ಧಾರವಾಡ –
ಇವುಗಳ ಮೇಲೆ ಹೇಗೆ ಕುಳಿತುಕೊಳ್ಳಬೇಕು ಹೇಳಿ – ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಕುಂಟಾಡುತ್ತಿವೆ ಕುಳಿತುಕೊಳ್ಳುವ ಕುರ್ಚಿಗಳು…..ಕುರ್ಚಿಗೆ ಆಸರೆ ಯಾಗಿದೆ ಕಲ್ಲು…..
ಇತ್ತೀಚಿಗಷ್ಟೇ ಧಾರವಾಡ ಹೊಸ ಬಸ್ ನಿಲ್ದಾಣಕ್ಕೆ ಅಭಿವೃದ್ದಿಯ ಸ್ಪರ್ಶವನ್ನು ನೀಡಲಾಗಿದೆ ನಿಲ್ದಾಣದ ಅರ್ಧ ಭಾಗ ರಸ್ತೆಯನ್ನು ಮಾಡಲಾಗಿದ್ದು ಇನ್ನೂಳಿದಂತೆ ನಿಲ್ದಾಣದ ಮೇಲ್ಛಾವಣಿಗೆ ಶೀಟ್ ಹಾಕಲಾಗಿದ್ದು ಇದರ ನಡುವೆ ಅಲ್ಲಲ್ಲಿ ಒಂದಿಷ್ಟು ಇನ್ನೂ ಕೆಲಸ ಕಾರ್ಯಗಳು ಆಗಬೇಕಾಗಿದ್ದು ಇದರ ನಡುವೆ ಬೆಳಗಾವಿಯ ಪ್ಲಾಟ್ ಫಾರ್ಮ್ ನಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ಕುರ್ಚಿಗಳು ತುಂಬಾ ಹಳೆಯದಾಗಿದ್ದು ಸಂಪೂರ್ಣ ವಾಗಿ ಹಾಳಾಗಿವೆ.
ನಿಲ್ದಾಣದಲ್ಲಿ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ಏನೇಲ್ಲಾ ಮಾಡಲಾಗಿದ್ದು ಹಾಳಾದ ಕುರ್ಚಿಗಳನ್ನು ಹಾಗೆ ಬಿಡಲಾಗಿದೆ ಸಧ್ಯ ಹಾಳಾಗಿರುವ ಈ ಒಂದು ಕುರ್ಚಿಗಳು ಕುಳಿತುಕೊಳ್ಳಲು ಬಾರದೇ ಕುಂಟಾಡುತ್ತಿದ್ದು ಹೀಗಾಗಿ ಗೊತ್ತಿಲ್ಲದರು ಯಾರಾದರೂ ಥಟ್ ಅಂತಾ ಕುಳಿತು ಕೊಂಡರೆ ಪಟ್ ಅಂತಾ ಹಿಂದೆ ಬೀಳೊದು ಗ್ಯಾರಂಟಿ
ಹೀಗಾಗಿ ಸಧ್ಯ ಈ ಒಂದು ಕುರ್ಚಿಗಳಿಗೆ ಕೆಳಗಡೆ ಭಾಗ ದಲ್ಲಿ ಕಲ್ಲನ್ನು ಆಸರೆಯಾಗಿ ಇಡಲಾಗಿದೆ.ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಪ್ರತಿ ತಿಂಗಳಾದರೆ ಸಾಕು ಕೋಟಿ ಕೋಟಿ ರೂಪಾಯಿ ಬಾಡಿಗೆ ಬರುವ ಇಲಾಖೆಗೆ ಈ ಒಂದು ಅವ್ಯವಸ್ಥೆ ಕಾಣುತ್ತಿಲ್ಲವೇ ಕಂಡಲೂ ಕಾಣದಂತೆ ಇದ್ದಾರೆಯೇ ಅಧಿಕಾರಿಗಳು
ಹೇಗಿದೆ ಪರಸ್ಥಿತಿ ವ್ಯವಸ್ಥೆ ಒಮ್ಮೇ ನೋಡಿ ಇನ್ನೂ ಕುಳಿತುಕೊಂಡು ಬಿದ್ದವರು ಛೀ ಥೂ ಎನ್ನುತ್ತಾ ಹೋಗತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……