ಹುಬ್ಬಳ್ಳಿ –
ಅನಿಲಕುಮಾರ ಪಾಟೀಲ್ ರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ ಅಭಿಮಾನಿಗಳು ವಿನಯ ಜಕನೂರು ನೇತೃತ್ವದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿದ ಅಭಿಮಾನಿಗಳು ಸಾಥ್ ನೀಡಿದ ಗೆಳೆಯರು ಹೌದು
ಧಾರವಾಡ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಮಾಜಿ ಮಹಾಪೌರರಾಗಿರುವ ಅನಿಲ ಕುಮಾರ್ ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ.ಪಕ್ಷದ ಸಂಘಟನೆ ಸೇರಿದಂತೆ ಹತ್ತಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುವ ಅಧ್ಯಕ್ಷರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಅವರ ಅಭಿಮಾನಿ ಬಳಗ ದವರು ಮಾಡಿದರು
ಕಾಂಗ್ರೇಸ್ ಪಕ್ಷದಲ್ಲಿ ಧಾರವಾಡ ಜಿಲ್ಲೆಯಲ್ಲಿ ಸಂಘಟನೆ ಸೇರಿದಂತೆ ಪ್ರತಿಯೊಂದರಲ್ಲೂ ಉತ್ಸಾಹಿಯಾಗಿರುವ ಅನಿಲಕುಮಾರ್ ಪಾಟೀಲ್ ಅವರ ಹುಟ್ಟು ಹಬ್ಬವನ್ನು ಅಧ್ದೂರಿಯಾಗಿ ಆಚರಿಸಲು ಅಭಿಮಾನಿ ಬಳಗದ ಅಧ್ಯಕ್ಷರಾಗಿರುವ ವಿನಯ ಜಕನೂರು ಮಾಡಿದರು ಗೋಕುಲ ರಸ್ತೆಯಲ್ಲಿರುವ ಶಿವಾಜಿ ಲೇಔಟ್ ನಲ್ಲಿ ಅಭಿಮಾನಿ ಬಳಗದಿಂದ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅಭಿಮಾನಿ ಬಳಗದಿಂದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅನಿಲಕುಮಾರ್ ಪಾಟೀಲ್ ಅವರಿಗೆ ವೇದಿಕೆಯ ಮೇಲೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ ಅಭಿಮಾನಿಗಳು ಶುಭಾಶಯಗಳನ್ನು ಹೇಳಿದರು
ಅಭಿಮಾನಿ ಬಳಗದ ಅಧ್ಯಕ್ಷರಾಗಿರುವ ವಿನಯ ಜಕನೂರು,,ಶಾನು ಖಾನ್,ಆಸೀಫ್ ಚಳ್ಳಮರದ, ಕಾರ್ತಿಕ್ ವಿಜಯ್,ಮಲ್ಲೇಶ ನಾಯಕ,ಪ್ರಜ್ವಲ್ ಮಧುಸಾಗರ್,ಮಲ್ಲಿಕಾರ್ಜುನ ಜಕನೂರು,ಸೇರಿದಂತೆ ಹಲವರು ಉಪಸ್ಥಿತದ್ದರು
CM ರೇಸ್ ನಲ್ಲಿರುವ ಡಿಕೆಶಿ ಪೊಟೊ ಮಿಸ್ಸಿಂಗ್
ಅಭಿಮಾನಿ ಬಳಗದಿಂದ ಆಯೋಜನೆ ಮಾಡಲಾಗಿದ್ದ ಈ ಒಂದು ಕಾರ್ಯಕ್ರಮದ ಬ್ಯಾನರ್ ನಲ್ಕಿ ಕಾಂಗ್ರೆಸ್ ಪಕ್ಷದ ಪ್ರಮುಖರ ಪೊಟೊ ಗಳನ್ನು ಹಾಕಲಾಗಿತ್ತು ಆದರೆ ಉಪ ಮುಖ್ಯಮಂತ್ರಿ ಸಧ್ಯ ಮುಖ್ಯಮಂತ್ರಿ ಕುರ್ಚಿ ರೇಸ್ ನಲ್ಲಿರುವ ಡಿಕೆಶಿ ಪೊಟೊ ಕಂಡು ಬರಲಿಲ್ಲ ಈ ಒಂದು ಕುರಿತು ಅಭಿಮಾನಿ ಬಳಗದ ಅಧ್ಯಕ್ಷ ವಿನಯ ಅವರನ್ನು ಪ್ರಶ್ನೆ ಮಾಡಿದಾಗ ಇದೊಂದು ಅನಿಲ ಕುಮಾರ್ ಪಾಟೀಲ್ ಅವರ ಅಭಿಮಾನಿ ಬಳಗದ ಖಾಸಗಿ ಕಾರ್ಯಕ್ರಮ ಎಂದರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..






















