ಹುಬ್ಬಳ್ಳಿ –
ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅರ್ಥಪೂರ್ಣ ವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರ ಹುಟ್ಟು ಹಬ್ಬ ಆಚರಣೆ – ಉಪಮೇಯರ್ ಸಂತೋಷ ಚವ್ಹಾಣ,ವೆಂಕಟೇಶ ಕಾಟವೆ,ಲಿಂಗರಾಜ ಪಾಟೀಲ್ ,ಸೇರಿದಂತೆ ಹಲವರು ಉಪಸ್ಥಿತಿ…..ಆಸ್ಪತ್ರೆಗೆ ದುಬಾರಿ ಬೆಲೆಯ ಯಂತ್ರವನ್ನು ನೀಡಿದ ವೆಂಕಟೇಶ ಕಾಟವೆ…..
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹುಟ್ಟು ಹಬ್ಬವನ್ನು ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಹೌದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿ ಒಳ್ಳೊಳ್ಳೇಯ ಕೆಲಸ ಕಾರ್ಯಗಳೊಂದಿಗೆ ಗುರುತಿಸಿ ಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ 63ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಅತ್ಯಂತ ಅರ್ಥಪೂರ್ಣವಾಗಿ ಉಪಮೇಯರ್ ನೇತ್ರತ್ವದಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಆಡಂಬರದ ಆಚರಣೆಗಿಂತ ಸಮಾಜಮುಖಿ ಕಾರ್ಯವೇ ಮೇಲು ಎಂಬುದನ್ನು ಈ ಒಂದು ಕಾರ್ಯದ ಆಚರಣೆ ಮೂಲಕ ಸಾಬೀತುಪಡಿಸಿದರು. ಹುಟ್ಟುಹಬ್ಬದ ಹೆಸರಿನಲ್ಲಿ ಹಾರ ತುರಾಯಿ ಹಾಕುವುದು ಅಥವಾ ಅದ್ದೂರಿತನದ ಮೂಲಕ ಹಣ ಪೋಲು ಮಾಡುವುದು ಬೇಡ ಎಂದು ಸ್ವತಃ ಪ್ರಲ್ಹಾದ ಜೋಶಿ ಯವರೇ ಕರೆ ನೀಡಿದ್ದರು
ತಮ್ಮ ನೆಚ್ಚಿನ ನಾಯಕನ ಕರೆಯ ಮೇರೆಗೆ ಅವರ ಅಭಿಮಾನಿಗಳು ಮತ್ತು ಬಿಜೆಪಿ ಮುಖಂಡರು ಚಿಟಗುಪ್ಪಿ ಆಸ್ಪತ್ರೆಯಲ್ಲಿ ಲ್ಯಾಪ್ರೋಸ್ಕೋಪಿ ಮಷಿನ್ ವಿತರಿಸಿದರು.ಇದೇ ವೇಳೆ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.ಇತ್ತ ಮತ್ತೊಂದೆಡೆ ಅರವಿಂದ ನಗರದ ಪಕ್ಷದ ಕಚೇರಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಜೋಶಿಯವರ ಜನ್ಮದಿನವನ್ನು ಸಾರ್ಥಕವಾಗಿ ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲೂ ಕೂಡಾ ಹಲವರು ರಕ್ತದಾನ ಮಾಡುವ ಮೂಲಕ ಭಾಗಿಯಾಗಿದ್ದು ಕಂಡು ಬಂದಿತು. ಈ ಒಂದು ಸಂಧರ್ಭದಲ್ಲಿ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷರಾದ ಲಿಂಗರಾಜ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ನಾಡಜೋಶಿ ,ರಾಷ್ಟ್ರೋತ್ಥಾನ ಕೇಂದ್ರದ ದತ್ತಮೂರ್ತಿ ಕುಲಕರ್ಣಿ , ರಾಜ್ಯ ಎಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಮಹೇಂದ್ರ ಕೌತಾಳ ,ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾದ ರಾಜು ಕಾಳೆ,
ಮಹಾನಗರ ಪಾಲಿಕೆಯ ಸದಸ್ಯರುಗಳಾದ ರಾಜಣ್ಣ ಕೊರವಿ ,ಬೀರಪ್ಪ ಖಂಡೇಕರ ,ಚಂದ್ರಶೇಖರ ಮನಗುಂಡಿ ಶ್ರೀಮತಿ ಉಮಾ ಮುಕುಂದ,ಅಶೋಕ ವಾಲ್ಮೀಕಿ,ಪ್ರವೀಣ ಹುರಳಿ , ಹನುಮಂತ ಹರಿವಾಣ, ಪ್ರಶಾಂತ ಹಾವಣಗಿ , ಸುಭಾಷ ಅಂಕಲಕೋಟಿ, ಕೃಷ್ಣ ಗಂಡಗಾಲೆಕರ, ಶ್ರೀಮತಿ ಅಕ್ಕಮ್ಮಕ್ಕ ಹೆಗಡೆ, ವೆಂಕಟೇಶ ಕಾಟವೆ , ಶ್ರೀಮತಿ ಲೀಲಾವತಿ ಪಾಸ್ತೆ , ಕಾರ್ಯಾಲಯ ಕಾರ್ಯದರ್ಶಿಗಳಾದ ಆನಂದ ಮದರಿ ಪಕ್ಷದ ಎಲ್ಲಾ ಹಿರಿಯ ಕಾರ್ಯಕರ್ತರು , ಎಲ್ಲಾ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.
ವಿಶೇಷವಾಗಿ ಲ್ಯಾಪ್ರೋಸ್ಕೋಪಿ ಯಂತ್ರವನ್ನು VAK ಫೌಂಡೇಶನ್ ನಿಂದ ಅಶೋಕ ಕಾಟವೆಯವರು ಆಸ್ಪತ್ರೆಗೆ ಯಂತ್ರವನ್ನು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..






















