ಮೂಡಿಗೆರೆ –
ತಾಲೂಕಿನ ಬಾಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 1ರಿಂದ 7ನೇ ತರಗತಿ ವರೆಗೆ ಒಟ್ಟು 30ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಈ ಶಾಲೆಯಲ್ಲಿ ಕೇವಲ ಒಬ್ಬ ಶಿಕ್ಷಕರಷ್ಟೇ ಇದ್ದು, ಅವರು ಸಹ ಅನಾರೋಗ್ಯದ ಕಾರಣದಿಂದ ನಿಯಮಿತವಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ
ಮಕ್ಕಳಿದ್ದರೂ ಪಾಠ ಮಾಡಲು ಶಿಕ್ಷಕರೇ ಇಲ್ಲದ ಸ್ಥಿತಿ, ಸಮೃದ್ಧ ಕಟ್ಟಡವಿದ್ದರೂ ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ ಎಂಬುದು ಪೋಷಕರ ಆಕ್ರೋಶವಾಗಿದೆ. ಗ್ರಾಮಸ್ಥರು ಹಲವು ಸಲ ಬಿಇಓಗೆ ವಿಷಯ ತಿಳಿಸಿ ದರೂ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರದ ನಿರ್ಲಕ್ಷ್ಯವನ್ನೇ ಈ ಪ್ರತಿಭಟನೆಯ ಮೂಲಕ ಪ್ರಶ್ನಿಸಿ ದ್ದಾರೆ. “ಇನ್ನು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸ್ತೀವಿ” ಎಂದು ಪೋಷಕರು ಟಿಸಿ ನೀಡುವಂತೆ ಶಾಲಾ ಆಡಳಿತವನ್ನು ಕೇಳಿರುವುದು ಗಂಭೀರ ಗಮನಾರ್ಹ.
ಸರ್ಕಾರದ ನಿರ್ಲಕ್ಷ್ಯದಿಂದ ಸರ್ಕಾರಿ ಶಾಲೆಯೇ ಮುಚ್ಚುವ ಪರಿಸ್ಥಿತಿ ಬಂದರೂ ಯಾರಿಗೂ ಪರವಾ ಗಿಲ್ಲ!ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ಸಂತೆ ನ್ಯೂಸ್ ಮೂಡಿಗೆರೆ…..





















