೆ ದಾಖಲೆಗಳಿಲ್ಲದೇ ವಸೂಲಿ ಮಾಡಲಾಗುತ್ತಿದೆ
ಇದೇಲ್ಲಾ ವಿಚಾರ ಕುರಿತಂತೆ ದಾಖಲೆಗಳೊಂದಿಗೆ ಸಚಿವ ಸಂತೋಷ ಲಾಡ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಲಿದ್ದು ಇದರೊಂದಿಗೆ ಮತ್ತಷ್ಟು ದಾಖಲೆಗಳನ್ನು ಕೂಡಾ ಟೀಮ್ ಸಚಿವರಿಗೆ ನೀಡಲಿದೆ.ಸುದ್ದಿ ಸಂತೆ ಟೀಮ್ ನೊಂದಿಗೆ ನೊಂದುಕೊಂಡಿರುವ ಕೆಲ ವ್ಯಾಪಾರಿಗಳು ಕೂಡಾ ಪಾಲ್ಗೊಂಡು ದಾಖಲೆಗ ಳೊಂದಿಗೆ ಮಾಹಿತಿಯನ್ನು ನೀಡಲಿದ್ದಾರೆ
ಒಟ್ಟಾರೆ ದುಬಾರಿ ದುನಿಯಾದ ಬಾಡಿಗೆಯ ಕಥೆ ಜಿಲ್ಲಾ ಉಸ್ತುವಾರಿ ಸಚಿವರ ವರೆಗೂ ತಲುಪಲಿದ್ದು ಮಾಹಿತಿ ಯನ್ನು ಪಡೆದುಕೊಂಡ ನಂತರ ಅಧಿಕಾರಿಗಳ ಹಾಗೇ ಮೌನವಾಗಿರುತ್ತಾರಾ ಅಥವಾ ವ್ಯಾಪಾರಿಗಳ ನೋವಿಗೆ ಧ್ವನಿ ಆಗುತ್ತಾರೆಯಾ ಎಂಬೊದನ್ನು ಕಾದು ನೋಡ ಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……