ಬೆಂಗಳೂರು –
ಪ್ರಯಾಣ ಭತ್ಯೆ, ಭವಿಷ್ಯ ನಿಧಿ ಮುಂಗಡದ ಬಗ್ಗೆ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಮಹತ್ವದ ಆದೇಶವನ್ನು ಮಾಡಲಾಗಿದೆ ಹೌದು ರಾಜ್ಯ ಸರ್ಕಾರವು ವೋಚರುಗಳ ಡಿಜಿಟಲೀಕರಣದ ಅಂಗವಾಗಿ ಭೌತಿಕ ಬಿಲ್ಲುಗಳ ಬದಲಿಗೆ ಡಿಜಿಟಲ್ ಸಹಿಯಾದ ವೋಚರಗಳನ್ನು ಅಂಗೀಕರಿಸುವ ವಿಧಾನವನ್ನು ಪ್ರಯಾಣ ಭತ್ಯೆ ಬಿಲ್ಲು ಹಾಗೂ ಭವಿಷ್ಯನಿಧಿ ಮುಂಗಡ ಬಿಲ್ಲುಗಳಿಗೂ ವಿಸ್ತರಿಸಿದೆ.ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ವೋಚರುಗಳ ಡಿಜಿಟಲೀಕರಣದ ಅಂಗವಾಗಿ, ಹೆಚ್.ಆರ್.ಎಂ.ಎಸ್ ಹಾಗೂ ಖಜಾನೆ-2 ರಲ್ಲಿ ಸೃಜಿಸುವ ಜಿಲ್ಲಾ ವಲಯದ ಹಾಗೂ ರಾಜ್ಯ ವಲಯದ ವೇತನ ಬಿಲ್ಲುಗಳು ಹಾಗೂ ಸಂಬಂಧಿಸಿದ ವೇತನಗ ಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್ಗಳ ಬದಲು ಆನ್ಲೈನ್ನಲ್ಲಿ ಸಲ್ಲಿಸಲು

ಹಾಗೂ ಇದಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓಗಳು ಡಿಎಸ್ ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್ಲೈನ್ ಮೂಲಕ ಮಾತ್ರ ಸಲ್ಲಿಸುವಂತೆ ಆದೇಶಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..