ಧಾರವಾಡ –
ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ವ್ಯಾಪಾರಿಗಳಿಗೆ ನೂರೆಂಟು ಸಮಸ್ಯೆಗಳು – ಸರಿಯಾಗಿ ವ್ಯಾಪಾರ ವಿಲ್ಲದೇ ಒದ್ದಾಡುತ್ತಿರುವ ವ್ಯಾಪಾರಿಗಳಿಗೆ ಮತ್ತೊಂದು ಕಿರಿಕಿರಿ…..ಮೊದಲು ಮಾಡುವ ಕೆಲಸ ಮಾಡಿ ಆ ಮೇಲೆ ಇದನ್ನು ಮಾಡಿ ಕೆಲಸಗಳು ಸಾಕಷ್ಟಿವೆ…..
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಬೇಕರಿಗಳು ನಾಯಿ ಕೋಡೆಗಳಂತೆ ಇವೆ. ಸಧ್ಯ ಇಪ್ಪತ್ತಕ್ಕೂ ಹೆಚ್ಚು ಬೇಕರಿಗಳಿದ್ದು ದುಬಾರಿ ಬಾಡಿಗೆಯ ನಡುವೆ ಸರಿಯಾಗಿ ವ್ಯಾಪಾರ ವಹಿವಾಟು ಇಲ್ಲದೇ ವ್ಯಾಪಾರಿಗಳು ಪರದಾ ಡುತ್ತಿದ್ದರೆ ಇದರ ನಡುವೆ ಇಲ್ಲಿನ ವ್ಯಾಪಾರಿಗಳಿಗೆ ಮತ್ತೊಂದು ಕಿರಿಕಿರಿ ಶುರವಾಗಿದೆ
ಹೌದು ಬೇಕರಿಗಳ ಮುಂದೆ ಅದನ್ನು ಹಾಕಬೇಡಿ ಇದನ್ನು ಹಾಕಬೇಡಿ ಎಂದು ಇಲಾಖೆಯ ಅಧಿಕಾರಿಗಳು ವ್ಯಾಪಾರಿಗಳಿಗೆ ತಾಕೀತು ಮಾಡ್ತಾ ಇದ್ದಾರೆ ಇದೊಂದು ಹೊಸದಾಗಿ ಆರಂಭವಾಗಿದ್ದು ವ್ಯಾಪಾರ ವಹಿವಾಟು ಮಾಡಲು ಬಂದಿರುವ ಇಲ್ಲಿನ ವ್ಯಾಪಾರಿಗಳಿಗೆ ಇದೊಂದು ದೊಡ್ಡ ತಲನೋವಿನ ಸಮಸ್ಯೆಯಾಗಿದ್ದು ಕಿರಿಕಿರಿಯಾಗಿದೆ
ಚಿಪ್ಸ್ ಪಾಪಡ್ ಸೇರಿದಂತೆ ಬೇರೆ ಬೇರೆ ವಸ್ತುಗಳನ್ನು ಬೇಕರಿಗಳ ಮುಂದೆ ವ್ಯಾಪಾರಿಗಳು ತೂಗಿ ಹಾಕುತ್ತಾರೆ ಆದರೆ ಅಧಿಕಾರಿಗಳ ಮತ್ತೊಂದು ಟಾರ್ಚರ್ ದೊಡ್ಡ ಸಮಸ್ಯೆಯಾಗಿದ್ದು ಕಳೆದೊಂದು ವಾರದಿಂದ ಈ ಒಂದು ಕಿರಿಕಿರಿಯಿಂದ ಇಲ್ಲಿನ ವ್ಯಾಪಾರಿಗಳು ಬೇಸತ್ತಿದ್ದು ಏನು ಮಾಡಬೇಕು ಎಂದ ದಾರಿ ಕಾಣದ ಪರದಾಡುತ್ತಿದ್ದಾರೆ
ಇನ್ನೂ ವ್ಯಾಪಾರಿಗಳು ಮೇಲಾಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಭೇಟಿಯಾಗಿ ಕಿರಿಕಿರಿ ಮಾಡುತ್ತಿ ರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಪ್ಲಾನ್ ಮಾಡ್ತಾ ಇದ್ದಾರೆ ಏನೇ ಆಗಲಿ ಇಲಾಖೆಯ ಅಧಿಕಾರಿಗಳಿಗೆ ಮಾಡಲು ಸಾಕಷ್ಟು ಕೆಲಸಗಳಿದ್ದು ಅದನ್ನು ಮಾಡ ಬೇಕಾದ ಅಧಿಕಾರಿಗಳು ಅದನ್ನು ಬಿಟ್ಟು ಬೇಕರಿಗಳ ಮಂದೆ ಅದನ್ನು ಹಾಕಬೇಡಿ ಇದನ್ನು ಹಾಕಬೇಡಿ ಎಂದು ತಾಕಿತು ಮಾಡುತ್ತಿರುವುದು ಇಲ್ಲಿನ ವ್ಯಾಪಾರಿಗಳ ಆಕ್ರೋಶಕ್ಕೆ ಅಸಮಾಧಾನಕ್ಕೆ ಕಾರಣವಾಗಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..























